totapuri : ದಸರಾ ಹಬ್ಬಕ್ಕೆ ಸಿನಿ ರಸಿಕರಿಗೆ ಧಮಾಕಾ : ತೆರೆ ಮೇಲೆ ಬರ್ತಿದೆ ‘ತೋತಾಪುರಿ’ ಸಿನಿಮಾ

totapuri : ನವರಸ ನಾಯಕ ಜಗ್ಗೇಶ್​ ಹಾಗೂ ಮಠ ವಿಜಯ್​ ಪ್ರಸಾದ್​ ಕಾಂಬಿನೇಷನ್​ನ ಸಿನಿಮಾಗಳು ಅಂದರೆ ಅದಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ಮಠ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದಾದ ಬಳಿಕ ತೋತಾಪುರಿ ಸಿನಿಮಾದಲ್ಲಿ ಈ ಜೋಡಿ ಮತ್ತೆ ಒಂದಾಗಿತ್ತು. ವಿಜಯ್​ ಪ್ರಸಾದ್​ ಆ್ಯಕ್ಷನ್​ ಕಟ್​​ ಹಾಗೂ ಜಗ್ಗೇಶ್​ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾದ ರಿಲೀಸ್​ ಡೇಟ್​ ಇದೀಗ ಹೊರ ಬಿದ್ದಿದೆ.


ತೋತಾಪುರಿ ಸಿನಿಮಾದ ಟ್ರೈಲರ್​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅಲ್ಲದೇ ನಟಿ ಅದಿತಿ ಪ್ರಭುದೇವ ಹಾಗೂ ನಟ ಜಗ್ಗೇಶ್​ ಕಾಣಿಸಿಕೊಂಡಿದ್ದ ಈ ಸಿನಿಮಾದ ಹಾಡು ಬಾಗ್ಲು ತೆರಿ ಮೇರಿ ಜಾನ್​ ಹಾಡಂತೂ ಪಡ್ಡೆ ಹುಡುಗರ ಹಾಟ್​ ಫೇವರಿಟ್​ ಎನಿಸಿತ್ತು. ಸಿನಿಮಾದ ಹಾಡು, ಟೀಸರ್​ ಹಾಗೂ ಟ್ರೈಲರ್​ಗಳ ಮೂಲಕವೇ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ದಸರಾ ಹಬ್ಬದಂದು ರಿಲೀಸ್​ ಆಗಲಿದೆ. ಈ ಮೂಲಕ ದಸರಾ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡೋಕೆ ಜಗ್ಗೇಶ್​ & ಟೀಂ ಬೆಳ್ಳಿ ತೆರೆ ಮೇಲೆ ಕಮಾಲ್​ ಮಾಡಲಿದ್ದಾರೆ ಎನ್ನಲಾಗಿದೆ.


ಸೆಪ್ಟೆಂಬರ್​ 30ರಂದು ಈ ಸಿನಿಮಾ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ನಟ ಜಗ್ಗೇಶ್​, ಅದಿತಿ ಪ್ರಭುದೇವ, ಸುಮನಾ ರಂಗನಾಥ್​, ಡಾಲಿ ಧನಂಜಯ್​, ದತ್ತಣ್ಣ ಸೇರಿದಂತೆ ಪ್ರಮುಖ ತಾರಾಗಣ ಈ ಸಿನಿಮಾದಲ್ಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಧ್ಯ ಸಾಲು ಸಾಲು ಹಿಟ್​ ಸಿನಿಮಾಗಳೇ ಬರ್ತಿರೋದ್ರಿಂದ ಈ ವರ್ಷ ರಿಲೀಸ್​ ಆಗುತ್ತಿರುವ ಎಲ್ಲಾ ಸಿನಿಮಾಗಳ ಮೇಲೂ ಸಿನಿ ರಸಿಕರಿಗೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.


ಜಗ್ಗೇಶ್​ರ ಕಾಮಿಡಿ ಟೈಮಿಂಗ್​, ಪಂಚಿಂಗ್​ ಡೈಲಾಗ್​​ಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಕರೆಕ್ಟ್​ ಟೈಮ್​ಗೆ ಸೂಕ್ತ ಡೈಲಾಗ್​ ಡೆಲಿವರಿ ಮೂಲಕ ಜಗ್ಗೇಶ್​ ಅಭಿಮಾನಿಗಳಿಗೆ ನಗುವಿನ ಕಚಗುಳಿಯನ್ನು ಇಡುತ್ತಾರೆ. ತೋತಾಪುರಿ ಸಿನಿಮಾದ ಬಳಿಕ ವಿಜಯ್​ ಕಿರಂಗದೂರು ಬಂಡವಾಳ ಹೂಡಿರುವ ರಾಘವೇಂದ್ರ ಸ್ಟೋರ್ಸ್​ ಸಿನಿಮಾ ಕೂಡ ಜಗ್ಗೇಶ್​ ಮುಖ್ಯ ಭೂಮಿಕೆಯಲ್ಲಿಯೇ ನಿರ್ಮಾಣವಾಗ್ತಿದೆ. ಜಗ್ಗೇಶ್​ರ ತೋತಾಪುರಿ ಸಿನಿಮಾ ಕೂಡ ಸ್ಯಾಂಡಲ್​​ವುಡ್​​ನ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾಗಳ ಸಾಲಿಗೆ ಸೇರಲಿ ಎನ್ನುವುದೇ ಸಿನಿ ರಸಿಕರ ಆಶಯ .

ಇದನ್ನು ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್​ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ

ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

totapuri is coming for dussehra

Comments are closed.