Sangeetha Sringeri : ಸಖತ್‌ ಹಾಟ್‌, ಗ್ಲಾಮರಸ್‌ ಆಗಿ ಕಾಣಿಸಿಕೊಂಡ ಚಾರ್ಲಿ ಬ್ಯೂಟಿ ನಟಿ ಸಂಗೀತಾ ಶೃಂಗೇರಿ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಸೀರಿಯಲ್‌ ಮೂಲಕ ನಟಿ ಸಂಗೀತಾ ಶೃಂಗೇರಿ (Sangeetha Sringeri) ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಕಾಣಿಸಿಕೊಂಡಿರುವ ನಟಿ ಸಂಗೀತ ಕರ್ನಾಟಕ ಜನರ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಕಳೆದ ವರ್ಷ ತೆರೆಕಂಡ ಚಾರ್ಲಿ 777 ಅಭಿನಯಿಸುವ ಮೂಲಕ ಸಿನಿಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸದ್ಯ ನಟಿ ಸಂಗೀತ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋದಿಂದಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಆಗಿದೆ.

ನಟಿ ಸಂಗೀತಾ ಶೃಂಗೇರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಸ್‌ಗಳಲ್ಲಿ, ಬ್ಲಾಕ್‌ ಕಲರ್‌ ಮಾರ್ಡನ್‌ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಹಾಗೂ ಗ್ಲಾಮರಸ್‌ ಆಗಿ ವಿವಿಧ ಭಂಗಿಗಳಲ್ಲಿ ಫೋಸ್‌ ನೀಡಿದ್ದಾರೆ. ನಟಿ ಸಂಗೀತಾ ಶೃಂಗೇರಿ ಹಂಚಿಕೊಂಡ ಫೋಟೋಸ್‌ಗಳಿಗೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್‌ ಹಾಗೂ ಲೈಕ್‌ಗಳನ್ನು ಒತ್ತಿದ್ದಾರೆ.

ನಟಿ ಸಂಗೀತಾ ಅವರು ಮೂಲತಃ ಶೃಂಗೇರಿಯವರಾಗಿದ್ದು, ತಂದೆ ಶಿವ ಕುಮಾರ್‌ ಕೆ ಭಾರತೀಯ ವಾಯುಪಡೆಯಲ್ಲಿ ಮಾಜಿ ಸೈನಿಕರಾಗಿದ್ದರು. ತಾಯಿ ಭವಾನಿ ಶಿವ ಕುಮಾರ್‌ ಗಿಡಮೂಲಿಕೆಗಲ ಕ್ಷೇಮ ತರಬೇತುದಾರರಾಗಿದ್ದಾರೆ. ಇನ್ನು ನಟಿ ಸಂಗೀತಾ ಶೃಂಗೇರಿ ಅವರು 2014 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ 10ನೇ ಸ್ಥಾನ ಪಡೆದರು ಮತ್ತು ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : The Kerala Story OTT : ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡಲಿದೆ ದಿ ಕೇರಳ ಸ್ಟೋರಿ ಸಿನಿಮಾ

ಇದನ್ನೂ ಓದಿ : Korean singer choi sung bong : 33 ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ಪಾಪ್ ತಾರೆ ಚೋಯ್ ಸುಂಗ್-ಬಾಂಗ್

ನಟಿ ಸಂಗೀತಾ ಶೃಂಗೇರಿ ಹರ ಹರ ಮಹಾದೇವ ಧಾರಾವಾಹಿ ನಂತರ ಸುದೀರ್ಘ ಬ್ರೇಕ್‌ ತೆಗೆದುಕೊಂಡ ಬಳಿಕ ಪರಂವಾ ಸ್ಟುಡಿಯೋಸ್‌ ಮೂಲಕ ಚಾರ್ಲಿ 777 ಸಿನಿಮಾದಲ್ಲಿ ನಟ ರಕ್ಷಿತ್‌ ಜೊತೆ ಅಭಿನಯಿಸಿ, ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಅದಾದ ಬಳಿಕ ನಟ ಡಾರ್ಲಿಂಗ್‌ ಕೃಷ್ಣ ಅವರೊಂದಿಗೆ ಲಕ್ಕಿಮ್ಯಾನ್‌ ಹಾಗೂ ಪಂಪಾ ಪಾಂಚಳ್ಳಿ ಪರಶಿವಮೂರ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Sangeetha Sringeri : Charley Beauty Actress Sangeetha Sringeri Looks Hot, Glamorous

Comments are closed.