Shah Rukh Khan – Yash : ಬಾಲಿವುಡ್‌ ಸ್ಟಾರ್‌ ನಟನಿಂದ ಯಶ್‌ಗೆ ಶಹಬ್ಬಾಸ್‌ಗಿರಿ : ಇದಕ್ಕಿಂತ ಇನ್ನೇನು ಬೇಕು ಎಂದ ಫ್ಯಾನ್ಸ್‌

ಸ್ಯಾಂಡಲ್‌ವುಡ್‌ನ ರಾಕಿ ಭಾಯ್‌ ಯಶ್‌ನಿಂದಾಗಿ ಭಾರತೀಯ ಸಿನಿರಂಗ ಕನ್ನಡ ಸಿನಿರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಹಾಗಾಗಿ ಯಶ್‌ ಮುಂದಿನ ಸಿನಿಮಾದ ಬಗ್ಗೆ ಬಾಲಿವುಡ್‌ ಮಂದಿಗೂ ಕುತೂಹಲ (Shah Rukh Khan – Yash) ಇದೆ. ಅದರಂತೆ ಯಶ್‌ ಮತ್ತೊಂಡು ಹಾಲಿವುಡ್‌ ರೇಂಜ್‌ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಟಾರ್‌ ನಟರಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ. ಆದರೆ ಅಂತಹ ಸ್ಟಾರ್‌ ನಟರಿಗೆ ಇಷ್ಟ ಅಗುವಂತಹ ಸೂಪರ್‌ ಸ್ಟಾರ್‌ಗಳು ಕೂಡ ಇರುತ್ತಾರೆ. ತಮ್ಮ ಸ್ಟಾರ್‌ ನಟರ ಸಿನಿಮಾಗಳನ್ನು ನೋಡಿಕೊಂಡು ಸಿನಿಮಾಕ್ಕೆ ಬಂದವರು ಇರುತ್ತಾರೆ. ಕೆಎಸ್‌ಆರ್‌ಟಿ ಬಸ್‌ ಡ್ರೈವರ್‌ ಮಗನಾಗಿದ್ದ ನವೀನ್‌ ಕುಮಾರ್‌ ಗೌಡ ಇದೀಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಕೆಜಿಎಫ್‌ ರಾಕಿ ಭಾಯ್‌ ನೋಡಿ ಬಾಲಿವುಡ್‌ ಸ್ಟಾರ್‌ ನಟರೇ ಬಹುಪರಾಕ್‌ ಎಂದಿದ್ದಾರೆ. ಈ ಹಿಂದೆ ಯಶ್‌ ಸಾಕಷ್ಟು ಬಾರಿ ತಮ್ಮ ನೆಚ್ಚಿನ ನಟ ಶಾರುಖ್‌ ಖಾನ್‌ ಎಂದು ಹೇಳಿಕೊಂಡಿದ್ದಾರೆ. ನಟ ಶಾರುಖ್‌ ಖಾನ್‌ ನನಗೆ ದೊಡ್ಡ ಇನ್‌ಸ್ಪಿರೇಷನ್‌ ಎಂದು ಯಶ್‌ ಒಂದಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಅದೇ ನೆಚ್ಚಿನ ನಟ ಶಾರುಖ್‌ ಖಾನ್ ಯಶ್‌ನ್ನು ಮೆಚ್ಚಿ ಕೊಂಡಾಡಿದ್ದಾರೆ.

ಒಂದು ಕಡೆ “ಪಠಾಣ್‌” ಸಿನಿಮಾದ “ಬೇಷರಂ ರಂಗ್‌” ಸಾಂಗದ ವಿವಾದ ತಾರಕಕ್ಕೇರಿದೆ. ಇದರ ನಡುವೆ ಕಿಂಗ್‌ ಖಾನ್‌ ಅಭಿಮಾನಿಗಳ ಜೊತೆ ಟ್ವಿಟ್ಟರ್‌ನಲ್ಲಿ ಸಂವಾದ ನಡೆಸಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲಿ ಅಭಿಮಾನಿಯೊಬ್ಬ “ಸರ್‌ ಕೆಜಿಎಫ್‌ 2 ಸಿನಿಮಾ ನೋಡಿದ್ದೀರಾ ? ಯಶ್‌ ಬಗ್ಗೆ ಒಂದು ಪದದಲ್ಲಿ ಹೇಳಿ” ಎಂದು ಕೇಳಿದ್ದಾನೆ. ಅದಕ್ಕೆ ಕಿಂಗ್‌ ಖಾನ್‌ “ಯಶ್‌ ಈಸ್‌ ವಾಹ್‌” ಎಂದು ಕಾಮೆಂಟ್‌ ಮಾಡಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ನಾಲ್ಕು ವರ್ಷಗಳ ಹಿಂದೆ “ಕೆಜಿಎಫ್‌” ಸಿನಿಮಾ ಬಿಡುಗಡೆ ದಿನವೇ ಶಾರುಖ್‌ ಖಾನ್‌ ನಟನೆಯ “ಜಿರೋ” ಸಿನಿಮಾ ಕೂಡ ತೆರೆ ಕಂಡಿತ್ತು. ಆದರೆ “ಕೆಜಿಎಫ್‌” ಸಿನಿಮಾದ ಎದುರು ಶಾರುಖ್‌ ಖಾನ್‌ ಸಿನಿಮಾ ಸೋತೂ ಸುಣ್ಣವಾಗಿತ್ತು. ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಬಾಲಿವುಡ್‌ ಪ್ರೇಕ್ಷಕರೇ ಯಶ್‌ನ್ನು ಮೆಚ್ಚಿ ಕೊಂಡಾಡಿದ್ದರು. ನಂತರ ನಾಲ್ಕು ವರ್ಷಗಳವರೆಗೂ ಶಾರುಖ್‌ ಖಾನ್‌ ಯಾವುದೇ ಸಿನಿಮಾ ಕೂಡ ಮಾಡಲಿಲ್ಲ.

ಇದನ್ನೂ ಓದಿ : Jodern: ಕೌಟುಂಬಿಕ ಕಥಾಹಂದರವನ್ನು ಒಳಗೊಂಡ “ಜೋಡರ್ನ್‌” ಚಿತ್ರದ ಟ್ರೇಲರ್‌ ಬಿಡುಗಡೆ

ಇದನ್ನೂ ಓದಿ : Malenadu Film Festival: ಮಲೆನಾಡಿನ ಸಿನಿಹಬ್ಬಕ್ಕೆ ಜೊತೆಯಾದ ಸತ್ಯ ಪಿಕ್ಚರ್ಸ್ ಹಾಗೂ ಅನ್ಲಾಕ್ ರಾಘವ ಚಿತ್ರತಂಡ

ಇದನ್ನೂ ಓದಿ : ನೋಯ್ಡಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಕಲಿ ಪಾಸ್‌ಪೋರ್ಟ್ ಪತ್ತೆ: ಮೂವರ ಬಂಧನ

ಇತ್ತೀಚೆಗಷ್ಟೇ ಯಶ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆದರೆ ನೇರವಾಗಿ ಸಿನಿಮಾದ ಕುರಿತು ಮಾತನಾಡದೇ ಸೈನ್ಸ್‌ ಫಿಕ್ಷನ್‌ ಅಥವಾ ಆಕ್ಷನ್‌ ಎಂಟರ್‌ಟೈನರ್‌ ಜಾನರ್‌ ಸಿನಿಮಾ ಮಾಡುವ ಒಲವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಮುಂದಿನ ಸಿನಿಮಾವನ್ನು ಹಾಲಿವುಡ್‌ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ. ಎಲ್ಲಾ ಪಕ್ಕಾ ಆದ ಮೇಲೆ ಸಿನಿಮಾ ಬಗ್ಗೆ ಮಾತನಾಡುತ್ತೇನೆ ಎಂದು ವಿವರಿಸಿದ್ದಾರೆ.

Shah Rukh Khan – Yash: From Bollywood star actor to Shahbazgiri to Yash: What more do fans want?

Comments are closed.