ಜಗಮೆಚ್ಚಿದ “ಕಾಂತಾರ” ಸಿನಿಮಾ : ಶೀಘ್ರದಲ್ಲೇ ಕಿರುತೆರೆಗೆ

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಒಂದು ದಂತಕಥೆ ಸಿನಿಮಂದಿರಗಳಲ್ಲಿ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು. ಕರಾವಳಿ ಸಂಸ್ಕೃತಿ, ದೈವಕೋಲ ಇವುಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ಇನ್ನೂ ಕೆಲವು ಸಿನಿಮಂದಿರಗಳಲ್ಲಿ ಈಗಲೂ ಕೂಡ ಚಿತ್ರ ಪ್ರದರ್ಶನ ಕಾಣುತ್ತಿದೆ. ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಸಿನಿಮಂದಿರಗಳಲ್ಲಿ, ಒಟಿಟಿಯಲ್ಲಿ ಮಾತ್ರವಲ್ಲದೇ ಭಾನುವಾರ (ಜನವರಿ 15)ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿ (Star Suvarna) ಯಲ್ಲಿ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕೇವಲ ಹದಿನೆಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ದೂಳೆಬ್ಬಿಸಿ ಬರೋಬ್ಬರಿ ನಾಲ್ಕು ನೂರು ಕೋಟಿಗೂ ಹೆಚ್ಚು ಗಳಿಕೆಗಳನ್ನು ಮಾಡಿ ಸೈ ಎನಿಸಿಕೊಂಡಿದೆ. ಅಲ್ಲದೇ ಈ ಸಿನಿಮಾವು ನಮ್ಮನ್ನು ನಮ್ಮ ಮೂಲಗಳಿಗೆ ಕರೆದೊಯ್ದು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ವಿಸ್ಮಯ ಪಡುವಂತೆ ಮಾಡಿತ್ತು. ಹಲವು ವಿವಾದಗಳಿಗೆ ಕಾಂತಾರ ಸಿನಿಮಾ ಗುರಿಯಾದರೂ ಕೂಡ ಎಲ್ಲವನ್ನು ಮೆಟ್ಟಿ ನಿಂತು ಜನರ ಮನದಲ್ಲಿ ಸಿನಿಮಾದ ಚಿತ್ರಣ ಅಚ್ಚಳಿಯದಂತೆ ಉಳಿದಿದೆ. ಅಲ್ಲದೇ ಥಿಯೇಟರ್‌ ಮತ್ತು ಒಟಿಟಿಯಲ್ಲೂ ಕೂಡ ಉತ್ತಮ ಪ್ರದರ್ಶನ ಕಂಡ ಕಾಂತಾರ ಸೂಪರ್‌ ಹಿಟ್‌ ಸಿನಿಮಾ ಇದೀಗ ಕಿರುತೆರೆಯ ಮೂಲಕ ಮನೆ ಮನೆಗಳಿಗೆ ತಲುಪಲು ಸಿದ್ಧವಾಗಿದೆ.

ಇದನ್ನೂ ಓದಿ : ಎರಡೇ ತಿಂಗಳಿಗೆ ಚಿತ್ರೀಕರಣ ಮುಗಿಸಿದ “ಧೂಮಂ”‌ ಸಿನಿತಂಡ : ಹೊಂಬಾಳೆಯ ಮತ್ತೊಂದು ಸಿನಿಮಾ ರೆಡಿ

ಇದನ್ನೂ ಓದಿ : ವಂಚನೆ ಪ್ರಕರಣ : ಮಠ ನಿರ್ದೇಶಕ ಗುರುಪ್ರಸಾದ್‌ ಬಂಧನ

ಇದನ್ನೂ ಓದಿ : ಬಾಲಿವುಡ್‌ಗೆ ಲಗ್ಗೆ ಇಟ್ಟ ಕಾಂತಾರ ಲೀಲಾ ಖ್ಯಾತಿಯ ನಟಿ ಸಪ್ತಮಿ ಗೌಡ

ಇದನ್ನೂ ಓದಿ : ನಟ ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ

ಸಿನಿಮಂದಿರದಲ್ಲಿ ಕಾಂತಾರಾ ಸಿನಿಮಾವನ್ನು ನೋಡಿವವರು ಹಾಗೂ ಇದುವರೆಗೂ ಸಿನಿಮಾವನ್ನು ನೋಡದೇ ಇರುವವರು ಕೂಡ ಮನೆಯಲ್ಲಿ ನೋಡಬಹುದು. ಹೊಂಬಾಳೆ ಫಿಲ್ಮ್ಸ್‌ ,”ಮೈನವಿರಿಳಿಸುವ ದೃಶ್ಯ ವೈಭವವನ್ನು ಒಳಗೊಂಡಿರುವ ದಂತಕಥೆ “ಕಾಂತಾರ” ಇದೇ ಭಾನುವಾರ ಸಂಜೆ 6 ಗಂಟೆಗೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಿಮ್ಮ ಸುವರ್ಣವಾಹಿನಿಯ ಮೂಲಕ ನೀವು ಮನೆಯಲ್ಲೇ ಕೂತು ಕರಾವಳಿಯ ಸಂಸ್ಕೃತಿ, ದೈವಕೋಲವನ್ನು ನೋಡಬಹುದು.

Star Suvarna: World’s favorite movie “Kantara”: Coming to TV soon

Comments are closed.