ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ದಾಖಲೆಯ ಇಳಿಕೆ

0

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದಿನಿಂದ ಲಾಕ್​ಡೌನ್ 3.0​ ಆದೇಶಿಸಲಾಗಿದೆ. ಲಾಕ್ ಡೌನ್ ನಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರದಲ್ಲಿ ಬಾರೀ ಇಳಿಕೆ ಮಾಡಿದೆ. ಇದರಿಂದಾಗಿ ಮಧ್ಯಮ ಹಾಗೂ ಬಡವರ್ಗದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರ ಸರಕಾರ ಸಬ್ಸಿಡಿರಹಿತ ಸಿಲಿಂಡರ್​ಗಳ ಮೇಲಿನ ಬೆಲೆಯಲ್ಲಿ 192 ರೂ. ಕಡಿಮೆಗೊಳಿಸಿದೆ. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು ಕಡಿತಗೊಳಿಸಿದಂತಾಗಿದೆ.

ಭಾರತೀಯ ಅನಿಲ ಮತ್ತು ಗ್ಯಾಸ್​ ಕಂಪನಿಗಳ ಉತ್ಪಾದನೆಯ ಮೌಲ್ಯ ಕಡಿಮೆ ಆಗಿರವುದರಿಂದ ಸಿಲಿಂಡರ್ ಬೆಲೆಯನ್ನು ದಾಖಲೆಯ ಮೊತ್ತಕ್ಕೆ ಕಡಿತಗೊಳಿಸಲಾಗಿದೆ.

ದೇಶದಾದ್ಯಂತ 14.2 ಕೆ.ಜಿ. ಸಿಲಿಂಡರ್​ಗಳ ಬೆಲೆ ದೆಹಲಿಯಲ್ಲಿ 744 ರೂ. ಇದ್ದು, ಇದೀಗ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ ಬೆಲೆ 581.50 ರೂ. ಇಳಿಕೆಯಾಗಿದೆ. ಮುಂಬೈನಲ್ಲಿ 714.50 ರೂ. ನಿಂದ ಇದೀಗ 579 ರೂ. ಇಳಿದಿದೆ.

ಕೊಲ್ಕತಾದಲ್ಲಿ 774.50 ರೂ.ನಿಂದ 585.50 ರೂ.ಗೆ ಇಳಿಕೆಯಾಗಿದ್ರೆ, ಚೆನ್ನೈನಲ್ಲಿ 761.50 ರೂ.ನಿಂದ 569.50 ರೂ.ಗೆ ಎಲ್​ಪಿಜಿ ದರ ಇಳಿಕೆಯಾಗಿದೆ.

Leave A Reply

Your email address will not be published.