Tippu Salam: ಟಿಪ್ಪು ಸಲಾಂ ಆರತಿಗೆ ಬ್ರೇಕ್‌!: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್‌

ಉಡುಪಿ: (Tippu Salam) ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧರ್ಮ ದಂಗಲ್‌ ಮತ್ತೆ ಪ್ರಾರಂಭವಾಗಿದೆ. ಹಿಂದೂ ದೇಗುಲದ ಜಾತ್ರೆಗಳಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ವಹಿವಾಟು ನಡೆಸದಂತೆ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಇಷ್ಟು ಸಮಯಗಳ ಕಾಲ ವ್ಯಾಪಾರ ವಹಿವಾಟುಗಳಲ್ಲಿ ಧರ್ಮದಂಗಲ್‌ ನಡೆಯುತ್ತಿತ್ತು. ಆದರೆ ಇದೀಗ ದೇವಸ್ಥಾನದ ಪೂಜೆಗಳಿಗೂ ಧರ್ಮದಂಗಲ್‌ ನ ನೆರಳು ಆವರಿಸಿಕೊಂಡಿದೆ. ಟಿಪ್ಪು ಸುಲ್ತಾನ್‌ ವಿರುದ್ದದ ತಿಕ್ಕಾಟಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದ್ದು, ಟಿಪ್ಪು ಕಾಲದಿಂದಲೂ ಹಿಂದೂ ದೇವಾಲಯಗಳಲ್ಲಿ ನಡೆಸಿಕೊಂಡ ಬಂದಿದ್ದ ದೀವಟಿಗೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್‌ ಬ್ರೇಕ್‌ ನೀಡಿದೆ.

ಮೊದಲು ಹಿಜಾಬ್ ವಿಚಾರದಲ್ಲಿ ಶುರುವಾದ ಧರ್ಮ ಸಂಘರ್ಷ ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಮುಸ್ಲಿಂ ವ್ಯಾಪಾರ, ಹಲಾಲ್ ಮಾಂಸ ನಿಷೇಧ ಬಳಿಕ ದೀವಟಿಗೆ ಸಲಾಂ (Tippu Salam) ಆರತಿಯವರೆಗೂ ಬಂದಿದೆ. ಪ್ರತಿ ದಿನ ಸಂಜೆ ಕರಾವಳಿಯ ಪ್ರಸಿದ್ದ ಹಿಂದೂ ಧಾರ್ಮಿಕ ದೇವಾಲಯಗಳಾದ ಕೊಲ್ಲೂರು, ಕಮಲಶಿಲೆ, ಮಂದಾರ್ತಿ, ಕುಕ್ಕೆ ಸುಬ್ರಹ್ಮಣ್ಯ, ಮಹಾಲಿಂಗೇಶ್ವರ ದೇವಾಲಯಗಳಲ್ಲಿ ನಡೆಯುತ್ತಿದ್ದ ದೀವಟಿಗೆ ಸಲಾಂ ಪೂಜೆಯನ್ನು ನಡೆಸದಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪ್ರತಿನಿತ್ಯ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಗರ್ಭಗುಡಿಯ ಪೂಜೆ ಬಳಿಕ ಆಚೆಗೆ ಪಂಜು ಹಿಡಿದು ಬರುವ ವ್ಯಕ್ತಿ ನಡುವನ್ನ ಅರ್ಧ ಬಗ್ಗಿಸಿ ದೇವರಿಗೆ ಆರತಿ ಮಾಡುತ್ತಾರೆ. ಈ ಆರತಿಯನ್ನ ದೀವಟಿಗೆ ಸಲಾಂ ಎಂದು ಕರೆಯುತ್ತಾರೆ. ಇದು ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಆರಂಭವಾದ ಪದ್ದತಿ. ಈ ಪದ್ದತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಇಲ್ಲಿಯವರೆಗೂ ಪಾಲಿಸಿಕೊಂಡು ಬಂದಿತ್ತು. ಆದರೆ ಕೆಲ ಹಿಂದೂ ಸಂಘಟನೆಗಳು ದೇವಸ್ಥಾನಗಳಲ್ಲಿ ನಡೆಯುವ ಸಲಾಂ ಆರತಿ ನಿಲ್ಲಿಸುವಂತೆ ಜಿಲ್ಲಾಡಳಿತ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿತ್ತು. ಇದರಂತೆ ಧಾರ್ಮಿಕ ದತ್ತಿ ಇಲಾಖೆಯು ದೇವಾಲಯಗಳಲ್ಲಿ ನಡೆಯುವ ದೀವಟಿಗೆ ಸಲಾಂ ಪೂಜೆಯನ್ನು ನಡೆಸಬಾರದು, ಇದರ ಬದಲಾಗಿ ದೀಪ ನಮಸ್ಕಾರ ಪೂಜೆ ನಡೆಸಿ ಎಂದು ಸೂಚನೆ ನೀಡಿದೆ.

ಇದನ್ನೂ ಓದಿ : Attack on Byndur boys:‌ ಬೆಂಗಳೂರಲ್ಲಿ ಬೈಂದೂರು ಹುಡುಗರ ಮೇಲೆ ಹಲ್ಲೆ ಪ್ರಕರಣ: ಮೂವರು ಅರೆಸ್ಟ್

ಇದನ್ನೂ ಓದಿ : ಕಾರ್ಕಳದಲ್ಲಿ ಕಾರು ಬಸ್ ಭೀಕರ ಅಪಘಾತ : ಮಗು ಸೇರಿ ಮೂವರು ಸಾವು

ಅಲ್ಲದೆ ಮುಜರಾಯಿ ಇಲಾಖೆ ಎಂದು ಇದ್ದ ಹೆಸರನ್ನು ಬದಲಾಯಿಸಿ ಧರ್ಮದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ.

(Tippu Salam) Dharma Dangal has started again in Hindu religious events. Pro-Hindu organizations have insisted that non-religious people should not be allowed to do business in Hindu temple fairs. Dharmadangal was used in business transactions for so long.

Comments are closed.