ಟಾಪ್ 6 ನಲ್ಲಿ ಇರಲು ಸ್ಪರ್ಧಿಗಳ ಸಖತ್ ಆಟ, ಫೈನಲ್‍ಗೆ ಹೋಗಲು ಸೆಣಸಾಟ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು 2 ವಾರ ಮಾತ್ರ ಇದೆ. ಆದ್ರೆ 8 ಸ್ಪರ್ಧಿಗಳಿದ್ದಾರೆ. ಅವರಲ್ಲಿ 6 ಜನ ಮಾತ್ರ ಫೈನಲಿಸ್ಟ್‍ಗಳು ಆಗಲು ಸಾಧ್ಯ.ಅದಕ್ಕೆ ಟಾಪ್ 6 ಗೆ ಬರಲು ಸ್ಪರ್ಧೆಗಳು ನಡೆಯುತ್ತಿವೆ. ಅದಕ್ಕೆ ಸ್ಪರ್ಧಿಗಳು ಗೇಮ್ ಮೂಲಕ ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನ ಪಡ್ತಾ ಇದ್ದಾರೆ.

ಧನುಷ್ ಸೆಲೆಕ್ಟ್
ಇನ್ನು 8 ಸ್ಪರ್ಧಿಗಳಲ್ಲಿ ಧನುಷ್ ಕ್ಯಾಪ್ಟನ್ ಆದ ಕಾರಣ ಅವರು ನೇರವಾಗಿ ಆಯ್ಕೆ ಆಗಿದ್ದಾರೆ. ಇನ್ನು ಐದು ಸ್ಪರ್ಧಿಗಳು ಬೇಕಾಗಿದ್ದಾರೆ. ಮನೆಯ ಕ್ಯಾಪ್ಟನ್ ಧ್ರುವಂತ್ ಆಚೆ ಇರಲಿ ಎಂದು ಹೇಳಿ ಹೇಳ್ತಾರೆ. ಆದ್ರೆ ಬಿಗ್ ಬಾಸ್ ಗಿಲ್ಲಿ ಮತ್ತು ಧ್ರುವಂತ್ ನಡುವೆ ಗೇಮ್ ಆಡಿಸುತ್ತಾರೆ.

ಗಿಲ್ಲಿ ಔಟ್
ಇನ್ನು ಧ್ರುವಂತ್ ತನ್ನ ಎದುರಾಳಿ ಸ್ಪರ್ಧಿಯಾಗಿ ಗಿಲ್ಲಿ ನಟರನ್ನು ಆಯ್ಕೆ ಮಾಡಿಕೊಳ್ತಾರೆ. ಇಬ್ಬರಿಗೂ ಬಾಲ್ ಎಸೆದು ಮೊಳೆಗೆ ಸಿಕ್ಕಿಸುವ ಟಾಸ್ಕ್ ಇರುತ್ತೆ. ಅದರಲ್ಲಿ ಧ್ರುವಂತ್ ಗೆದ್ದು ತಮ್ಮ ಸ್ಥಾನ ಉಳಿಸಿಕೊಳ್ತಾರೆ. ಗಿಲ್ಲಿ ಗೇಮ್ ನಿಂದ ಆಚೆ ಉಳಿದಿದ್ದಾರೆ.

ಅಶ್ವಿನಿ-ರಾಶಿಕಾ ಫೈಟ್ ಜೋರು
ಇನ್ನು ಗೇಮ್ ನಿಂದ ಆಚೆ ಇಡಲು ನೀರಿನ ಟಾಸ್ಕ್ ನೀಡಲಾಗಿದೆ. ಅದರಲ್ಲಿ ಅಶ್ವಿನಿ ಮತ್ತು ರಾಶಿಕಾ ತಮ್ಮ ವೈಕ್ತಿಕ ವಿಚಾರಗಳನ್ನು ತೆಗೆದುಕೊಂಡು ಕಿತ್ತಾಡಿಕೊಂಡಿದ್ದಾರೆ. ರಾಶಿಕಾ ನೀವು ನಾಟಕ ಮಾಡ್ತೀರ ಎಂದು ಹೇಳಿದ್ದಾಳೆ. ಅದಕ್ಕೆ ಅಶ್ವಿನಿ ಹೌದು ನಿನ್ನ ತರ ಒಂದು ಸಿನಿಮಾ ಮಾಡಿಲ್ಲ ನಾನು.. ನೀನು ಯಾರು ಅಂತಾನೇ ಜನಕ್ಕೆ ಗೊತ್ತಿಲ್ಲ ಎಂದು ರಾಶಿಕಾ ಅಶ್ವಿನಿ ಅವರಿಗೆ ಹೇಳಿದ್ದಾರೆ.

ಇದನ್ನೂ ಓದಿ: https://kannada.newsnext.live/cinema/gill-nata-is-the-captain-but-wrong-in-his-judgment/

ಒಟ್ಟಿನಲ್ಲಿ ಮಾಹಿತಿ ಪ್ರಕಾರ ಧನುಷ್, ಕಾವ್ಯ, ಟಾಪ್ 6 ಗೆ ಸೆಲೆಕ್ಟ್ ಆಗಿದ್ದಾರೆ. ಇನ್ನು 4 ಜನ ಯಾರಾಗ್ತಾರೆ ಅಂತ ಕಾದು ನೋಡಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories