ವಿಶ್ವಕಪ್ 2023: ಭಾರತ Vs ಶ್ರೀಲಂಕಾ ಪಂದ್ಯ, ಏನ್‌ ಹೇಳುತ್ತೆ ಪಿಚ್ ರಿಪೋರ್ಟ್ ? ಇಲ್ಲಿದೆ ಹವಾಮಾನ ವರದಿ Playing XI

ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ಇಂದು ಶ್ರೀಲಂಕಾ ವಿರುದ್ದ ಪಂದ್ಯವನ್ನು ಆಡಲಿದೆ. ವಿಶ್ವಕಪ್‌ನಲ್ಲಿ ಭಾರತಕ್ಕೆ ಸೆಮಿಫೈನಲ್‌ ಸ್ಥಾನ ಅಧಿಕೃತವಾಗಲು ಇಂದಿನ ಪಂದ್ಯ ನಿರ್ಣಾಯಕವಾಗಿದೆ.

ಮುಂಬೈ : ವಿಶ್ವಕಪ್‌ 2023 (world Cup 2023)ರಲ್ಲಿ ಇಂದು ಭಾರತಕ್ಕೆ ಶ್ರೀಲಂಕಾ ತಂಡ ಸವಾಲು ಒಡ್ಡಲಿದೆ. ಈಗಾಗಲೇ ಗೆಲುವಿನ ಅಲೆಯಲ್ಲಿ ತೇಲಾಡುತ್ತಿರುವ ಭಾರತ ತಂಡ ಇಂದು ಗೆಲುವು ದಾಖಲಿಸಿದ್ರೆ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನ ಖಚಿತವಾಗಲಿದೆ. ಭಾರತ ಶ್ರೀಲಂಕಾ (India vs Srilanka) ಪಂದ್ಯದ ಪಿಚ್‌ ರಿಪೋರ್ಟ್‌ (Mumbai Pitch Report) ಹೇಗಿದೆ ? ಏನ್‌ ಹೇಳುತ್ತೆ ಹವಾಮಾನ ವರದಿ (mumbai Weather Report)  ಅನ್ನೋ ಮಾಹಿತಿ ಇಲ್ಲಿದೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶ್ವಕಪ್‌ನ 33ನೇ ಪಂದ್ಯ ನಡೆಯಲಿದೆ. ಭಾರತದ ವಿರುದ್ದ ಶ್ರೀಲಂಕಾ (IND vs SL) ತಂಡ ಸೆಣೆಸಾಡಲಿದೆ. ಇಂದಿನ ಪಂದ್ಯದಲ್ಲಿಯೂ ಭಾರತದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಆಡುವುದು ಅನುಮಾನ. ಹೀಗಾಗಿ ಸೂರ್ಯಕುಮಾರ್‌ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

India Vs Sri Lanka World Cup 2023 Best Playing XI, Pitch Report, Weather Report
Image Credit to Original Source

ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡ ವಿಶ್ವಕಪ್‌ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ 12 ಅಂಕಗಳನ್ನು ಪಡೆದುಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ 7 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ : Shaheen Shah Afridi : ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಸೃಷ್ಟಿಸಿದ ಶಾಹೀನ್‌ ಶಾ ಆಫ್ರಿದಿ

ರನ್‌ ರೇಟ್‌ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದೆ. ಒಂದೊಮ್ಮೆ ಶ್ರೀಲಂಕಾ ವಿರುದ್ದ ಭಾರತ ಗೆಲುವು ದಾಖಲಿಸಿದ್ರೆ ಭಾರತ ವಿಶ್ವಕಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಲಿದೆ. ಸದ್ಯ 6 ಪಂದ್ಯಗಳಲ್ಲಿ 2 ಪಂದ್ಯ ಸೋತಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದ್ರೆ, ನ್ಯೂಜಿಲೆಂಡ್‌ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಭಾರತ vs ಶ್ರೀಲಂಕಾ ಪಂದ್ಯ : ಹೇಗಿದೆ ಪಿಚ್‌ ರಿಪೋರ್ಟ್‌
ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್‌ ಪ್ರಮುಖವಾಗಿ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಇಂದಿನ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ನಡೆದ ಎಲ್ಲಾ ಪಂದ್ಯದಲ್ಲಿ ಗರಿಷ್ಠ ಸ್ಕೋರ್‌ ದಾಖಲಾಗಿದೆ. ಅದ್ರಲ್ಲೂ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಸದ್ಯ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದೆ.

ಅದ್ರಲ್ಲೂ ಭಾರತ ವಿರುದ್ದ2015ರಲ್ಲ ನಡೆದ ದಕ್ಷಿಣ ಆಪ್ರಿಕಾ ವಿರುದ್ದದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗೆ 438 ರನ್ ಗಳಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾ ತಂಡ ಇದೇ ಪಿಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ 399 ರನ್ ಗಳಿಸಿತ್ತು. ಒಂದೊಮ್ಮೆ ಭಾರತ ತಂಡ ಮೊದಲು ಬ್ಯಾಟಿಂಗ್‌ ನಡೆಸಿದ್ರೆ ಕನಿಷ್ಠ 300ಕ್ಕೂ ಅಧಿಕ ರನ್‌ ಗಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ

ವಿಶ್ವಕಪ್‌ನಲ್ಲಿ ಭಾಗಿಯಾಗಿರುವ ಶ್ರೀಲಂಕಾ ತಂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಅದ್ರಲ್ಲೂ ಪ್ರಮುಖವಾಗಿ ಶ್ರೀಲಂಕಾ ತಂಡದಲ್ಲಿ ಅನುಭವಿ ಬೌಲರ್‌ಗಳಿಲ್ಲ. ಬೂಮ್ರಾ, ಸೆಮಿ, ಸಿರಾಜ್‌ ದಾಳಿಗೆ ಶ್ರೀಲಂಕಾ ಆಟಗಾರರು ತತ್ತರಿಸುವುದು ಖಚಿತ. ಆದರೆ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಸೋಲಿನ ರುಚಿ ತೋರಿಸಿತ್ತು.

India Vs Sri Lanka World Cup 2023 Best Playing XI, Pitch Report, Weather Report
Image Credit to Original Source

ಆದರೆ ಭಾರತ ತಂಡದಲ್ಲಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದು ಭಾರತ ತಂಡಕ್ಕೆ ಪ್ಲಸ್‌ ಪಾಯಿಂಟ್.‌ ವಿಶ್ವಕಪ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಒಟ್ಟು 9 ಬಾರಿ ಮುಖಾಮುಖಿ ಆಗಿದ್ದು, ತಲಾ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. 1992ರ ವಿಶ್ವಕಪ್‌ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಇದನ್ನೂ ಓದಿ : ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಕೋಚ್‌ ? ವಿಶ್ವಕಪ್‌ ಫಲಿತಾಂಶದ ಮೇಲೆ ಬಿಸಿಸಿಐ ನಿರ್ಧರಿಸುತ್ತೆ ರಾಹುಲ್‌ ದ್ರಾವಿಡ್‌ ಭವಿಷ್ಯ

ಏಕದಿನ ಕ್ರಿಕೆಟ್‌ನಲ್ಲಿ ಈ ಎರಡೂ ತಂಡಗಳು ಒಟ್ಟು 167 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 98 ಪಂದ್ಯಗಳನ್ನು ಜಯಿಸಿರೆ, ಶ್ರೀಲಂಕಾ ತಂಡ ಕೇವಲ 57 ಪಂದ್ಯಗಳಲ್ಲಿ ಮಾತ್ರವೇ ಜಯಗಳಿಸಿದೆ. ಆದರೆ 11 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದ್ದು, 1 ಪಂದ್ಯ ರದ್ದಾಗಿತ್ತು. ಅದ್ರಲ್ಲೂ ತವರಿನಲ್ಲಿ ಭಾರತ 39 ಪಂದ್ಯಗಳನ್ನು ಗೆದ್ದಿದ್ದರೆ, ಲಂಕಾ ಕೇವಲ 28 ಪಂದ್ಯಗಳನ್ನು ಮಾತ್ರವೇ ಗೆದ್ದಿದೆ.

ಭಾರತ vs ಶ್ರೀಲಂಕಾ ಪಂದ್ಯ : ಹವಾಮಾನ ವರದಿ
ಮುಂಬೈನಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ವಿರುದ್ದದ ಪಂದ್ಯಕ್ಕೆ ಸದ್ಯ ಮಳೆಯ ಭೀತಿ ಇಲ್ಲ. ನವೆಂಬರ್ 2 ರಂದು ಮುಂಬೈನಲ್ಲಿ ತಾಪಮಾನವು ಸುಮಾರು 29.3 ಡಿಗ್ರಿ ಸೆಲ್ಸಿಯಸ್ ಮತ್ತು ತೇವಾಂಶವು ಶೇಕಡಾ 53 ರಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತ vs ಶ್ರೀಲಂಕಾ ವಿಶ್ವಕಪ್ 2023 : ಆಡುವ ಬಳಗ (IND Vs SL Playing XI )

ಭಾರತ ತಂಡ :

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಶ್ರೀಲಂಕಾ ತಂಡ :

ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ), ಸದಿರ ಸಮರವಿಕ್ರಮ‌ (ವಿಕೆಟ್‌ ಕೀಪರ್) , ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹಿಷ್ ಥಿಕ್ಷನ್, ಕಸುನ್ ರಜಿತಾ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ

India Vs Sri Lanka World Cup 2023 Best Playing XI, Pitch Report, Weather Report

Comments are closed.