ಈ ಸೀಸನ್‍ನ ಕೊನೆಯ ಕಿಚ್ಚನ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ್‍ಗೆ, ಇಬ್ಬರೂ ಭಾವುಕ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಇನ್ನೂ 8 ಸ್ಪರ್ಧಿಗಳು ಇದ್ದಾರೆ. ಅವರಲ್ಲಿ 6 ಜನಕ್ಕೆ ಮಾತ್ರ ಫಿನಾಲೆಗೆ ಹೋಗಲು ಅವಕಾಶ. ಇನ್ನು ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಇಬ್ಬರು ಖುಷಿಯಾಗಿ ಕಣ್ಣೀರಿಟ್ಟಿದ್ದಾರೆ.

ಮನೆ 2 ಭಾಗ
ಈ ವೀಕ್ ಮನೆ 2 ಭಾಗವಾಗಿತ್ತು. ಅಶ್ವಿನಿ ಮತ್ತು ಧ್ರುವಂತ್ ಒಂದು ಟೀಮ್ ಆದ್ರೆ, ರಾಶಿಕಾ, ರಘು, ಗಿಲ್ಲಿ, ಕಾವ್ಯ, ರಕ್ಷಿತಾ, ಧನುಷ್ ಒಂದು ಟೀಮ್ ಅಂತ ಕಂಡಿತ್ತು. ಅದನ್ನೇ ಸುದೀಪ್ ಅವರು ಚರ್ಚೆ ಮಾಡಿದ್ದಾರೆ.

ನಾನು ಸ್ಟ್ರಾಂಗ್ ಆಗ್ತಾ ಬಂದೆ
ನನ್ನನ್ನು ಪ್ರತಿ ಸಲ ಕೆಳಗಿಟ್ಟು ಮಾತನಾಡಿದಾಗಲೂ ಕೂಡ ನಾನು ಸ್ಟ್ರಾಂಗ್ ಆಗ್ತಾ ಬಂದಿದ್ದೀನಿ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಅದರಂತೆ ಅವರ ಬಗ್ಗೆ ಮಾತನಾಡಿದ ಮನೆಯವರೇ ಅವರಿಗೆ ಉತ್ತಮ ಕೊಟ್ಟಿದ್ದಾರೆ.

ನನ್ನ ಆಟ ನಾನು ಆಡ್ತಾ ಇದೀನಿ
ನನ್ನ ಆಟ ನಾನು ಆಡ್ತಾ ಇದೀನಿ. ನಾನು ಏನ್ ಕೊಡಬೇಕು ಅದನ್ನು ಕೊಡ್ತೀನಿ. ಏನ್ ತಗೋಬೇಕು ಅದು ತಗೋತಿನಿ ಎಂದು ಧ್ರುವಂತ್ ಅವರು ಹೇಳಿದ್ದಾರೆ.

ಕಿಚ್ಚನ ಚಪ್ಪಾಳೆ
ಈಡೀ ವಾರದ ಎಪಿಸೋಡ್ ನೋಡಿದಾಗ ನನಗೆ ಕಾಣಿಸಿರೋದು ಒಂದು ವ್ಯಕ್ತಿಯ ಹಠ, ಫೋಕಸ್. ನಮ್ಮನ್ನು ಯಾರು ಕಡೆಗಣಿಸಿರುತ್ತಾರೋ ಅವರ ಬಾಯಲ್ಲಿ ಉತ್ತಮ ಅನ್ನಿಸಿಕೊಳ್ಳೋದೆ ಗೆಲುವಿನ ಹಾದಿ. ನನ್ನ ಚಪ್ಪಾಳೆ ಧ್ರುವಂತ್ ಅಂಡ್ ಅಶ್ವಿನಿ ಅವರಿಗೆ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: https://kannada.newsnext.live/cinema/gill-nata-is-the-captain-but-wrong-in-his-judgment/

ಇಬ್ಬರು ಭಾವುಕ
ಅದು ಅವರ ಫೋಟೋವನ್ನು ಗಿಲ್ಲಿ ಮತ್ತು ರಕ್ಷಿತಾ ಕೈನಲ್ಲಿ ಕೊಡಿಸಿದ್ದಾರೆ. ಇಬ್ಬರು ತುಂಬಾ ಖುಷಿಯಾಗಿದ್ದಾರೆ. ಖುಷಿಗೆ ಭಾವುಕರಾಗಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories