Shah Rukh Khan: ಶಾರುಖ್ ಖಾನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ!

ಶಾರುಖ್ ಖಾನ್ (Shah Rukh Khan) ಪಠಾಣ್ ಸಿನಿಮಾದ ಕಡೆ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ತಮಿಳಿನ ಅಟ್ಳಿಕುಮಾರ್ ಅವರ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾದ ನಿರ್ಮಾಪಕರು ಶಾರುಖ್ ಖಾನ್ ಆಗಿದ್ದಾರೆ. ಒಂದು ಮೂಲದ ಪ್ರಕಾರ ಅಟ್ಳಿಕುಮಾರ್ ನಿರ್ದೇಶನದ ಹೆಸರಿಡದ ಚಿತ್ರದ ಬಜೆಟ್ಟೇ 200 ಕೋಟಿ ಎನ್ನಲಾಗುತ್ತಿದೆ. ಅದೂ, ಶಾರುಖ್ ಖಾನ್, ನಟಿ ನಯನತಾರ ಹಾಗೂ ನಿರ್ದೇಶಕರ ಸಂಭಾವನೆ ಹೊರತಪಡಿಸಿ. ಎಲ್ಲವೂ ಸೇರಿಸಿದರೆ ಕನಿಷ್ಠ 300 ಕೋಟಿ ಬಜೆಟ್ ಆಗುವ ನಿರೀಕ್ಷೆ ಇದೆ.

ಎಸ್ ಆರ್ ಕೆ ಪ್ರೊಡಕ್ಷನ್ ನಲ್ಲಿ ತಯಾರಾಗುವ ಸಿನಿಮಾಗಳಿಗೆ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಹೀಗಾಗಿ, ಬಜೆಟ್, ಪ್ರೊಡಕ್ಷನ್ ನಲ್ಲಿ ಯಾವುದೇ ರಾಜಿ ಇರುವುದಿಲ್ಲ. ಅಟ್ಳಿ ಕುಮಾರ್ ನಿರ್ದೇಶನದ ಚಿತ್ರಕ್ಕೂ ಕೂಡ ಇಂಥಹದ್ದೇ ಸ್ಥಾನ ಸಿಗಲಿದೆ. ಹೀಗಾಗಿ, ಇದೂ ಕೂಡ ಎಸ್ ಆರ್ ಕೆ ಪ್ರೊಡಕ್ಷನ್ ನ ಅತಿ ದೊಡ್ಡ ಬಜೆಟ್ ಸಿನಿಮಾವಾಗಲಿದೆ ಎನ್ನುತ್ತದೆ ಬಾಲಿವುಡ್ ಮೂಲಗಳು.

ಇದನ್ನೂ ಓದಿ : Aryan Khan : ನಿರ್ದೇಶನದತ್ತ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್!

ಪಠಾಣ್ ಸಿನಿಮಾವನ್ನು ಶಾರುಖ್ ಖಾನ್ ಮತ್ತು ಗೌರಿಖಾನ್ ಅವರ ರೆಡ್ ಚಿಲ್ಲಿ ಎಂಟರ್ ಪ್ರೈಸಸ್ ಕಂಪೆನಿ ಹೆಸರಲ್ಲಿ ನಿರ್ಮಾಣ ಮಾಡುತ್ತಿದ್ದು, ಇದರ ಬಜೆಟ್ ಕೂಡ 250 ಕೋಟಿ ಎಂದು ಅಂದಾಜಿಸಲಾಗಿದೆ.

ಪಠಾಣ್ ನಂತರದ ಅತಿ ಹೆಚ್ಚು ಮೊತ್ತದ ಸಿನಿಮಾ ಅಟ್ಳಿ ಕುಮಾರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರವಾಗಿದೆ. ಈಗಾಗಲೇ ಅಟ್ಳಿ ಕುಮಾರ್ ಜೂನ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಪಠಾಣ್ ಸಿನಿಮಾದ ನಂತರ ಶಾರುಖ್ ಖಾನ್ ಸ್ವಲ್ಪ ದಿನಗಳ ಕಾಲ ವಿರಾಮ ಪಡೆದು ಅಟ್ಳಿ ಕುಮಾರ್ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾ 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದಾದ ನಂತರ, 180 ದಿನಗಳ ಕಾಲದ ಸುದೀರ್ಘ ಶೂಟಿಂಗ್ ಷೆಡ್ಯುಲ್ ಹೊಂದಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಸಿನಿಮಾದಲ್ಲೂ ಕೂಡ ಶಾರುಖ್ ಖಾನ್ ನಟಿಸಲಿದ್ದಾರೆ. ಇದು ಅಟ್ಳಿ ಕುಮಾರ್ ಸಿನಿಮಾದ ನಂತರ ಆರಂಭವಾಗುವ ನಿರೀಕ್ಷೆ ಇದೆಯಾದರೂ, ಅಟ್ಳಿ ಷೆಡ್ಯುಲ್ ಪ್ರಕಾರ ಶಾರುಖ್ ಖಾನ್ ಎರಡೂ ಸಿನಿಮಾದಲ್ಲೂ ನಟಿಸಲೂಬಹುದು ಎನ್ನಲಾಗುತ್ತಿದೆ. ಒಟ್ಟಾರೆ, ಜೀರೋ ಸಿನಿಮಾದ ಸೋಲಿನ ನಂತರ ನಾಲ್ಕು ವರ್ಷಗಳ ಕಾಲ ಶಾರುಖ್ ಖಾನ್ ಅವರ ಯಾವ ಸಿನಿಮಾ ಕೂಡ ಬಿಡುಗಡೆಯಾಗಿರಲಿಲ್ಲ. ಈಗ ಒಟ್ಟೊಟ್ಟಿಗೆ ಸೆಟ್ಟೇರುತ್ತಿದೆ.

ಇದನ್ನೂ ಓದಿ : KGF Running Successfully: ಬಾಲಿವುಡ್ ನಿದ್ದೆಗೆಡಿಸಿದ ಯಶ್! ಕೆಜಿಎಫ್ ಹಿಂದಿ ಪ್ರದೇಶಗಳಲ್ಲೂ ನಾಗಾಲೋಟ

(Shah Rukh Khan’s eyes on another big budget film)

Comments are closed.