ಕೊರೋನಾ ವಾರಿಯರ್ ಗಳಿಗೆ ಸಿಹಿಸುದ್ದಿ…! ಮಕ್ಕಳಿಗೆ 5 ಎಂಬಿಬಿಎಸ್ ಸೀಟು ಮೀಸಲು..!!

ನವದೆಹಲಿ: ಕೊರೋನಾ ಸೋಂಕಿತರ ಸೇವೆ ಮಾಡುತ್ತಲೇ ಸಾವನ್ನಪ್ಪಿದ ಕೊರೋನಾ ವಾರಿಯರ್ ಗಳ ಕುಟುಂಬಕ್ಕೆ ಹಾಗೂ ಕೊರೋನಾ ವಾರಿಯರ್ ಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಕೊರೋನಾ ಸೋಂಕಿತರ ಆರೈಕೆ ವೇಳೆ ಸಾವನ್ನಪ್ಪಿದ ಕೊವೀಡ ವಾರಿಯರ್ ಗಳ ಮಕ್ಕಳಿಗೆ ಎಂಬಿಬಿಎಸ್ ಸೀಟುಗಳನ್ನು ಮೀಸಲಿರಿಸಲು ನಿರ್ಧರಿಸಿದೆ.

ಕೊರೋನಾ ವಾರಿಯರ್ ಗಳ ಮಕ್ಕಳಿಗಾಗಿ 2020 -21 ಶೈಕ್ಷಣಿಕ ಸಾಲಿನ ಎಂಬಿಬಿಎಸ್ ಶಿಕ್ಷಣ ಪ್ರವೇಶದ ವೇಳೆ ಸೆಂಟ್ರಲ್ ಪೂಲ್ ಯೋಜನೆಯಡಿ ಐದು ಸೀಟುಗಳನ್ನು ಮೀಸಲಿರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೊರೋನಾ ನಿಯಂತ್ರಣದ ವೇಳೆ ವಾರಿಯರ್ ಗಳು ಸಲ್ಲಿಸಿದ ಸೇವೆಯನ್ನು ಸದಾ ಸ್ಮರಿಸುವ ಉದ್ದೇಶದಿಂದ  ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದ್ದಾರೆ.

ಈ ಸೀಟುಗಳ ಹಂಚಿಕೆಗಾಗಿ ವಿದ್ಯಾರ್ಥಿಗಳ ಆಯ್ಕೆ ಹಾಗೂ ನಾಮನಿರ್ದೇಶನಕ್ಕಾಗಿ ರಚಿಸಿರುವ ಗೈಡ್ ಲೈನ್ಸ್ ಗಳಲ್ಲಿ ಕೋವಿಡ್ ವಾರಿಯರ್ ವಾರ್ಡ್ ಎಂಬ ಪ್ರತ್ಯೇಕ ವಿಭಾಗವನ್ನೇ ಆರಂಭಿಸಲಾಗಿದೆ. ನ್ಯಾಶನಲ್ ಎಕ್ಸಾಂ ಸೆಂಟರ್ ನಡೆಸುವ ಎನ್ಇಇಟಿ-2020 ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ರ್ಯಾಂಕ್ ಆಧಾರದ ಮೇಲೆ ಆನ್ ಲೈನ್ ಕೌನ್ಸಲಿಂಗ್ ಮೂಲಕ ವೈದ್ಯಕೀಯ ಆಯ್ಕೆ ಮಂಡಳಿ ಸಮಿತಿ  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದೆ.

ಈಗಾಗಲೇ ಕೇಂದ್ರ ಸರ್ಕಾರ ಕೋವಿಡ್ ವಾರಿಯರ್ ಗಳಿಗೆ 50 ಲಕ್ಷ ರೂಪಾಯಿ ಮೌಲ್ಯದ ವಿಮಾ ಸೌಲಭ್ಯವನ್ನು ಘೋಷಿಸಿದ್ದು, ಇದಕ್ಕೆ ಎಲ್ಲ ರಾಜ್ಯ ಹಾಗೂ ಕೇಂದ್ರಾಢಳಿತ ಪ್ರದೇಶದ ಕೊರೋನಾ ವಾರಿಯರ್ ಗಳು ಒಳಪಡಲಿದ್ದಾರೆ.  

Comments are closed.