ರಾಶಿಕಾ ಕ್ಯಾಪ್ಟನ್ ಆಗಿದ್ದಕ್ಕೆ ಸೂರಜ್‍ಗೆ ಕೋಪ, ಲವ್ ಬರ್ಡ್ಸ್ ಗಳು ದೂರ ಆಗ್ತಾರಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ರಾಶಿಕಾ ಮತ್ತು ಸೂರಜ್ ಲವ್ ಬಡ್ರ್ಸ್ ಗಳಂತೆ ಕಾಣಿಸಿಕೊಂಡಿದ್ರು. ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಇಬ್ಬರು ಕೂಡ ಪ್ರಪೋಸ್ ಮಾಡಿಕೊಂಡಿದ್ದರು. ಆದ್ರೆ ಈ ರಾಶಿಕಾ ಮನೆ ಕ್ಯಾಪ್ಟನ್ ಆಗ್ತಿದ್ದಂತೆ ಸೂರಜ್‍ಗೆ ಕೋಪ ಬಂದಿದೆ. ಇಬ್ಬರು ಜಗಳವಾಡಿಕೊಂಡಿದ್ದಾರೆ. ಸೂರಜ್‍ಗೆ ಕೋಪ ಬಂದಿದ್ಯಾಕೆ ನೋಡಿ.

ಈ ಬಾರಿ ಕ್ಯಾಪ್ಟನ್ ಆದ ರಾಶಿಕಾ
ಹಲವು ಬಾರಿ ರಾಶಿಕಾಗೆ ಕ್ಯಾಪ್ಟನ್ ಆಗಲು ಅವಕಾಶ ಸಿಕ್ಕಿರಲಿಲ್ಲ. ಅದಕ್ಕೆ ಈ ಬಾರಿ ವಿಲನ್ ರಾಶಿಕಾಗೆ ಕ್ಯಾಪ್ಟನ್ ಆಗಲು ಅವಕಾಶ ಕೊಟ್ಟಿದ್ರು. ಅದರಂತೆ ರಾಶಿಕಾ ಆಟವಾಡಿ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಸೂರಜ್ ಗೆ ಇಷ್ಟ ಇಲ್ಲ
ರಾಶಿಕಾ ಮನೆ ಕ್ಯಾಪ್ಟನ್ ಆಗ್ತಿದ್ದಂತೆ ಸೂರಜ್ ಬೇಸರ ಮಾಡಿಕೊಂಡಿದ್ದಾರೆ. ಅವರು ಕ್ಯಾಪ್ಟನ್ ಆದ ರೀತಿ ಸರಿ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಇಬ್ಬರ ನಡುವೆ ಕೋಲ್ಡ್ ವಾರ್ ಶುರುವಾಗಿದೆ.

ಎಲ್ಲರ ಮುಖವಾಡ ಕಳಚಿ ಬೀಳುತ್ತೆ
ಇನ್ನು ರಾಶಿಕಾ ಇಂದು ಕೂತು ಮನೆಯಲ್ಲಿ ಎಲ್ಲರ ಬಗ್ಗೆ ಗೊತ್ತಾಗುತ್ತೆ. ಎಲ್ಲರ ಮುಖವಾಡ ಕಳಚುತ್ತಿದೆ ಎಂದು ರಾಶಿಕಾ ಸೂರಜ್‍ಗೆ ಹೇಳಿದ್ದಾರೆ. ಅದಕ್ಕೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ: https://kannada.newsnext.live/cinema/dhruvanth-rajat-argued-in-front-of-sudeep/

ಬಂದಾಗಿನಿಂದ ರಾಶಿಕಾ ಮತ್ತು ಸೂರಜ್ ಕ್ಲೋಸ್ ಆಗಿ ಇದ್ದರು. ಇಬ್ಬರು ಪ್ರಪೋಸ್ ಮಾಡಿಕೊಂಡಿದ್ದರು. ಅಲ್ಲದೇ ಹೊರಗಡೆಯೂ ಲವ್ ಬಡ್ರ್ಸ್ ಗಳಂತೆ ಕಾಣಿಸಿಕೊಂಡಿದ್ದಾರೆ. ಈಗ ಜಗಳವಾಗಿರುವ ಕಾರಣ ಇಬ್ಬರು ದೂರ ಆಗ್ತಾರಾ ನೋಡಬೇಕು.

ಇನ್ನು ಇಂದು ಕಿಚ್ಚನ ಪಂಚಾಯಿತಿ ಇದ್ದು ಯಾರಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ತಾರೆ ನೋಡಬೇಕು. ಅಲ್ಲದೇ ರಜತ್ ಮತ್ತು ಚೈತ್ರಾ ಅವರನ್ನು ಮನೆಗೆ ಕಳಿಸುತ್ತಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories