ಬಿಗ್ ಬಾಸ್ ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ? ಗಿಲ್ಲಿ-ರಜತ್ ನಡುವೆ ಈ ಚಾಲೆಂಜ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇಂದು ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆ ನಡೆಯಲಿದೆ. ಕಿಚ್ಚ ಸುದೀಪ್ ಅವರು ಈ ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ಗಿಲ್ಲಿ ನಟ ಮತ್ತು ರಜತ್ ಕಿಶನ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಏನು ಮಾತನಾಡಿದ್ರೂ? ಏನ್ ಚಾಲೆಂಜ್ ಹಾಕಿದ್ರು ನೋಡಿ.

ರಜತ್‍ಗೆ ಹೆಚ್ಚು ನೀರು
ಈ ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ ಪ್ರಶ್ನೆಗೆ ಮನೆಯ ಹಲವು ಸದಸ್ಯರು ರಜತ್ ಅವರ ಕೊಡಕ್ಕೆ ನೀರು ತುಂಬಿಸಿದ್ದಾರೆ. ಅವರಿಗೆ ಹೆಚ್ಚು ನೀರು ಬಂದಿದೆ. ರಜತ್ ಈ ಮನೆಯಲ್ಲಿ ಇರಲು ಯೋಗ್ಯ ಅಲ್ಲ ಎಂದು ಹೇಳಿದ್ದಾರೆ. ರಜತ್ ಕೋಪ ಮಾಡಿಕೊಂಡಿದ್ದಾರೆ.

ಗಿಲ್ಲಿ ನಟ ಹೇಳಿದ್ದೇನು?
ರಜತ್ ಅವರ ಮನೆಗೆ ಬಂದಾಗಿನಿಂದ, ಮಾತು ಮಾತಿಗೆ ಈ ಮನೆಯಲ್ಲಿರುವವರಿಗೆ ಟಾಸ್ಕ್ ಅರ್ಥ ಆಗಲ್ಲ ಎಂದು ಹೇಳ್ತಾರೆ. ನಾನು 10 ಟಾಸ್ಕ್ ಆಡಿದ್ರೆ 8 ಟಾಸ್ಕ್ ಗೆದ್ದಿದ್ದೀನಿ. ಮೊದಲ ದಿನವೇ ಒಂದು ಬಾಲ್ ಹಾಕದೇ ಸೈಡ್ ಕೂತಿದ್ರು ಎಂದು ಹೇಳಿದ್ದಾರೆ. ರಜತ್ ಅವರು ಮನೆಗೆ ಕಳಿಸಿಯೇ ನಾನು ಹೋಗ್ತೀನಿ ಎಂದು ಗಿಲ್ಲಿ ಚಾಲೆಂಜ್ ಮಾಡಿದ್ದಾರೆ.

ರಜತ್ ಹೇಳಿದ್ದೇನು?
ಸರ್ ನಾನು ಗಿಲ್ಲಿಗೆ ಹೇಳೇ ಇಲ್ಲ. ಅವನು ಟಾಸ್ಕ್ ಆಡುವುದಿಲ್ಲ. ಟಾಸ್ಕ್ ಆಡುವವರಿಗೆ ನಾನು ಹೇಳಿದೆ. ನಾನು ಬಂದಿರುವುದು ಒಬ್ಬನೇ. ಆಡುವುದು ಒಬ್ಬನೇ. ನನಗೆ ನೀರು ಹಾಕಿದವರನ್ನು ಮನೆಗೆ ಕಳಿಸಿ, ನಾನು ಮನೆಗೆ ಹೋಗ್ತೀನಿ ಎಂದು ಚಾಲೆಂಜ್ ಮಾಡಿದ್ದಾರೆ.

ಇದನ್ನೂ ಓದಿ: https://kannada.newsnext.live/cinema/dhruvanth-rajat-argued-in-front-of-sudeep/

ಇಬ್ಬರು ಚಾಲೆಂಜ್
ರಜತ್ ಮತ್ತು ಗಿಲ್ಲಿ ನಟ ಇಬ್ಬರು ಅವರನ್ನು ಮನೆಗೆ ಕಳಿಸಿಯೇ ನಾನು ಮನೆಗೆ ಹೋಗ್ತೀನಿ ಎಂದು ಚಾಲೆಂಜ್ ಮಾಡಿಕೊಂಡಿದ್ದಾರೆ. ಯಾರು ಮೊದಲು ಮನೆಗೆ ಹೋಗ್ತಾರೆ ಎಂದು ನೋಡಬೇಕು.

ಇನ್ನು ಗಿಲ್ಲಿ ನಟನಿಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಗಿಲ್ಲಿಯೇ ಈ ಬಾರಿ ಗೆಲ್ತಾರೆ ಎಂದು ಹೇಳ್ತಾ ಇದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories