China lockdown : ಮತ್ತೆ ವಿಶ್ವಕ್ಕೆ ಕೊರೋನಾ ಕಂಟಕ: ಚೀನಾದಲ್ಲಿ ಲಾಕ್ ಡೌನ್ ಜಾರಿ

ಬೀಜಿಂಗ್‌ : ಕೊರೋನಾ ಮೂರನೆ ಅಲೆಯಿಂದ‌‌ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ಭಾರತೀಯರಿಗೆ ಮತ್ತೊಂದು ಶಾಕ್ ಹಾಗೂ ಆತಂಕ ಒಟ್ಟೊಟ್ಟಿಗೆ ಎದುರಾಗಿದೆ. ಕೊರೋನಾದ ಜನಕ ಎಂದೇ ಕರೆಯಿಸಿಕೊಳ್ಳುವ ಚೀನಾದಲ್ಲಿ ಕೊರೋನಾ ಮತ್ತೆ ಸ್ಪೋಟಗೊಂಡಿದ್ದು, ವೇಗವಾಗಿ ಹರಡುವಿಕೆಯನ್ನು ತಡೆಯಲು ಚೀನಾ ಮತ್ತೆ ಲಾಕ್ ಡೌನ್ (China lockdown) ಘೋಷಿಸಿದೆ.

ಚೀನಾದ ಚಾಂಗ್‌ಚನ್ ಪ್ರಾಂತ್ಯದಲ್ಲಿ ಮತ್ತೆ ಕೊರೋನಾ ಸ್ಪೋಟಗೊಂಡಿದ್ದು, ಇದು ಕೊರೋನಾ ಹೊಸ ತಳಿ ಎನ್ನಲಾಗುತ್ತಿದೆ.ಕೊರೋನಾ ಪ್ರಕರಣಗಳ ಹರಡುವಿಕೆ ಹಿಂದೆಂದಿ ಗಿಂತ ವೇಗವಾಗಿದ್ದು, ಪ್ರಮುಖ ನಗರದಲ್ಲಿ ಒಂದೇ ದಿನದಲ್ಲಿ ಸಾವಿರಾರು ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಮತ್ತೆ ಕಠಿಣ ಲಾಕ್ ಡೌನ್ (China lockdown) ಘೋಷಿಸಿದೆ. ಚೀನಾದ ಚಾಂಗ್ ಚನ್ ಹಾಗೂ ಜಿಲಿನ್ ಪ್ರದೇಶದಲ್ಲಿ ಅತಿ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿದ್ದು, ಕಳೆದೆರಡು ವರ್ಷಕ್ಕೆ ಹೋಲಿಸಿದರೇ ಇದು ಚೀನಾದ ಕ್ಷಿಪ್ರ ಕೊರೋನಾ ಹರಡುವಿಕೆ ಎಂದು ಅಂದಾಜಿಸಲಾಗುತ್ತಿದೆ.‌ ಮಾತ್ರವಲ್ಲ ಹಿಂದೆಂದಿಗಿಂತ ವೇಗವಾಗಿ ಕೊರೋನ (corona virus) ಹರಡುತ್ತಿದೆ ಎಂದೂ ತಜ್ಞರು ಅಭಿಪ್ರಾಯಿಸಿದ್ದಾರೆ.

ಚಾಂಗ್ ಚನ್ ಪ್ರದೇಶದಲ್ಲಿ ಮೂರು ವಾರದ ಹಿಂದೆ 100 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈಗ ಕೊರೋನಾ ಕೇಸ್ ಗಳ ಸಂಖ್ಯೆ 1000 ಗಡಿ ದಾಟಿದೆ. ಶುಕ್ರವಾರ ಒಂದೇ ದಿನ ಪ್ರಕರಣಗಳ ಸಂಖ್ಯೆ 1369 ಪ್ರಕರಣಗಳು ವರದಿಯಾಗಿವೆ. ಅತಿಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದು, ಮನೆಯಿಂದ ಹೊರಕ್ಕೆ ಬರದಂತೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಮತ್ತೆಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ : ಮಕ್ಕಳ ಲಸಿಕೆಗೆ ನಿಯಮವೇ ಅಡ್ಡಿ: 8 ಲಕ್ಷ ವಿದ್ಯಾರ್ಥಿಗಳು ಲಸಿಕೆ ವಂಚಿತರು

ಮನೆಯಿಂದ ಹೊರಗೆ ಬರುವವರು ಮೂರು ಸುತ್ತಿನ ಕೊರೋನಾ ಪರೀಕ್ಷೆಗೆ ಒಳಪಡುವುದು ಕಡ್ಡಾಯ ಎಂದು ಚೀನಾ ಸರಕಾರ ಘೋಷಿಸಿದ್ದು ಶಾಂಘೈನಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೆಲವೆಡೆ ಕೊರೋನಾ, ಕೆಲವೆಡೆ ಓಮೈಕ್ರಾನ್ ಹಾಗೂ ಇನ್ನು ಕೆಲವಡೆ ಹೆಸರಿಡದ ಕೊರೋನಾ ಹೊಸ ತಳಿ ಜನರನ್ನು ಬಾಧಿಸುತ್ತಿದೆ ಎನ್ನಲಾಗಿದೆ.

2019 ರಲ್ಲಿ ಮೊದಲು ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಬಳಿಕ ವಿಶ್ವದ ಇತರ ರಾಷ್ಟ್ರಗಳಿಗೂ ವ್ಯಾಪಿಸಿತ್ತು.‌ ಮಾತ್ರವಲ್ಲ ವಿಶ್ವಕ್ಕೆ ವಿಶ್ವವೇ ಲಾಕ್ ಡೌನ್ ಆಗಿತ್ತು. ಕರ್ನಾಟಕ ಹಾಗೂ ಕೇರಳದಲ್ಲಿ ಒಂದೊಂದು ಪ್ರಕರಣಗಳು ಕಾಣಿಸಿಕೊಂಡ ಬಳಿಕ ಇಡೀ ದೇಶಕ್ಕೆ ದೇಶವೇ ನಲುಗಿ ಹೋಗಿತ್ತು. ಸದ್ಯ ಜನರು ಕೊರೋನಾ ಕರಿನೆರಳಿನಿಂದ ಹೊರಬಂದು ಸಹಜ ಬದುಕಿಗೆ ಮರಳಿದ್ದಾರೆ. ಇನ್ನೇನು ವಿದೇಶಿ ವಿಮಾನಯಾನವೂ ಆರಂಭವಾಗುವುದರಲ್ಲಿತ್ತು. ಈ ಹೊತ್ತಿನಲ್ಲಿ ಮತ್ತೆ ಕೊರೋನಾ ಅಲೆಯ ಅಬ್ಬರ ಆರಂಭವಾಗಿರೋದು ಭಾರತವೂ ಸೇರಿದಂತೆ ವಿಶ್ವದ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

(China lockdown: Corona cases rises in country, China imposed lockdown again)

Comments are closed.