ಹಿರಿಯ ಗಾಯಕಿ ಎಸ್. ಜಾನಕಿ ಪುತ್ರ, ಪ್ರಸಿದ್ಧ ನೃತ್ಯಪಟು ಮುರಳಿ ಕೃಷ್ಣ ನಿಧನ
Singer S Janakis son Dancer Murali Krishna passed away: ಹೈದರಾಬಾದ್: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಪುತ್ರ, ಬಹುಮುಖ ಪ್ರತಿಭೆ ಮುರಳಿ ಕೃಷ್ಣ (Murali Krishna) ಅವರು ಗುರುವಾರ ಹೈದರಾಬಾದ್ನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅದ್ಭುತ ಭರತನಾಟ್ಯ ಪಟು:
ತಾಯಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ, ಮುರಳಿ ಕೃಷ್ಣ ಅವರು ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಅದ್ಭುತ ಭರತನಾಟ್ಯ ಪಟುವಾಗಿದ್ದು, ದೇಶಾದ್ಯಂತ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಕೇವಲ ಪ್ರದರ್ಶನ ಮಾತ್ರವಲ್ಲದೆ, ಕೆಲವು ಸಿನಿಮಾಗಳಿಗೆ ಭರತನಾಟ್ಯ ನೃತ್ಯ ಸಂಯೋಜಕರಾಗಿಯೂ (Choreographer) ಕೆಲಸ ಮಾಡುವ ಮೂಲಕ ತಮ್ಮ ನೃತ್ಯ ಪ್ರೌಢಿಮೆಯನ್ನು ಮೆರೆದಿದ್ದರು.
ವೈಯಕ್ತಿಕ ಜೀವನ:
ಮುರಳಿ ಕೃಷ್ಣ ಅವರು ಭರತನಾಟ್ಯ ಮತ್ತು ಕುಚುಪುಡಿ ನೃತ್ಯಗಾರ್ತಿಯಾಗಿದ್ದ ಉಮಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನ ಪಡೆದು ದೂರವಾಗಿದ್ದರು. ಸಂಸಾರದಿಂದ ದೂರಾದ ನಂತರ ಮುರಳಿ ಕೃಷ್ಣ ಅವರು ಹೈದರಾಬಾದ್ನಲ್ಲಿ ತಾಯಿ ಎಸ್. ಜಾನಕಿ ಅವರ ಆರೈಕೆಯಲ್ಲಿ ಅವರೊಂದಿಗೇ ನೆಲೆಸಿದ್ದರು.
Udupi Varahi Irrigation Project : ವಾರಾಹಿ ಯೋಜನೆ ರದ್ದು : ಕರಾವಳಿಯಲ್ಲಿ ಬುಗಿಲೆದ್ದ ಆಕ್ರೋಶ, ಏನಿದು ವಿವಾದ ?
ಗಣ್ಯರ ಸಂತಾಪ:
ಮುರಳಿ ಕೃಷ್ಣ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕಲಾ ಲೋಕದ ಮಂದಿ ಕಂಬನಿ ಮಿಡಿದಿದ್ದಾರೆ. “ಒಬ್ಬ ಶ್ರೇಷ್ಠ ನೃತ್ಯ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಎಸ್. ಜಾನಕಿ ಅಮ್ಮನವರಿಗೆ ಸಿಗಲಿ” ಎಂದು ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.



