Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

ಮಧುರೈ: (Strange incident) ತಮ್ಮ ಸಾಕು ನಾಯಿಯನ್ನು ʻನಾಯಿʼ ಎಂದು ಕರೆದಿದ್ದಕ್ಕೆ 62 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ನಡೆದಿದೆ. ದಿಂಡಿಗಲ್‌ ನಿವಾಸಿ ರಾಯಪ್ಪನ್‌ ಕೊಲೆಯಾದ ವ್ಯಕ್ತಿ.

ರಾಯಪ್ಪನವರು ತಮ್ಮ ಮೊಮ್ಮಗ ಕೆಲ್ವಿನ್‌ ಗೆ ಸಮೀಪದ ಜಮೀನಿನಲ್ಲಿ ಚಾಲನೆಯಲ್ಲಿದ್ದ ನೀರಿನ ಪಂಪ್‌ ಅನ್ನು ಆಪ್‌ ಮಾಡಲು ಹೇಳಿದ್ದಾರೆ. ಈ ವೇಳೆ ತನ್ನ ಮೊಮ್ಮಗನ ಬಳಿಯಲ್ಲಿ ಜಮೀನಿನ ಸುತ್ತ ನಾಯಿ ಇರಬಹುದು ಕೋಲನ್ನು ಜೊತೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ.

ಅದನ್ನು ಕೇಳಿದ ಡೇನಿಯಲ್‌ ಸಾಕುನಾಯಿಯನ್ನು ನಾಯಿ ಎಂದಿದ್ದಕ್ಕೆ ಕೋಪಗೊಂಡು ರಾಯಪ್ಪನ ಎದೆಗೆ ಹೊಡೆದಿದ್ದಾನೆ. ಇದರಿಂದಾಗಿ ರಾಯಪ್ಪನವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಯಪ್ಪನವರು ಸಾವನ್ನಪ್ಪಿರುವುದನ್ನು ತಿಳಿದ ಡೇನಿಯಲ್‌ ಮತ್ತು ಕುಟುಂಬ ಅಲ್ಲಿಂದ ಪರಾರಿಯಾಗಿದ್ದಾರೆ.

ಉಲಗಂಪಟ್ಟಿಯಾರ್ಕೊಟ್ಟಂನ ನಿವಾಸಿ ನಿರ್ಮಲಾ ಫಾತಿಮಾ ರಾಣಿ ಮತ್ತು ಅವರ ಮಕ್ಕಳಾದ ಡೇನಿಯಲ್ ಮತ್ತು ವಿನ್ಸೆಂಟ್ ಅವರು ತಮ್ಮ ಸಾಕುಪ್ರಾಣಿಗಳನ್ನು ‘ನಾಯಿ’ ಎಂದು ಕರೆಯದಂತೆ ಈ ಮೊದಲೇ ರಾಯಪ್ಪನ್‌ಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಕೂಡ ರಾಯಪ್ಪನವರು ನಾಯಿ ಎಂದು ಕರೆದಿದ್ದಾರೆ ಇದರಿಂದ ಕೋಪಗೊಂಡ ಡೇನಿಯಲ್‌ ರಾಯಪ್ಪನವರಿಗೆ ಹೊಡೆದಿದ್ದಾನೆ. ದುರಾದೃಷ್ಟವಶಾತ್‌ ರಾಯಪ್ಪನವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Rajashekara Swamiji death: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ

ಇದನ್ನೂ ಓದಿ : Black magic crime case: ಸೊಸೆಗೆ ಸತ್ತ ಮಾನವ ಮೂಳೆಗಳ ಪುಡಿಯನ್ನು ತಿನ್ನುವಂತೆ ಒತ್ತಾಯ: ಪತಿ, ಅತ್ತೆ ವಿರುದ್ದ ದೂರು

ಇದನ್ನೂ ಓದಿ : Bomb threat to plane: ಗೋವಾ-ಮಾಸ್ಕೋ ವಿಮಾನಕ್ಕೆ ಬಾಂಬ್ ಬೆದರಿಕೆ: ಉಜ್ಬೇಕಿಸ್ತಾನ್‌ದಲ್ಲಿ ತುರ್ತು ಭೂಸ್ಪರ್ಶ

ಈ ಘಟನೆಯ ಕುರಿತು ಮಧುರೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ನಿರ್ಮಲಾ ಮತ್ತು ಅವರ ಪುತ್ರರನ್ನು ಬಂಧಿಸಿದ್ದಾರೆ. ಪ್ರಪಂಚದಲ್ಲಿ ಇಂತಹ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಸಾಕು ನಾಯಿಯನ್ನು ನಾಯಿ ಎಂದಿರುವುದನ್ನೆ ಕಾರಣವಾಗಿಟ್ಟುಕೊಂಡು ಇಂತಹ ಕೃತ್ಯ ನಡೆಸಿರುವುದು ನಿಜವಾಗಿಯೂ ಒಂದು ದುರಂತವೇ ಸರಿ.

Strange incident: An old man was killed for calling a pet dog “dog”

Comments are closed.