ವುಮೆನ್ ಕಾರ್ಡ್ ಇಲ್ಲಿ ವರ್ಕ್ ಆಗಲ್ಲ, ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!
Ashwini Gowda : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ನಲ್ಲಿ ಎಲ್ಲರಿಗೂ ಒಂದು ರೂಲ್ಸ್ ಆದ್ರೆ, ಈ ಅಶ್ವಿನಿ ಗೌಡ ಅವರಿಗೆ ಒಂದು ರೂಲ್ಸ್ ? ಎಂದು ಜನ ಪ್ರಶ್ನೆ ಕೇಳ್ತಾ ಇದ್ದಾರೆ.
ಯಾಕಂದ್ರೆ ಎಲ್ಲರಿಂದ ಗೌರವ ಬಯಸುವ ಅಶ್ವಿನಿ ಗೌಡ ಮಾತ್ರ ಬೇರೆಯವರಿಗೆ ಗೌರವ ಕೊಡಲ್ಲ ಅನ್ನುವುದು ಮನೆಯವರ ಮತ್ತು ಜನರ ಆರೋಪ. ಅದರಲ್ಲೂ ಈ ಬಾರಿ ಹೆಣ್ಣು ಮಕ್ಕಳಿಗೆ ಗೌರವ ಕೊಡಲ್ಲ ಎಂದು ಹೈಡ್ರಾಮಾ ಮಾಡಿ, ಉಪವಾಸ ಇದ್ರು. ಅದಕ್ಕೆ ಕಿಚ್ಚ ಸುದೀಪ್ ಇವತ್ತು ಏನ್ ಹೇಳ್ತಾರೆ. ಆಗಿದ್ದೇನು ? ಎಲ್ಲವನ್ನೂ ನೋಡೋಣ ಬನ್ನಿ.
ರಘು ಹೇಳಿದ್ದೇನು ?
ಇನ್ನು ಕಳೆದ ವಾರ ಕ್ಯಾಪ್ಟನ್ ಆಗಿದ್ದ ರಘು ಅವರು ಅಶ್ವಿನಿ ಅವರಿಗೆ ಪೌಡರ್ ರೂಮ್ ಕ್ಲೀನ್ ಮಾಡಲು ಕರೆಯುತ್ತಾರೆ. ಅದಕ್ಕೆ ಅಶ್ವಿನಿ ಅವರು 10 ನಿಮಿಷ ಬಿಟ್ಟು ಬರುತ್ತೇನೆ. ಬ್ಯಾಕ್ ಪೇನ್ ಇದೆ ಎನ್ನುತ್ತಾರೆ. 10 ನಿಮಿಷದಲ್ಲಿ ನೋವು ಹೋಗುತ್ತಾ? 8 ವಾರದಿಂದ ಇದೇ ಮಾಡಿರುವುದು ನೀವು ಎನ್ನುತ್ತಾರೆ.
ಅಶ್ವಿನಿ ಕೋಪ
ರಘು ಮಾತಿಗೆ ಕೋಪಗೊಂಡ ಅಶ್ವಿನಿ ಮೇಡಂ ಮಾತಿಗೆ ಮಾತು ಬೆಳೆಸುತ್ತಾರೆ. ಆಗ ಅಶ್ವಿನಿ ನೀನು ನನ್ನ ಹೆಸರನ್ನು ಅಶ್ವಿನಿ ಅವರೇ ಎಂದೇ ಕರೆಯಬೇಕು. ನೀವು ಏಕವಚನದಲ್ಲಿ ಮಾತನಾಡಬೇಡಿ. ನಾನು ಈ ಮನೆಯಲ್ಲಿ ಇರಲ್ಲ. ಬಿಗ್ ಬಾಸ್ ನನ್ನ ಮನೆಗೆ ಕಳಿಸಿ ಎನ್ನುತ್ತಾರೆ. ಅಲ್ಲದೇ ಉಪವಾಸ ಬೇರೆ ಮಾಡಿ, ಬಿಗ್ ಬಾಸ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಕಿಚ್ಚ ಸುದೀಪ್ ಕ್ಲಾಸ್
ಏಕವಚನ, ಏಕವಚನ, ಏಕವಚನ.. ನಿಮಗೆ ಗೌರವ ಬೇಕು ಅಂದ್ರೆ ಪ್ರತಿ ಚಿಕ್ಕ ಮಗುವಿಗೂ ನೀವು ಹೋಗಿ, ಬನ್ನಿ ಅನ್ನುವುದನ್ನು ಕಲಿಯಿರಿ. ಆಗ ಗೌರವ ಕೊಡ್ತಾರೆ. ಮಾತು ಶುರು ಮಾಡಿದ್ರೆ, ಯಾವ ಹುಡುಗಿಗೂ ಈ ರೀತಿ ಮಾತನಾಡಬೇಡಿ ಅನ್ನುತ್ತೀರಿ. ಯಾರು ಏನ್ ಮಾತಾಡ್ತಾ ಇದ್ದಾರೆ ಹೇಳಿ ಎಂದು ಕಿಚ್ಚ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ದಯವಿಟ್ಟು ಈ ಸಿನಿಮಾ ನೋಡಬೇಡಿ ..! ಯಾಕೆ ಗೊತ್ತಾ ?
ವುಮೆನ್ ಕಾರ್ಡ್ ಬೇಡ
ಅಶ್ವಿನಿ ಅವರೇ ಈ ಮನೆಯಲ್ಲಿ ವುಮೆನ್ ಕಾರ್ಡ್ ಬೇಡ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಇನ್ನಾದ್ರೂ ಅಶ್ವಿನಿ ಗೌಡ ಅವರು ಸರಿ ಆಗ್ತಾರಾ ನೋಡಬೇಕು. ಇವತ್ತಿನ ಸಂಚಿಕೆ ಮಾತ್ರ ಸೂಪರ್ ಆಗಿರುತ್ತೆ ಎಂದು ಪ್ರೇಕ್ಷಕರು ಹೇಳ್ತಾ ಇದ್ದಾರೆ. ಅಲ್ಲದೇ ನೋಡೋಕೆ ಕಾಯ್ತಾ ಇದ್ದಾರೆ.



