Samantha Akkineni and Naga Chaitanya : ದಾಂಪತ್ಯ ಜೀವನಕ್ಕೆ ಮಂಗಳ ಹಾಡಿದ ಸಮಂತಾ, ನಾಗ ಚೈತನ್ಯ ದಂಪತಿ

ಹೈದರಾಬಾದ್ : ಹಲವು ದಿನಗಳಿಂದ ಹರಿದಾಡುತ್ತಿರುವ ಟಾಲಿವುಡ್‍ನ ಸ್ಟಾರ್ ದಂಪತಿ ನಟ ನಾಗಚೈತನ್ಯ, ನಟಿ ಸಮಂತಾ ವಿಚ್ಛೇದನ ವಿಚಾರಕ್ಕೆ ಸ್ವತಃ ದಂಪತಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರೂ ವಿಚ್ಚೇದನ ಪಡೆಯುತ್ತಿರುವುದನ್ನುಖಚಿತ ಪಡಿಸಿದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್‍ನ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.

ಸಮಂತಾ ತನ್ನ ಹೆಸರಿನ ಮುಂದಿದ್ದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರು. ಅಲ್ಲದೇ ಮಾವ ನಾಗಾರ್ಜುನ ಹುಟ್ಟು ಹಬ್ಬದ ವೇಳೆಯಲ್ಲಿಯೂ ಸಮಂತಾ ಬಾಗಿಯಾಗಿರಲಿಲ್ಲ. ಇದೇ ಕಾರಣಕ್ಕೆ ಸಮಂತಾ ಮತ್ತು ನಾಗಚೈತನ್ಯ ಡೈವೋರ್ಸ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಆದ್ರೀಗ ಎಲ್ಲಾ ಸುದ್ದಿಗೂ ಬ್ರೇಕ್‌ ಬಿದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ದಂಪತಿ, ಕಷ್ಟ ಕಾಲದಲ್ಲಿ ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮದವರು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ನಾವು ಹೇಗೆ ಮುಂದುವರಿಯ ಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಮಗೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

( Samantha Akkineni and Naga Chaitanya are getting separated )

Comments are closed.