ತುಪ್ಪದ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ

0

ಸ್ಯಾಂಡಲ್ ವುಡ್ ಖ್ಯಾತನಟಿ ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ. ರೂಪದರ್ಶಿಯಾಗಿದ್ದ ರಾಗಿಣಿ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ರಾಗಿಣಿ ನಂತರ ಚಿತ್ರರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ವೀರ ಮದಕರಿ ಸಿನಿಮಾದ ಜುಮ್ ಜುಮ್ ಮಾಯಾ ಹಾಡಿಗೆ ಹೆಜ್ಜೆ ಹಾಕೋ ಮೂಲಕ ಚಿತ್ರರಸಿಕರ ಮನಗೆದ್ದ ರಾಗಿಣಿ ನಂತರ ಕೆಂಪೇಗೌಡ ಸಿನಿಮಾದಲ್ಲಿಯೂ ಸುದೀಪ್ ಜೊತೆ ಕಾಣಿಸಿಕೊಂಡಿದ್ದರು.

ಶಿವರಾಜ್ ಕುಮಾರ್ ಜೊತೆ ಶಿವ, ಉಪೇಂದ್ರ ಜೊತೆಗೆ ಅರಕ್ಷಕ, ಲೂಸ್ ಮಾದ ಜೊತೆಗೆ ಬಂಗಾರಿ, ಯೋಗರಾಜ್ ಭಟ್ಟರ ಪರಪಂಚ ಸಿನಿಮಾದಲ್ಲಿ ನಟಿಸಿದ್ದಾರೆ.

ಶರಣ್ ಜೊತೆಗೆ ಅಧ್ಯಕ್ಷ ಹಾಗೂ ವಿಕ್ಟರಿ ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ರಾಗಿಣಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಗಿಣಿ ಐಪಿಎಸ್, ರಣಚಂಡಿ, ನಮಸ್ತೆ ಮೇಡಮ್, ಎಮ್ ಎಮ್ ಸಿಎಚ್, ದಿ ಟೆರರಿಸ್ಟ್ ಸಿನಿಮಾಗಳು ಒಳ್ಳೆಯ ಹೆಸರು ತಂದುಕೊಟ್ಟಿವೆ.

ತುಪ್ಪದ ಹುಡುಗಿ ರಾಗಿಣಿ ಸಿನಿಮಾ ರಂಗಕ್ಕೆ ಕಾಲಿಟ್ಟು 10 ವರ್ಷಗಳೇ ಕಳೆದು ಹೋಗಿದೆ. ಈ ನಡುವಲ್ಲೇ ರಾಗಿಣಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ಈ ಪೈಕಿ ತಲಾ ಒಂದೊಂದು ಮಲೆಯಾಳಂ, ಹಿಂದಿ ತಮಿಳು ಹಾಗೂ ತೆಲುಗು ಸಿನಿಮಾ ಸೇರಿಕೊಂಡಿದೆ. ಬಾಲಿವುಡ್ ನಲ್ಲಿ ‘ಆರ್ ರಾಜಕುಮಾರ್’ ಸಿನಿಮಾದ ಒಂದು ಹಾಡಿಗೆ ರಾಗಿಣಿ ಹೆಜ್ಜೆ ಹಾಕಿದ್ದರು.

ರಾಗಿಣಿ 1990 ರಲ್ಲಿ ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ರಾಗಿಣಿ ಮಾಡೆಲಿಂಗ್ ನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಹೈದರಾಬಾದಿನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್-ಅಫ್ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದ ರಾಣಿಗಿ ಮುಂಬೈನಲ್ಲಿ ನಡೆದದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಕಿಚ್ಚ ಸುದೀಪ್‌ರ ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಕನ್ನಡದ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಶಿವಣ್ಣ ಜೊತೆ ನಟಿಸಿದಶಿವ’ ಚಿತ್ರಕ್ಕೆ ಸೈಮಾ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿರುವ ರಾಗಿಣಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ.

Leave A Reply

Your email address will not be published.