Udupi Varahi Irrigation Project : ವಾರಾಹಿ ಯೋಜನೆ ರದ್ದು : ಕರಾವಳಿಯಲ್ಲಿ ಬುಗಿಲೆದ್ದ ಆಕ್ರೋಶ, ಏನಿದು ವಿವಾದ ?

ಕುಂದಾಪುರ ( Kundapura) : ರೈತರಿಗೆ ವಾರಾಹಿ ನದಿ ನೀರು ಹಾಯಿಸುವ ಯೋಜನೆ (Udupi Varahi Irrigation Project) ಉಡುಪಿಯಲ್ಲಿ ಎರಡೂವರೆ ದಶಕದಿಂದ ನಡೆಯುತ್ತಿದೆ. ಎಡದಂಡೆ- ಬಲದಂಡೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ, ಇದೀಗ ಏತ ನೀರಾವರಿ ಯೋಜನೆಗೆ ಮಾಜಿ ಕಾಂಗ್ರೆಸ್ ಮಾಜಿ ಶಾಸಕರು ತಡೆ ತಂದಿರುವ ಆರೋಪ ಎದುರಿಸುತ್ತಾರೆ. ಈ ನಡುವೆ ಉಡುಪಿ ರೈತ ಸಂಘದ ನೇತೃತ್ವದಲ್ಲಿ ಬೃಹತ್‌ ಹೋರಾಟ ನಡೆಸುವ ಮೂಲಕ ರೈತರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಾರಾಹಿ ಉಡುಪಿ ಜಿಲ್ಲೆಯ ಜೀವನದಿ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಈ ನದಿ ವರ್ಷಪೂರ್ತಿ ಹರಿಯುತ್ತದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸಿದ್ದಾಪುರದ ಏತ ನೀರಾವರಿ ಯೋಜನೆ ವಿಚಾರದಲ್ಲಿ ಬಹುದೊಡ್ಡ ಚರ್ಚೆ ಆರಂಭವಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟುವ ವಾರಾಹಿ ನದಿಗೆ ಸಿದ್ದಾಪುರ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಮೂಲಕ ಸುತ್ತಮುತ್ತಲ ಎಂಟು ಗ್ರಾಮಗಳಿಗೆ ನೀರು ಹಾಯಿಸುವುದು ಇದರ ಉದ್ದೇಶ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಶುರುವಾಗಿತ್ತು. ಬೈಂದೂರು ಕಾಂಗ್ರೆಸ್ ಮಾಜಿ ಶಾಸಕ ಗೋಪಾಲ್ ಪೂಜಾರಿ ತೆರೆಮರೆಯಲ್ಲಿ ಕಸರತ್ತು ನಡೆಸಿ ಇದಕ್ಕೆ ಸ್ಟೇ ತಂದಿದ್ದಾರೆ ಎಂಬುದು ಆರೋಪ.

Also Read : ಬ್ರಹ್ಮಾವರ : ಮಹಿಳೆ ಮೇಲೆ ಅವಾಚ್ಯ ವರ್ತನೆ ಆರೋಪ, ಪ್ರತಿ ದೂರು ದಾಖಲು, ದೂರುದಾರ

ಪಶ್ಚಿಮ ಘಟ್ಟದಲ್ಲಿ ಮತ್ತು ಕರಾವಳಿ ಭಾಗದಲ್ಲಿ ಬೀಳುವ ಮಳೆ ನೀರು ಸಮುದ್ರಕ್ಕೆ ಪೋಲಾಗುವುದನ್ನು ತಪ್ಪಿಸಲು ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ರೈತರ ನೀರಿನ ಸಮಸ್ಯೆಯ ಸಂಕಷ್ಟ ನಿವಾರಣೆಯಾಗಲಿದೆ ಎಂಬುದು ರೈತ ಸಂಘದ ಅಭಿಪ್ರಾಯ.

ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಜನಪ್ರತಿನಿಧಿಗಳು ರೈತರು ಸಾರ್ವಜನಿಕರು ಗ್ರಾಮಸ್ಥರು ಕಾಂಗ್ರೇಸ್ ನಾಯಕ ಪ್ರತಾಪ ಚಂದ್ರ ಶೆಟ್ಟಿ ಹಾಗೂ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿ ಹಕ್ಕೊತ್ತಾಯ ಮಾಡಿದರು.

ಹೋರಿಹಬ್ಬೆ ಡ್ಯಾಮ್ ನ, ಮೇಲ್ಭಾಗದಲ್ಲಿ ಜಾಕ್ವೆಲ್ ಅಳವಡಿಸುವುದು ಏತ ನೀರಾವರಿ ಯೋಜನೆಯ ಪ್ರಮುಖ ಭಾಗವಾಗಿದೆ. ಜಾಕ್ ವೆಲ್ ನಿರ್ಮಾಣವಾದರೆ ಖಾಸಗಿ ವಿದ್ಯುತ್ ಘಟಕಕ್ಕೆ ಅಡ್ಡಿಯಾಗುತ್ತೆ ಅನ್ನೋದು ವೈಯಕ್ತಿಕ ಹಿತಾಸಕ್ತಿಯಾಗಿದೆ. ಖಾಸಗಿ ವ್ಯಕ್ತಿಯೊಬ್ಬರ ಲಾಬಿಗೆ ಮಣಿದು, ಸರಕಾರ ಏತ ನೀರಾವರಿ ಯೋಜನೆಗೆ ತಡೆ ಉಂಟುಮಾಡಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ಡ್ಯಾಮ್ ನ ಕೆಳಭಾಗದಲ್ಲಿ ಜಾಕ್ ವೆಲ್ ನಿರ್ಮಿಸಿ ಅನ್ನೋದು ಸರಕಾರದ ನಿಲುವು. ಆದರೆ ತಾಂತ್ರಿಕ ವರದಿ ಆಧಾರದಲ್ಲೇ ಯೋಜನೆ ರೂಪಿಸಿದ್ದು, ಮೂಲ ಯೋಜನೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೋರಾಟಗಾರರಾದ ಉಮೇಶ್‌ ಶೆಟ್ಟಿ ಶಾನ್ಕಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ಸಭೆಯ ಬಳಿಕ, ಜಾಥಾ ನಡೆಸಿ ವಾರಾಹಿ ಯೋಜನಾ ಕಚೇರಿಗೆ ರೈತರು ಮುತ್ತಿಗೆ ಹಾಕಿದರು. ಸ್ಪಂದನೆ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಸಮಸ್ಯೆಯನ್ನು ಮನವರಿಕೆ ಮಾಡುವುದಾಗಿ ಶಾಸಕರು ಹೇಳಿದ್ದಾರೆ.

Also Read : ಕಾರ್ಕಳ : ಕೋಳಿ ಅಂಕದ ಮೇಲೆ ದಾಳಿ, ಲಕ್ಷಾಂತರ ಮೌಲ್ಯದ ಸ್ವತ್ತು ವಶಕ್ಕೆ

ತನ್ನದೇ ಪಕ್ಷ ದ ಸರಕಾರ ಕೈಗೊಂಡಿರುವ ನಿಲುವುಗಳನ್ನು ಕಾಂಗ್ರೆಸ್ ಹಿರಿಯ ಮುಖಂಡ ಪ್ರತಾಪ ಚಂದ್ರ ಶೆಟ್ಟಿ ವಿರೋಧಿಸಿದ್ದಾರೆ. ಖಾಸಗಿ ಜಲ ವಿದ್ಯುತ್ ಘಟಕದ ಲಾಬಿಗೆ ಮಣಿಯಬಾರದು ಎಂದು ಹಾಕ್ಕೊತ್ತಾಯ ಸಭೆಯಲ್ಲಿ, ಸರ್ಕಾರದ ಮೇಲೆ ಒತ್ತಾಯ ಹೇರಲಾಗಿದೆ.

Udupi Varahi Irrigation Project Suddenly halted to the approved irrigation project Kannada News

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories