ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್‌ ವೇಳೆ ಬ್ಲೂಟೂತ್‌, ಇಯರ್‌ ಪೋನ್‌ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ

ಬೆಂಗಳೂರು : ​ವಾಹನ ಚಾಲಕರೇ ಎಚ್ಚರ ಎಚ್ಚರ. ವಾಹನ ಚಾಲನೆಯ ವೇಳೆಯಲ್ಲಿ ಸ್ವಲ್ಪ ಯಾಮಾರಿದ್ರೂ ಭಾರೀ ದಂಡ ಬೀಳೋದು ಖಚಿತ. ಡ್ರೈವಿಂಗ್‌ ವೇಳೆ ಮೊಬೈಲ್‌, ಬ್ಲೂಟೂತ್‌, ಇಯರ್‌ ಪೋನ್‌ ಮಾತ್ರವಲ್ಲ ಗೂಗಲ್‌ ಮ್ಯಾಪ್‌, ಸೌಂಡ್‌ ಸಿಸ್ಟಮ್ಸ್‌ ಬಳಸಿದ್ರೂ ದಂಡ ಬೀಳುತ್ತೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ನಗರ ಸಂಚಾರಿ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಒಂದು ವೇಳೆ ನೀವು ಬ್ಲ್ಯೂಟೂತ್​ ಅಥವಾ ಹೆಡ್​ಫೋನ್​ ಬಳಸಿ ವಾಹನ ಚಲಾಯಿಸಿದ್ರೆ ಶಿಕ್ಷೆಯ ಜೊತೆಗೆ 1000 ರೂಪಾಯಿಯ ದಂಡ ವಿಧಿಸಲು ಮುಂದಾಗಿದ್ದಾರೆ.

ಹಲವರು ಬ್ಲೂಟೂತ್‌, ಇಯರ್‌ ಪೋನ್‌ ಬಳಸಿ ವಾಹನ ಸಂಚಾರ ಮಾಡ್ತಾರೆ. ಹೀಗೆ ಮಾಡುವುದು ಕೂಡ ಅಪರಾಧ. ಕೇವಲ ದ್ವಿಚಕ್ರ ವಾಹನವಷ್ಟೇ ಅಲ್ಲಾ ನಾಲ್ಕು ಚಕ್ರದ ವಾಹನ ಸವಾರರಿಗೂ ಈ ನಿಯಮ ಅನ್ವಯಿಸುತ್ತೆ. ಬೈಕ್‌ ಅಥವಾ ಕಾರಿನಲ್ಲಿ ಗೂಗಲ್‌ ಮ್ಯಾಪ್‌ ಬಳಕೆ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ಒಂದೊಮ್ಮೆ ಗೂಗಲ್‌ ಮ್ಯಾಪ್‌ ಬಳಕೆ ಮಾಡಬೇಕಾದ್ರೆ ಮೊಬೈಲ್‌ ಸ್ಟ್ಯಾಂಡ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ : ಮೂರು ದಿನಗಳಿಂದ ಗಗನದತ್ತ ಸಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

ಅಷ್ಟೇ ಅಲ್ಲಾ ವಾಹನಗಳಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದಿದೆ. ಒಂದೊಮ್ಮೆ ವಾಹನ ಚಾಲನೆಯ ವೇಳೆಯಲ್ಲಿ ಸಿಗ್ನಲ್‌ ನಲ್ಲಿಯೂ ಮೊಬೈಲ್‌ ಬಳಕೆಯನ್ನು ಮಾಡುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬಂದ್ !ಈ ಲಿಸ್ಟ್‌ನಲ್ಲಿ ನಿಮ್ಮ ಖಾತೆಯೂ ಇದೆಯಾ

( Using Bluetooth and Earphone Google Maps while driving is a fine in Bangalore )

Comments are closed.