The World luxury cruise ship: ನವಮಂಗಳೂರಿಗೆ ಆಗಮಿಸಿದ ದಿ ವರ್ಲ್ಡ್‌ ಐಷಾರಾಮಿ ಕ್ರೂಸ್‌ ಹಡಗು

ಮಂಗಳೂರು: (The World luxury cruise ship) ಹೊಸ ವರ್ಷದಲ್ಲಿ ಪ್ರಪ್ರಥಮವಾಗಿ ನವಮಂಗಳೂರು ಬಂದರಿಗೆ ದಿ ವರ್ಲ್ಡ್‌ ಐಷಾರಾಮಿ ಹಡಗು ಶುಕ್ರವಾರ ಆಗಮಿಸಿದೆ. ದುಬೈನಿಂದ ಅಗಮಿಸಿದ ಈ ಹಡಗು ಕೊಚ್ಚಿನ್‌ ಗೆ ತಲುಪಲಿದೆ.

ನವಮಂಗಳೂರು ಬಂದರಿಗೆ ಆಗಮಿಸಿರುವ ಬೃಹತ್‌ ಹಡಗು 123 ಪ್ರವಾಸಿಗರು ಹಾಗೂ 280 ಮಂದಿ ಸಿಬ್ಬಂದಿಗಳನ್ನೊಳಗೊಂಡಿದ್ದು, 196 ಮೀ. ಉದ್ದ, 7.05 ಮೀ. ಆಳ ಹಾಗೂ 42,488 ಟನ್‌ ಭಾರವಿದೆ. ದಿ ವರ್ಲ್ಡ್‌ ಐಷಾರಾಮಿ ಮನೆಗಳುಳ್ಳ ಹಡಗಾಗಿದ್ದು, ಇದರಲ್ಲಿ ಹಲವಾರು ಶ್ರೀಮಂತರು ಮನೆಗಳನ್ನು ಖರೀದಿಸಿ ಪ್ರಯಾಣದ ಸಂದರ್ಭ ಆಗಮಿಸಿ ದೀರ್ಘಾವಧಿಯಾಗಿ ಉಳಿದುಕೊಳ್ಳುತ್ತಾರೆ. ಇನ್ನು ಹಲವರು ಈ ಹಡಗಿನಲ್ಲೇ ವಾಸ ಮಾಡುತ್ತಾರೆ.

ಈ ಬಾರಿ ಬೃಹತ್‌ ಐಷಾರಾಮಿ ಹಡಗನ್ನು ಸ್ವಾಗತಿಸುವ ಸಲುವಾಗಿ ಕರ್ನಾಟಕದ ಸಂಪ್ರದಾಯವನ್ನು ಪರಿಚಯಿಸಲು ಮುಂದಾಗಿದ್ದು, ವಿವಿಧ ಸಾಂಪ್ರದಾಯಿಕ ಭರತನಾಟ್ಯ, ಡೊಳ್ಳು ಕುಣಿತ, ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಿ ಪ್ರಯಾಣಿಕರನ್ನು ಸ್ವಾಗತಿಸಲಾಯಿತು. ಇನ್ನೂ ಆಭರತೀಯ ಆಯುಷ್‌ ಆರೋಗ್ಯ ಚಿಕಿತ್ಸೆ, ಯೋಗವನ್ನು ಪ್ರವಾಸಿಗರಿಗೆ ಪರಿಚಯಿಸಲಾಯಿತು. ಇನ್ನು ಹಡಗಿನಲ್ಲಿ ಬಂದಿಳಿದ ಪ್ರವಾಸಿಗರು ಬಸ್‌ ಹಾಗೂ ಖಾಸಗಿ ಪ್ರವಾಸಿ ಕಾರುಗಳಲ್ಲಿ ತೆರಳಿ ಸೈಂಟ್‌ ಎಲೋಶಿಯಸ್‌ ಚಾಪೆಲ್‌, ಕದ್ರಿ, ಮಾರ್ಕೆಟ್‌ ಕುದ್ರೋಳಿ ದೇವಸ್ಥಾನ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು.

ಹೊಸ ವರ್ಷದಲ್ಲಿ ನವಮಂಗಳೂರು ಬಂದರಿಗೆ ಬಂದಿಳಿದ ಮೊದಲನೇ ಹಡಗು ಇದಾಗಿದ್ದು, ದುಬೈನಿಂದ ನವಮಂಗಳೂರಿಗೆ ಅಗಮಿಸಿದೆ. ಇಲ್ಲಿಂದ ನೇರವಾಗಿ ಬೃಹತ್‌ ಐಶಾರಾಮಿ ಹಡಗು ಕೊಚ್ಚಿಗೆ ತಲುಪಲಿದೆ. ಕ್ರೂಸ್ ಸೀಸನ್ ನವೆಂಬರ್ 4, 2022 ರಂದು ಪ್ರಾರಂಭವಾಗಿದ್ದು, ಕ್ರೂಸ್ ಸೀಸನ್‌ ನಲ್ಲಿ 24 ಕ್ರೂಸ್ ಹಡಗುಗಳು ಈಗಾಗಲೇ ನವಮಂಗಳೂರು ಬಂದರಿಗೆ ತಮ್ಮ ಭೇಟಿಯನ್ನು ಖಚಿತಪಡಿಸಿವೆ. ಹಿಂದಿನ ಹಣಕಾಸು ವರ್ಷದಲ್ಲಿ, 26 ಕ್ರೂಸ್ ಹಡಗುಗಳು ಬಂದರಿಗೆ ಕರೆ ನೀಡಿದ್ದವು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಮಣ ಉತ್ಸವ: ದೇವಳದತ್ತ ಹರಿದು ಬಂದ ಭಕ್ತಸಾಗರ

ಇದನ್ನೂ ಓದಿ : ಸಂತೆಕಟ್ಟೆಯಲ್ಲಿ ಓವರ್‌ ಪಾಸ್‌ ನಿರ್ಮಾಣಕ್ಕೆ ಶಿಲನ್ಯಾಸ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

The World luxury cruise ship: The World luxury cruise ship arrived at Navamangaluru

Comments are closed.