ಬಾಗಲಕೋಟೆಯಲ್ಲಿ ಮಿತಿಮೀರಿದ ಸಮವಸ್ತ್ರ ವಿವಾದ : ಶಿಕ್ಷಕನ ಮೇಲೆ ರಾಡ್​ನಿಂದ ಹಲ್ಲೆ, ವಿದ್ಯಾರ್ಥಿಗಳ ಮೇಲೆ ಕಲ್ಲುತೂರಾಟ

ಬಾಗಲಕೋಟೆ :teacher was assaulted by a rod : ರಾಜ್ಯದಲ್ಲಿ ಹಿಜಬ್​ ಹಾಗೂ ಕೇಸರಿ ಶಾಲು ವಿವಾದ ಇದೀಗ ತಾರಕಕ್ಕೇರಿದೆ. ಕಾಲೇಜುಗಳಲ್ಲಿ ಸ್ನೇಹಿತರಂತೆ ಇರಬೇಕಿದ್ದ ವಿದ್ಯಾರ್ಥಿಗಳು ಮತೀಯ ಹೆಸರಿನಲ್ಲಿ ಬೀದಿಗಿಳಿದಿದ್ದಾರೆ. ದಾವಣಗೆರೆ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಒಂದು ಹೆಜ್ಜೆ ಕೆಳಗಿಳಿದು ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಲ್ಲಲ್ಲಿ ಲಾಠಿ ಚಾರ್ಜ್​ ಮಾಡಿದ್ದಾರೆ.

ಈ ನಡುವೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಲ್ಲಿ ರಸ್ತೆ ದಾಟುತ್ತಿದ್ದ ಶಿಕ್ಷಕರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ. ಹಿಜಾಬ್​ ಹಾಗೂ ಕೇಸರಿ ಶಾಲು ವಿವಾದ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಲಾಠಿಚಾರ್ಜ್​ಗೂ ಜಗ್ಗದೇ ಶಾಂತಿ ಕದಡುವ ಕಾರ್ಯ ಮಾಡಿದ್ದಾರೆ.

ರಬಕವಿ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆಯಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹೋರಾಟದ ಜೊತೆಯಲ್ಲಿ ಹಿಂಸಾಚಾರವನ್ನೂ ನಡೆಸಿಬಿಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಂಜುನಾಥ್​ ನಾಯಕ್​ ಎಂಬ ಶಿಕ್ಷಕ ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಲಾಗಿದೆ. ಇದರಿಂದಾಗಿ ಮಂಜುನಾಥ್​ ನಾಯಕ್​​ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕ್ಷಕ ಮಂಜುನಾಥ್​ ನಾಯಕ್​ಗೆ ತೀವ್ರ ರಕ್ತಸ್ರಾವವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಬನಹಟ್ಟಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯ ಜೊತೆಯಲ್ಲಿ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಇವರನ್ನೂ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಈ ನಡುವೆ ರಾಜ್ಯದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಅವಲೋಕಿಸಿದ ರಾಜ್ಯ ಸರ್ಕಾರವು ನಾಳೆಯಿಂದ ಮೂರು ದಿನಗಳ ಕಾಲ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ರಜೆ ಘೋಷಣೆ ಮಾಡಿದೆ.

A teacher was assaulted by a rod at Bagalkot

ಇದನ್ನು ಓದಿ : ಸಮವಸ್ತ್ರ​ ವಿವಾದ : ಹೈಕೋರ್ಟ್​ ವಿಚಾರಣೆ ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿಕೆ

ಇದನ್ನೂ ಓದಿ : ನಾಳೆಯಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Community-verified icon

Comments are closed.