ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಕುಟುಂಬ; ರಾಶಿಕಾ-ಸೂರಜ್ ಫುಲ್ ಹ್ಯಾಪಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಇಂದು ವಿಭಿನ್ನವಾಗಿರಲಿದೆ. ಹೌದು ಸ್ಪರ್ಧಿಗಳು ಇಷ್ಟು ದಿನ ಕಾಯ್ತಾ ಇದ್ದ ಫ್ಯಾಮಿಲಿ ರೌಂಡ್ ಬಂದಿದೆ. ಅಲ್ಲದೇ ಇಂದಿನ ಸಂಚಿಕೆಯಲ್ಲಿ ರಾಶಿಕಾ ಅವರ ಅಮ್ಮ ಮತ್ತು ತಮ್ಮ ಬಂದಿದ್ದಾರೆ. ಸೂರಜ್ ಅಮ್ಮ ಸಹ ಬಂದಿದ್ದು ಇಬ್ಬರು ತುಂಬಾ ಖುಷಿಯಾಗಿದ್ದಾರೆ.

ಹೆಲ್ಮೆಟ್ ಹಾಕಿ ಒಳಗೆ ಬಂದ ತಮ್ಮ
ಬಿಗ್ ಬಾಸ್ ಸ್ಪರ್ಧಿಗಳು ಏನೋ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಹೆಲ್ಮೆಟ್ ಹಾಕಿಕೊಂಡ ವ್ಯಕ್ತಿ ಒಳಗೆ ನುಗ್ಗುತ್ತಾರೆ. ಮನೆಯವರೆಲ್ಲಾ ಅವರನ್ನು ಹಿಡಿಯಲು ಓಡುತ್ತಾರೆ. ಎಲ್ಲರೂ ಸೇರಿ ಹಿಡಿದು ಅವನ ಹೆಲ್ಮೆಟ್ ತೆಗೆಯುತ್ತಾರೆ. ಆಗ ಗೊತ್ತಾಗುತ್ತೆ ಅವರು ರಾಶಿಕಾ ತಮ್ಮ ಎಂದು. ರಾಶಿಕಾ ಸಖತ್ ಖುಷಿಯಾಗುತ್ತಾರೆ.

ಅಮ್ಮನ ಎಂಟ್ರಿಗೆ ಕಣ್ಣೀರಾದ ರಾಶಿ
ಇನ್ನು ತಮ್ಮ ಮಾತ್ರ ಬರ್ತಾರೆ ಅಂದಕೊಂಡಿದ್ದ ರಾಶಿಕಾಗೆ ಡಬಲ್ ಖುಷಿಯಾಗಿದೆ. ಏಕಂದ್ರೆ ಅಮ್ಮನ ಎಂಟ್ರಿ ಸಹ ಆಗಿದೆ. ಅದಕ್ಕೆ ರಾಶಿಕಾ ಕಣ್ಣೀರಾಗಿದ್ದಾರೆ. ಅಮ್ಮನನ್ನು ತಬ್ಬಿ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಬಂತು ಖಾಲಿ ಡಬ್ಬ
ಇನ್ನು ಸೂರಜ್‍ಗೆ ಮೊದಲು ಖಾಲಿ ಬಾಕ್ಸ್ ಬರುತ್ತೆ. ಭೋಜು ನೀನು ಇಲ್ಲದೇ ಅಡುಗೆ ಮಾಡಲು ಮನಸ್ಸು ಆಗುತ್ತಿಲ್ಲ. ಅಮ್ಮನಿಗಾಗಿ ಅಡುಗೆ ಮಾಡಿ ಕಳಿಸು ಎಂಬ ಪತ್ರ ಇರುತ್ತೆ. ಅದಕ್ಕೆ ಸೂರಜ್ ಅಮ್ಮನಿಗೆ ಇಷ್ಟವಾದ ಅಡುಗೆ ಮಾಡಿ ಬಾಕ್ಸ್ ಗೆ ಹಾಕಿ ಕಳಿಸುತ್ತಾರೆ.

ಇದನ್ನೂ ಓದಿ: https://kannada.newsnext.live/cinema/karna-nidhi-love-story-begins-again-zee-kannada-serial/

ಸೂರಜ್ ಅಮ್ಮ ಸಹ ಬಂದ್ರು
ಸೂರಜ್ ಬಾಕ್ಸ್ ಕಳಿಸುತ್ತಿದ್ದಂತೆ ಸೂರಜ್ ಅವರ ತಾಯಿ ಸಹ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೂರಜ್ ಸಹ ತುಂಬಾ ಖುಷಿಯಾಗಿದ್ದಾರೆ. ಅಮ್ಮನನ್ನು ತಬ್ಬಿ ಸಂತೋಷದ ಕಣ್ಣೀರು ಹಾಕಿದ್ದಾರೆ. ಖುಷಿಯಾಗಿದ್ದಾರೆ

ಈ ವಾರ ಫ್ಯಾಮಿಲಿ ರೌಂಡ್ ಇರಲಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರಲಿದ್ದಾರೆ. ಕಳೆದ ಸೀಸನ್ ಕುಟುಂಬದಿಂದ ಒಬ್ಬರು ಉಳಿದುಕೊಳ್ಳಲು ಅವಕಾಶ ಕೊಟ್ಟಿದ್ದರು. ಈ ಬಾರಿಯೂ ಆ ಅವಕಾಶ ಇದೆಯಾ ಕಾದು ನೋಡಬೇಕು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories