ಬಣ್ಣದ ಲೋಕಕ್ಕೆ ಟೆನ್ನಿಸ್ ತಾರೆ…! ಮೂಗುತಿ ಸುಂದ್ರಿ ಕೊಟ್ರು ಸ್ವೀಟ್ ನ್ಯೂಸ್….!

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಟೆನ್ನಿಸ್ ರಾಕೆಟ್ ಹಿಡಿದು ಅಂಗಳಕ್ಕೆ ಇಳಿದ್ರೆ ಎಂತವರಾದ್ರೂ ಒಂದಷ್ಟು ಹೊತ್ತು ಟಿವಿ ಮುಂದೇ ಕೂರಲೇ ಬೇಕು. ಅಂತಹ ಮೋಹಕ ಹಾಗೂ ಮಾದಕ ಆಟಕ್ಕೆ ಹೆಸರಾದ ಸಾನಿಯಾ ಮಿರ್ಜಾ ಇನ್ಮುಂದೆ ಬಣ್ಣದ ಲೋಕದಲ್ಲಿ ಕಾಣ ಸಿಗಲಿದ್ದಾರೆ. ಯಾಕೆಂದರೇ ಸಾನಿಯಾ ಮಿರ್ಜಾ ಟೆನ್ನಿಸ್ ಅಂಗಳದಿಂದ ಕ್ಯಾಮರಾಮುಂದೇ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ.

ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬಣ್ಣ ಹಚ್ಚುತ್ತಿದ್ದಾರೆ. ಯಾವ ಚಿತ್ರಕ್ಕೆ, ಯಾವ ಭಾಷೆಯಲ್ಲಿ, ಯಾವಾಗ ರಿಲೀಸ್ ಎಂಬೆಂಲ್ಲ ಪ್ರಶ್ನೆಗಳು ಕಾಡ್ತಿದ್ಯಾ? ಸಾನಿಯಾ ಬಣ್ಣ ಹಚ್ಚುತ್ತಿರೋದು ಸಿನಿಮಾಕ್ಕಲ್ಲ. ಬದಲಾಗಿ ವೆಬ್ ಸಿರೀಸ್ ಗೆ. ಭಾರತವನ್ನು ಅತಿಯಾಗಿ ಬಾಧಿಸುತ್ತಿರುವ ಕ್ಷಯ ರೋಗದ ವಿರುದ್ಧದ ಜಾಗೃತಿ ಮೂಡಿಸುವ ವೆಬ್ ಸೀರಿಸ್ ಗಾಗಿ ನಟನೆಗೆ ಜೈ ಎಂದಿದ್ದಾರೆ.

ಸಾನಿಯಾ ನಟಿಸುತ್ತಿರುವ ವೆಬ್ ಸೀರಿಸ್ ಕ್ಷಯ ರೋಗದ ವಿರುದ್ಧ ಜಾಗೃತಿ ಮೂಡಿಸುವ ಕಥಾಹಂದರ ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ, ಭಾರತವನ್ನು ಕ್ಷಯ ರೋಗ ಅತಿಯಾಗಿ ಬಾಧಿಸುತ್ತಿದೆ. 30 ವರ್ಷದೊಳಗಿನವರೇ ಹೆಚ್ಚು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ರೋಗ ನಿಯಂತ್ರಿಸಲು, ಇದರ ಕುರಿತು ಇರುವ ತಪ್ಪು ತಿಳುವಳಿಕೆ ಹೋಗಲಾಡಿಸುವ ಪ್ರಯತ್ನಿಸುವ ಅಗತ್ಯವಿದೆ ಎಂದಿದ್ದಾರೆ.

ಕ್ಷಯ ರೋಗದ ಅಪಾಯ ಕೊರೋನಾ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗಿದೆ. ವೆಬ್ ಸೀರಿಸ್ ನಿಂದ  ಕ್ಷಯ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯ. ಇದೇ ವೆಬ್ ಸೀರಿಸ್ ನಲ್ಲಿ ನಟಿಸಲು ಪ್ರೇರಣೆ ನೀಡಿತು ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ

ಸಾನಿಯಾ ಮಿರ್ಜಾ ನಟಿಸುತ್ತಿರುವ  ಈ ವೆಬ್ ಸೀರಿಸ್ 5 ಎಪಿಸೋಡ್ ಗಳನ್ನು ಹೊಂದಿದ್ದು, ಎಂಟಿವಿ ಇಂಡಿಯಾ, ಎಂಟಿವಿ ನಿಶೇಧ್ ನ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರಗೊಳ್ಳಲಿದೆ. ನವೆಂಬರ್ ಅಂತ್ಯಕ್ಕೆ ಸೀರಿಸ್ ಗಳ ಪ್ರಸಾರ ಆರಂಭವಾಗಲಿದೆ.

Comments are closed.