Deepika Kumari : ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭರವಸೆ ಮೂಡಿಸಿದ ದೀಪಿಕಾ ಕುಮಾರಿ

ಟೊಕಿಯೋ ಒಲಿಂಪಿಕ್ಸ್‌ ಬಿಲ್ಲುಗಾರಿಕೆಯ ರಾಂಕಿಂಗ್‌ ರೌಂಡ್ಸ್‌ನ ಮಹಿಳಾ ಶ್ರೇಯಾಂಕ ಸುತ್ತಿನಲ್ಲಿ ವಿಶ್ವದ ನಂಬರ್‌ ಒನ್‌ ಬಿಲ್ಲುಗಾರ್ತಿ ದೀಪಿಕಾ ಕುಮಾರಿ 9ನೇ ಸ್ಥಾನ ಪಡೆದು ಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ನೀಡಿದ್ದಾರೆ.

ದೀಪಿಕಾ ಕುಮಾರಿ ಸ್ಪರ್ಧಾತ್ಮಕ ಕ್ರಮದಲ್ಲಿ ಭಾಗಿಯಾದ ಭಾರತದ ಮೊದಲ ಕ್ರೀಡಾಪಟು ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ದೀಪಿಕಾ ಮೊದಲ ಆರು ಸ್ಥಾನವನ್ನು ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ ಅಂತಿಮವಾಗಿ 9ನೇ ರಾಂಕ್‌ ಪಡೆದುಕೊಂಡಿದ್ದಾರೆ. ಜುಲೈ 27 ರಂದು ದೀಪಿಕಾ ಕುಮಾರಿ ಅವರು ಭೂತಾನ್‌ ಕರ್ಮ ವಿರುದ್ದ ಮಹಿಳಾ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯ ಒಂದನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.

ಟೊಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಮೊದಲು ನಡೆದ ಕ್ರೀಡಾಕೂಟದಲ್ಲಿ ಭಾರತದ ದೀಪಿಕಾ ಕುಮಾರಿ ಶುಭಾರಂಭ ಮಾಡಿದ್ದಾರೆ. ಇದೀಗ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮಹಿಳಾ ಬಿಲ್ಲುಗಾರ್ತಿ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ. ಇನ್ನು ಪುರುಷರ ಬಿಲ್ಲುಗಾರಿಕೆಯಲ್ಲಿ ಆತನುದಾಸ್‌, ಪ್ರವೀಣ್‌ ಜಾಧವ್‌ ಹಾಗೂ ತೌಂಡೀಪ್‌ ರೈ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಲಾಗಿದೆ.

Comments are closed.