ನಟ ದರ್ಶನ್‌ ಜೊತೆ ಹೀರೊಯಿನ್‌ ಆಗಲು ಈ ನಟಿಗೆ ಸಾಧ್ಯವೇ ಇಲ್ಲ : ಅಷ್ಟಕ್ಕೂ ಆ ನಟಿ ಯಾರು ಗೊತ್ತಾ ?

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಿನಿಮಾಗೆ ನಾಯಕಿ ಆಗಿ ನಟಿಸಬೇಕು ಎನ್ನುವುದು ಹಲವು ನಾಯಕಿಯರ ಕನಸು ಆಗಿರುತ್ತದೆ. ಕನ್ನಡ ಸಿನಿರಂಗದಲ್ಲಿ ಸ್ಟಾರ್‌ ನಟಿ ಆಗಬೇಕು ಎನ್ನುವ ಕನಸು ಕಾಣುತ್ತಿರುವ ಪ್ರತಿಯೊಬ್ಬ ನಾಯಕಿಗೂ ನಟ ದರ್ಶನ್‌ಗೆ ಹೀರೊಯಿನ್‌ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಆದರೆ, ‘ಬನಾರಸ್’ (Sonal Montero) ನಟಿ ಮಾತ್ರ ಎಂದಿಗೂ ದರ್ಶನ್‌ಗೆ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ. ಈ ಮಾತನ್ನು ಸ್ವತ: ಬನಾರಸ್ ನಟಿ ಸೋನಾಲ್ ಮೊಂತೆರೋಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಖುದ್ದಾಗಿ ಹೇಳಿದ್ದಾರೆ ಎಂದು ನಟಿ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ಸೋನಾಲ್ ಮೊಂತೆರೋ. ಈಗಾಗಲೇ ಹಲವು ಜನ ಮೆಚ್ಚಿದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ದರ್ಶನ್ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ, ನಟ ದರ್ಶನ್‌ಗೆ ಹೀರೊಯಿನ್ ಆಗೋಕೆ ಮಾತ್ರ ಆಗುವುದಿಲ್ಲ.ನಟ ದರ್ಶನ್ ಸಿನಿಮಾದಲ್ಲಿ ಹೀರೊಯಿನ್ ಆಗ್ಬೇಕು ಅನ್ನೋ ಕನಸು ‘ಬನಾರಸ್’ ನಟಿ ಸೋನಾಲ್‌ಗೆ ತುಂಬಾನೇ ಆಸೆ ಇತ್ತು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಆ ಆಸೆಯನ್ನು ತಿರಸ್ಕರಿಸಿದ್ದಾರೆ. ಹಾಗಂತ ಇಬ್ಬರ ನಡುವೆ ಏನೋ ವೈಮನಸ್ಸು ಇದೆ ಅಂತಲ್ಲ. ದರ್ಶನ್‌ಗೆ ನಟಿ ಸೋನಾಲ್‌ ಮೊಂತೆರೋ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ದಕ್ಕೂ ಒಂದು ಬಲವಾದ ಕಾರಣವಿದೆ. ಅದೇನು ಅನ್ನೋದನ್ನು ‘ಪಂಚತಂತ್ರ’, ‘ಬನಾರಸ್’ ಅಂತಹ ಸಿನಿಮಾದಲ್ಲಿ ನಟಿಸಿರೋ ಸೋನಾಲ್ ಮೊಂತೆರೋ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ.

“ದರ್ಶನ್ ಸರ್ ಅವರೇ ಹೇಳಿದ್ದಾರೆ. ನೀನು ನನ್ನ ತಂಗಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ದಾರೆ. ದರ್ಶನ್ ಸರ್ ಜೊತೆ ಹೀರೊಯಿನ್ ಆಗಿ ಸಿನಿಮಾ ಮಾಡಬೇಕು ಅಂತ ಒಂದು ಆಸೆ ಇತ್ತು. ಆದರೆ ಅವರೇ ಹೇಳಿದ್ದಾರೆ. ನೀನು ನನ್ನ ತಂಗಿ ಕಣೆ. ಹೇಗೆ ಹೀರೊಯಿನ್ ಮಾಡೋಕೆ ಆಗುತ್ತೆ ಅಂತ. ಆದರೂ ನಾನು ಖುಷಿಯಾಗಿದ್ದೇನೆ. ಸಿನಿಮಾಗಿಂತ ನನ್ನನ್ನು ಒಪ್ಪಿಕೊಂಡಿದ್ದಾರಲ್ಲ. ಅದು ತುಂಬಾನೇ ಖುಷಿ ಕೊಡುತ್ತೆ.’ ಎಂದು ಸೋನಾಲ್ ಮೊಂತೆರೋ ಯಾಕೆ ದರ್ಶನ್ ಹೀರೊಯಿನ್ ಆಗೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

ದರ್ಶನ್‌ ಅಭಿನಯದ ‘ರಾಬರ್ಟ್’ ಸಿನಿಮಾದಲ್ಲಿ ನಟಿ ಸೋನಾಲ್‌ ಮೊಂತೆರೋ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿ ಸೋನಾಲ್‌ ಮೊಂತೆರೋ ದರ್ಶನ್‌ಗೆ ತಂಗಿಯಾಗಿ ನಟಿಸಿದ್ದರು. ಹೀಗಾಗಿ ದರ್ಶನ್ ಇವರನ್ನು ತಂಗಿ ಅಂತಲೇ ಭಾವಿಸಿದ್ದಾರೆ. ಅಲ್ಲದೆ ಜನರು ಕೂಡ ದರ್ಶನ್ ತಂಗಿಯಾಗಿ ನೋಡಿದ್ದರಿಂದ ನಾಯಕಿಯಾಗೋಕೆ ಸಾಧ್ಯವೇ ಇಲ್ಲ ಅಂತ ಹೇಳಿದ್ದಾರಂತೆ. ಅದನ್ನೇ ಸೋನಾಲ್ ಮಾಂತೆರೋ ಈಗ ರಿವೀಲ್ ಮಾಡಿದ್ದು, ತಂಗಿಯಾಗಿದ್ದಕ್ಕೆ ಖುಷಿಯಾಗಿದ್ದಾರೆ.

ಇದನ್ನೂ ಓದಿ : KD movie : ಪ್ರೇಮ್‌ ನಿರ್ದೇಶನದ “ಕೆಡಿ” ಸಿನಿಮಾಕ್ಕಾಗಿ : ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಭರ್ಜರಿ ತಯಾರಿ

ಇದನ್ನೂ ಓದಿ : “ಕಾಂತಾರ 2” ಕಥೆಯಲ್ಲಿ ಟ್ವಿಸ್ಟ್ ! ಸಿನಿಮಾದ ಸಿಕ್ರೆಟ್‌ ಬಿಚ್ಚಿಟ್ಟ ವಿಜಯ್ ಕಿರಗಂದೂರು

ಇದನ್ನೂ ಓದಿ : Actor Prem – Tabla Nani : ನಿರ್ದೇಶಕ ಅಥರ್ವ್‌ ಆರ್ಯ ಸಿನಿಮಾದಲ್ಲಿ ಜೊತೆಯಾದ ನಟ ಪ್ರೇಮ್‌, ತಬಲ ನಾಣಿ

‘ಬನಾರಸ್’ ಬಳಿಕ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿರುವ ಸೋನಾಲ್ ಮಾಂತೆರೋ ಕನ್ನಡ ಸಿನಿರಂಗದ ಉದಯೋನ್ಮುಖ ನಟಿ ಎನಿಸಿಕೊಂಡಿದ್ದಾರೆ. ಸದ್ಯ ಝೈರ್ ಖಾನ್ ಜೊತೆ ನಾಯಕಿಯಾಗಿ ನಟಿಸಿದ ‘ಬನಾರಸ್’ ಸಿನಿಮಾ ರಿಲೀಸ್ ಆಗಿದೆ. ಇವರ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿವೆ. ‘ಶುಗರ್ ಫ್ಯಾಕ್ಟರಿ’ ಹಾಗೂ ‘ಬುದ್ಧಿವಂತ 2’ ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದು, ಆ ಸಿನಿಮಾಗಳ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

Sonal Montero: This actress can’t be a heroine with actor Darshan: Do you know who that actress is?

Comments are closed.