ಭಾನುವಾರವೇ ಲಾಕ್ ಡೌನ್ ಕರ್ಪ್ಯೂ ಯಾಕೆ ಆಚರಿಸಲಾಗುತ್ತೆ ಗೊತ್ತಾ ?

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ವಿರುದ್ದ ಬೃಹತ್ ಹೋರಾಟ ನಡೆಯುತ್ತಿದೆ. ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿಯಲ್ಲಿದೆ. ಆದ್ರೀಗ ಕರ್ನಾಟಕ ಸರಕಾರ ಪ್ರತೀ ಭಾನುವಾರ ಕಡ್ಡಾಯ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಆಚರಿಸುತ್ತಿದೆ. ಅಷ್ಟಕ್ಕೂ ಭಾನುವಾರವೇ ಯಾಕೆ ಕಟ್ಟುನಿಟ್ಟಿನ ಲಾಕ್ ಡೌನ್ ಆಚರಿಸಲಾಗುತ್ತದೆ ಅನ್ನೋದು ನಿಮಗೆ ಗೊತ್ತಾ ?

ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿಯಲ್ಲಿದ್ದರೂ ಕೂಡ ಕರ್ನಾಟಕದಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗಿತ್ತು. ಅಲ್ಲದೇ ಬಹುತೇಕ ಕಾರ್ಯಚಟುವಟಿಕೆಗಳ ಆರಂಭಕ್ಕೆ ಅನುಮತಿಯನ್ನು ನೀಡಲಾಗಿದೆ. ಆದರೆ ಕೊರೊನಾ ಮುಗಿಯುವವರೆಗೂ ಪ್ರತೀ ಭಾನುವಾರವೂ ಕರ್ಪ್ಯೂ ಮಾದರಿಯಲ್ಲಿ ಕಡ್ಡಾಯ ಲಾಕ್ ಡೌನ್ ಆಚರಿಸುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ವಾರದ ಎಲ್ಲಾ ದಿನವೂ ಸಹಜ ರೀತಿಯಲ್ಲಿದ್ದು, ಭಾನುವಾರವೇ ಯಾಕೆ ಕಠಿಣ ಲಾಕ್ ಡೌನ್ ಆಚರಿಸಬೇಕೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಆದರೆ ಭಾನುವಾರದ ಕಡ್ಡಾಯ ಕರ್ಪ್ಯೂ ಲಾಕ್ ಡೌನ್ ಹಿಂದೆ ನಿಖರ ಕಾರಣವೂ ಇದೆ.

ದೇಶದಾದ್ಯಂತ ಎರಡು ತಿಂಗಳ ಕಾಲ ಕಡ್ಡಾಯ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ರಾಜ ಡೆಡ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಮಾತ್ರವೇ ಜನ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೂ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2000ದ ಗಡಿ ದಾಟಿದೆ. ಕಳೆದೊಂದು ವಾರದಿಂದಲೂ ನಿತ್ಯವೂ ಕೊರೊನಾ ಪೀಡಿತರ ಸಂಖ್ಯೆ ಶತಕ ಬಾರಿಸುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಒಂದಿಷ್ಟು ಮಾರ್ಗಸೂಚಿಯ ಜೊತೆಯಲ್ಲಿಯೇ ಜನಜೀವನ ಸಾಗುತ್ತಿದೆ. ಆದ್ರೆ ಭಾನುವಾರ ಕೆಲಸ ಕಾರ್ಯಗಳಿಗೆ ಬಿಡುವು ಇರೋದ್ರಿಂದಾಗಿ ಸಾರ್ವಜನಿಕ ಸ್ಥಳಕ್ಕೆ ಜನರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ವಾಹನ ಸಂಚಾರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿಯೇ ಜನರು ಸಾಮಾಜಿಕ ಅಂತರವನ್ನು ಮರೆಯುವ ಭೀತಿಯಿದ್ದು, ಇದರಿಂದಾಗಿಯೇ ಕೊರೊನಾ ಹರಡುವ ಸಾಧ್ಯತೆಯೂ ಹೆಚ್ಚಾಗೋ ಸಾಧ್ಯತೆಯಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿಯೇ ರಾಜ್ಯ ಸರಕಾರ ಭಾನುವಾರವನ್ನು ಕಂಟ್ರೋಲ್ ಮಾಡಿದ್ರೆ ಕೊರೊನಾ ಸೋಂಕಿಗೆ ಒಂದಿಷ್ಟು ನಿಯಂತ್ರಣ ಹೇರಬಹುದು ಅನ್ನೋದು ಸರಕಾರ ಲೆಕ್ಕಾಚಾರ. ಹೀಗಾಗಿಯೇ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಪ್ರತೀ ಭಾನುವಾರೂ ಕಡ್ಡಾಯವಾಗಿ ಲಾಕ್ ಡೌನ್ ಆಚರಿಸಲಾಗುತ್ತಿದೆ. ಆದರೆ ಸರಕಾರ ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕೊಡುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

Leave A Reply

Your email address will not be published.