Shark Tank India OTT: ಶಾರ್ಕ್ ಟ್ಯಾಂಕ್ ಇಂಡಿಯಾ ಮಿಸ್ ಮಾಡ್ಕೊಂಡ್ರಾ? ಉಚಿತವಾಗಿ ಒಟಿಟಿಯಲ್ಲಿ ವೀಕ್ಷಿಸಲು ಹೀಗೆ ಮಾಡಿ

ಸೋನಿ ಟೆಲಿವಿಶನ್ ಇಂಡಿಯಾ (SET India) ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಶಾರ್ಕ್ ಟ್ಯಾಂಕ್ ಇಂಡಿಯಾ (Shark Tank India) ತನ್ನ ಮೊದಲ ಸೀಸನ್ ಅನ್ನು ಕಳೆದ ವಾರ ಪೂರ್ಣಗೊಳಿಸಿದೆ. ಪಕ್ಕಾ ವ್ಯಾಪಾರ ರಿಯಾಲಿಟಿ ಶೋ ಇದಾಗಿದ್ದು, ಅದರ ಅಮೇರಿಕನ್ ಶೋ ಒಂದನ್ನು ಆಧರಿಸಿ ಭಾರತೀಯ ಆವೃತ್ತಿಯನ್ನು ರೂಪಿಸಲಾಗಿತ್ತು. 198 ಸ್ಟಾರ್ಟ್ಅಪ್‌ಗಳಿಗೆ ವೇದಿಕೆ ಒದಗಿಸಿದ್ದ ಶಾರ್ಕ್ ಟ್ಯಾಂಕ್ ಇಂಡಿಯಾ ಒಟ್ಟು 97 ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆಗೆ ನೆರವಾಗಿದೆ. ಟಿವಿಯಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್, ತನ್ನ ಚಾನೆಲ್ ಸೆಟ್ ಇಂಡಿಯಾದಲ್ಲಿ ಪ್ರಸಾರ ಮಾಡಿತು.ಇದರ  ಸಂಚಿಕೆಗಳು ಡಿಸೆಂಬರ್ 20, 2021 ಮತ್ತು ಫೆಬ್ರವರಿ 4, 2022 ರ ನಡುವೆ ಪ್ರಸಾರವಾಗಿದ್ದವು. ಕಾರ್ಯಕ್ರಮವು ತನ್ನ 35 ಸಂಚಿಕೆಗಳಲ್ಲಿ ಹೊಸ ವ್ಯಾಪಾರ ಪರಿಕಲ್ಪನೆಗಳನ್ನು ಪರಿಚಯಿಸಿತು. ಶಾರ್ಕ್ ಟ್ಯಾಂಕ್ ಇಂಡಿಯಾನ (Watch Shark Tank India Online Free) ಪೂರ್ಣ ಸಂಚಿಕೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಹೇಗೆ ವೀಕ್ಷಿಸಬಹುದು (Shark Tank India OTT) ಎಂಬುದನ್ನು ತಿಳಿಯಲು ಇಡೀ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

ಶಾರ್ಕ್ ಟ್ಯಾಂಕ್ ಇಂಡಿಯಾದ ಮೊದಲ ಸೀಸನ್ ಮುಗಿದಿದ್ದರೂ, ದೇಶದ ಎಲ್ಲಾ ಭಾಗಗಳ ಉದ್ಯಮಿಗಳು ತಮ್ಮ ಪರಿಕಲ್ಪನೆಗಳು, ಆಲೋಚನೆಗಳು ಮತ್ತು ಉತ್ಪನ್ನಗಳನ್ನು ಹೇಗೆ ನಿರೂಪಿಸಿದ್ದಾರೆ ಎಂಬುದನ್ನು ನೋಡುವ ರೋಚಕತೆಯೇ ಬೇರೆ. ಹಾಗಾದರೆ ಟಿವಿಯಲ್ಲಿ ಮುಗಿದ ಸೀಸನ್‌ಅನ್ನು ಹೇಗೆ ವೀಕ್ಷಿಸಬಹುದು? ಶಾರ್ಕ್ ಟ್ಯಾಂಕ್ ಇಂಡಿಯಾದ ಅತ್ಯುತ್ತಮ ಕ್ಷಣಗಳನ್ನು ನೀವು ಹೇಗೆ ಮೆಲುಕು ಹಾಕಬಹುದು ಎಂಬುದು ಇಲ್ಲಿದೆ.

ಶಾರ್ಕ್ ಟ್ಯಾಂಕ್ ಇಂಡಿಯಾ ಪೂರ್ಣ ಸಂಚಿಕೆಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ
ಶಾರ್ಕ್ ಟ್ಯಾಂಕ್ ಇಂಡಿಯಾದ ಪೂರ್ಣ ಸಂಚಿಕೆಗಳು ಸೋನಿ ಲಿವ್ ಅಪ್ಲಿಕೇಶನ್ ನಲ್ಲಿ ಲಭ್ಯವಿವೆ. ಆನ್‌ಲೈನ್‌ನಲ್ಲಿ ಸಂಚಿಕೆಗಳನ್ನು ವೀಕ್ಷಿಸಲು ನಿಮಗೆ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ನ ಪ್ರೀಮಿಯಂ ಚಂದಾದಾರಿಕೆಯ ಅಗತ್ಯವಿದೆ.

ಆದಾಗ್ಯೂ, ನೀವು ಯಾವುದೇ ಪಾವತಿಸಿದ ಚಂದಾದಾರಿಕೆಯ ಅಗತ್ಯವಿಲ್ಲದೇ, ಎಂಎಕ್ಸ್ ಪ್ಲೇಯರ್‌ನಲ್ಲಿ ಜಾಹೀರಾತುಗಳೊಂದಿಗೆ ಎಲ್ಲಾ ಶಾರ್ಕ್ ಟ್ಯಾಂಕ್ ಇಂಡಿಯಾ ಸಂಚಿಕೆಗಳನ್ನು ಉಚಿತವಾಗಿ ವೀಕ್ಷಿಸಬಹುದು. ಯೂಟ್ಯೂಬ್ ನಲ್ಲಿನ ಅಧಿಕೃತ ಸೆಟ್ ಇಂಡಿಯಾ ಚಾನಲ್ ಪ್ಲೇಲಿಸ್ಟ್ ಸಹ ಹೊಂದಿದೆ. ಅದು ಕಾರ್ಯಕ್ರಮದ ಸಂಪೂರ್ಣ ಸಂಚಿಕೆಗಳೊಂದಿಗೆ ನಿಯಮಿತವಾಗಿ ನವೀಕರಿಸಲ್ಪಡುತ್ತದೆ.

ಉದಯೋನ್ಮುಖ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ವಿಭಿನ್ನ ವ್ಯವಹಾರ ಕಲ್ಪನೆಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಜನರು ಪ್ರತ್ಯೇಕ ಪ್ಲೇಲಿಸ್ಟ್ ಯಲ್ಲಿ ಸ್ಟಾರ್ಟಪ್ ಸಂಸ್ಥಾಪಕರು ಮಾಡಿದ ಕೆಲವು ಆಸಕ್ತಿಕರ ಉಪಾಯಗಳನ್ನು ವೀಕ್ಷಿಸಬಹುದು.

ಅತ್ಯುತ್ತಮ ಕ್ಷಣಗಳು ಮತ್ತು ನವೋದ್ಯಮದ ಉಪಾಯಗಳಿಂದ ಶಾರ್ಕ್ ಟ್ಯಾಂಕ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಕ್ಷಕರೂ ಸಾಕಷ್ಟು ಟ್ರೋಲ್ ಹಾಗೂ ಮಿಮ್ಸ್ ಮಾಡಿದ್ದಾರೆ.

ಶಾರ್ಕ್ ಟ್ಯಾಂಕ್‌ ಇಂಡಿಯಾ ಮೊದಲ ಆವೃತ್ತಿಯಲ್ಲಿ ಭಾರತ್‌ಪೇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್, ಬೋಟ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ಅಮನ್ ಗುಪ್ತಾ ಮತ್ತು ಶಾದಿ.ಕಾಮ್ ಸಂಸ್ಥಾಪಕ ಮತ್ತು ಸಿಇಒ ಅನುಪಮ್ ಮಿತ್ತಲ್ .ಮಾಮಾ ಅರ್ಥ್‌ನ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಲ್ ಅಲಾಘ್, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ನಮಿತಾ ಥಾಪರ್, ಲೆನ್ಸ್‌ಕಾರ್ಟ್ ಸಹ-ಸಂಸ್ಥಾಪಕ ಮತ್ತು ಸಿಇಒ ಪೆಯೂಶ್ ಬನ್ಸಾಲ್ ಮತ್ತು ಶುಗರ್ ಕಾಸ್ಮೆಟಿಕ್ಸ್ ಸಹ-ಸಂಸ್ಥಾಪಕಿ ಮತ್ತು ಸಿಇಒ ವಿನೀತಾ ಸಿಂಗ್ ಸೇರಿದಂತೆ ಒಟ್ಟು ಏಳು ಪ್ಯಾನೆಲಿಸ್ಟ್‌ಗಳು ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:Facebook Instagram Close: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಂದ್ ಆಗಲಿದೆಯೇ?

(Shark Tank India watch season 1 episodes free in online)

Comments are closed.