ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಮಣ ಉತ್ಸವ: ದೇವಳದತ್ತ ಹರಿದು ಬಂದ ಭಕ್ತಸಾಗರ

ಕುಂದಾಪುರ: (Shri kshethra maranakatte) ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಆದಿಸಂಕರಾಚಾರ್ಯರು ಪ್ರತಿಷ್ಟಾಪಿಸಿದ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮಕರ ಸಂಕ್ರಾಂತಿ ಉತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವದ ಸಂಭ್ರಮ. ದೇವಳದಲ್ಲಿ ಇಂದು ನಡೆಯುವ ಶ್ರೀ ದೇವರ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಾವಿರಾರು ಮಂದಿ ಭಕ್ತರು ದೇವಳದತ್ತ ಹರಿದು ಬಂದಿದ್ದು, ಭಕ್ತಸಾಗರವೇ ಶ್ರೀ ಬ್ರಹ್ಮಲಿಂಗನ ದರ್ಶನಕ್ಕೆ ಹರಿದು ಬರಲಿದೆ.

ಬೆಳಿಗ್ಗೆಯಿಂದಲೇ ದೇವಳದತ್ತ ಸಾವಿರಾರು ಮಂದಿ ಭಕ್ತರು ಹರಿದು ಬರುತ್ತಿದ್ದು ದೇವರ ದರ್ಶನಕ್ಕೆ ಹೂ ಕಾಯಿ ಸಮರ್ಪಿಸಲು ಕಾದು ನಿಂತಿದ್ದಾರೆ. ತುಳು ನಾಡಿನ ಭಕ್ತರು ಬ್ರಹ್ಮಲಿಂಗ(Shri kshethra maranakatte)ನ ಬಗ್ಗೆ ಅಪಾರ ಭಯ ಭಕ್ತಿ ಹೊಂದಿದ್ದು, ಪ್ರತಿವರ್ಷ ಮಕರ ಸಂಕ್ರಮಣದಂದು ಜರುಗುವ ಜಾತ್ರೆಗೆ ಅಗಮಿಸಿ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಈ ದೇವಾಲಯದಲ್ಲಿ ಬ್ರಹ್ಮಲಿಂಗೇಶ್ವರ ದೇವರು ಪ್ರಧಾನ ದೇವರಾಗಿದ್ದು, ಹುಲಿದೇವರು, ಹಾಯ್ಗುಳಿ, ಮರ್ಲುಚಿಕ್ಕು, ಮುಂತಾದ ಪರಿವಾರ ದೈವಗಳು ಇಲ್ಲಿ ನೆಲೆಸಿಕೊಂಡಿವೆ.

Shri kshethra maranakatte: Makar Sankramana Utsav for Shri Brahmalingeshwar at Maranakatte: Devotees flock to the temple.

ಮಕರ ಸಂಕ್ರಮಣದ ದಿನ ರಾತ್ರಿ ದೇವಾಲಯದಲ್ಲಿ ದೇವರ ದರ್ಶನದ ನಂತರ ಅರಂಭವಾಗುವ ಕೆಂಡಸೇವೆಯಲ್ಲಿ ಸುಮಾರು 5000ಕ್ಕೂ ಅಧಿಕ ಭಕ್ತರು ಪಾಲ್ಗೊಂಡು ತಮ್ಮ ಹರಕೆ ಸಲ್ಲಿಸುವುದು ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆದು ಬಂದ ಪದ್ದತಿ. ಸ್ತ್ರೀ ಪುರುಷರು ಎಂಬ ಭೇದವಿಲ್ಲದೇ ಪ್ರತಿಯೊಬ್ಬರು ಕೆಂಡ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇನ್ನೂ ಮೂರು ದಿನಗಳ ಕಾಲ ನಡೆಯುವ ಶ್ರೀ ದೇವರ ಗೆಂಡ ಸೇವೆ, ಮಕರ ಸಂಕ್ರಮಣ ಉತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಭಕ್ತರು ಹಣ್ಣು ಕಾಯಿಗಳನ್ನು ತಲೆ ಮೇಲೆ ಹೊತ್ತುಕಿಒಂಡು ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ನಾಳೆ ಅಂದರೆ ದಿನಾಂಕ 15 ರಂದು ಕ್ಷೇತ್ರದ ಅರ್ಚಕ ಮಂಡಳಿಯವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಹಾಗೂ ಮೂರನೇ ದಿನ ಶ್ರೀ ಕ್ಷೇತ್ರದ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಸೇವೆ ಕೂಡ ನಡೆಯಲಿದೆ.

Shri kshethra maranakatte: Makar Sankramana Utsav for Shri Brahmalingeshwar at Maranakatte: Devotees flock to the temple.

ಮೂರು ಲೋಕದೊಡತಿ ಮುಕಾಂಬಿಕೆಯಿಂದ ಮರ್ಧನವಾದ ಮೂಕಾಸುರ ದೇವಿಯಿಂದ ವರ ಪಡೆಸು ಕಾರಣೀಕ ದೌವ ಬ್ರಹ್ಮಲಿಂಗನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ ಎನ್ನುವುದಾಗಿ ಪುರಾಣಗಳು ಹೇಳುತ್ತವೆ. ಉಡುಪಿ ಜಿಲ್ಲೆಯ ಹೆಚ್ಚಿನ ಕುಟುಂಬಗಳಿಗೆ ಮನೆದೇವರಾಿರುವ ಬ್ರಹ್ಮಲಿಂಗೇಶ್ವರ (Shri kshethra maranakatte) ದೇವಾಲಯದ ವರ್ಷಾವಧಿ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಅಲ್ಲದೇ ಆದಿ ಶಂಕರಾಚಾರ್ಯರು ಮೂಕಾಂಬಿಕೆಯ ಇಷ್ಟ ವಿಗ್ರಹವನ್ನು ಕೊಲ್ಲೂರಿನಲ್ಲಿ ಪ್ರತಿಷ್ಟಾಪಿಸಿದ ನಂತರ ಮಾರಣಕಟ್ಟೆಗೆ ಬಂದು ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು ಎನ್ನುವ ಪ್ರತೀತಿ ಕೂಡ ಈ ಕ್ಷೇತ್ರಕ್ಕಿದೆ.

ಇದನ್ನೂ ಓದಿ : Makar Sankranti 2023 : ಮಕರ ಸಂಕ್ರಾಂತಿ 2023; ದಿನ ಮತ್ತು ಆಚರಣೆ

Live telecast:

Shri kshethra maranakatte: Makara Sankraman Utsav celebration at Maranakatte Shri Brahmalingeshwar temple: Bhaktasagara overflowing

Comments are closed.