Uppi avatar-video viral: ಕಬ್ಜದಲ್ಲಿ ಉಪ್ಪಿ ಅವತಾರ: ವೈರಲ್ ಆಯ್ತು ಪ್ರಿಯಾಂಕಾ ಶೇರ್ ಮಾಡಿದ ವಿಡಿಯೋ

(Uppi avatar-video viral) ಇನ್ನೇನು ರಿಲೀಸ್ ಗೆ ರೆಡಿಯಾಗಿರೋ ಕಬ್ಜ ಸಿನಿಮಾ ಸ್ಯಾಂಡಲ್ ವುಡ್ ಮತ್ತಷ್ಟು ಹೆಸರು ತರೋ ನೀರಿಕ್ಷೆ ಮೂಡಿಸಿದೆ. ಇದರೊಂದಿಗೆ ಮತ್ತೊಮ್ಮೆ ಆರ್. ಚಂದ್ರು ಹಾಗೂ ಉಪೇಂದ್ರ ಕಾಮಿನೇಶನ್ ಮೋಡಿ ಮಾಡೋ ಸಾಧ್ಯತೆ ಇದೆ. ಈ ಮಧ್ಯೆ ನಟ ಉಪೇಂದ್ರ್ ಹಾಟ್ ಹಾಟ್ ಬೆಡಗಿ ಜೊತೆ ಕುಣಿದ ವಿಡಿಯೋ ಶೇರ್ ಮಾಡಿದ ಪ್ರಿಯಾಂಕಾ ಶುಭಹಾರೈಸಿದ್ದಾರೆ. ಸಾಮಾನ್ಯವಾಗಿ ನಟಿಯರಿಗೆ ತಮ್ಮ ಪತಿ ನಟರಾಗಿದ್ದರೂ ಹಿರೋಯಿನ್ ಗಳ ಜೊತೆ ಡ್ಯಾನ್ಸ್ ಮಾಡೋದನ್ನು, ರೋಮ್ಯಾನ್ಸ್ ಮಾಡೋದನ್ನು ನೋಡಿ ಸಹಿಸಿಕೊಳ್ಳೋದು ಕಷ್ಟವೇ‌. ಹೀಗಾಗಿ ಶೂಟಿಂಗ್ ಗಳಿಗೆ ಹೋಗೋಕೆ ಇಷ್ಟ ಪಡಲ್ಲ ಎಂದು ನಟರ ಪತ್ನಿಯರು ಇಂಟರವ್ಯೂಗಳಲ್ಲಿ ಹೇಳಿಕೊಳ್ತಾರೆ.

ಆದರೆ ವಿಭಿನ್ನ ನಟ ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರ್ ಮಾತ್ರ ಇದಕ್ಕೆ ಭಿನ್ನವಾಗಿದ್ದಾರೆ. ಹೌದು ಇನ್ನೇನು ರಿಲೀಸ್ ಗೆ ರೆಡಿಯಾಗಿರೋ ಕಬ್ಜ ಸಿನಿಮಾಗೆ ನಟಿ ಉಪೇಂದ್ರ್ ವಿಭಿನ್ನವಾಗಿ ಶುಭಹಾರೈಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ್, ಪತಿ ಉಪೇಂದ್ರ್ ಅವರು ನಟಿಯೊಂದಿಗೆ ಕಬ್ಜ ಹಾಡಿಗೆ ಕುಣಿಯುತ್ತಿರೋ ವಿಡಿಯೋ ಹಂಚಿಕೊಂಡಿದ್ದಾರೆ. ತುಂಡು ಉಡುಗೆಯಲ್ಲಿರೋ ಹಿರೋಯಿನ್ ಜೊತೆ ಉಪ್ಪಿ ಕುಡಿಯೋ ಎಣ್ಣೆಗೂ ಕುಣಿಯೋ ಹೆಣ್ಣಿಗೂ ಎಂದು ಸಖತ್ ಸ್ಟೆಪ್ ಹಾಕಿದ್ದಾರೆ.

ಎಂದಿನಂತೆ ತಮ್ಮ ಸಿಗ್ನೇಚರ್ ಸ್ಟೆಪ್ ನಲ್ಲಿ ಉಪ್ಪಿ ಕುಣಿದಿದ್ದು ಈ ವಿಡಿಯೋವನ್ನು ಪ್ರಿಯಾಂಕಾ ಇನ್ ಸ್ಟಾಗ್ರಾಂನಲ್ಲಿ ನಲ್ಲಿ all the best uppi,kabja ಎಂಬ ವಿಶ್ ಜೊತೆ ಹಂಚಿಕೊಂಡಿದ್ದಾರೆ. ಇನ್ನು ಪ್ರಿಯಾಂಕಾ ಹಂಚಿಕೊಂಡಿರೋ ವಿಡಿಯೋಗೆ ಸಾವಿರಾರು ಲೈಕ್ಸ್ ಹರಿದು ಬಂದಿದ್ದು, ಬಹುತೇಕರು ಈ ಹುಡುಗಿ ಯಾರು ಅತ್ತಿಗೆ ಎಂದು ಪ್ರಿಯಾಂಕಾ ಉಪೇಂದ್ರ್ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಮಾರ್ಚ್ 17 ರಂದು ಬಹುಭಾಷೆಯಲ್ಲಿ ಕಬ್ಜ ಸಿನಿಮಾ ತೆರೆಗೆ ಬರಲಿದ್ದು, ಉಪ್ಪಿಗೆ ಸ್ಯಾಂಡಲ್ ವುಡ್ ನ ದಿಗ್ಗಜ ನಾಯಕರು ಈ ಸಿನಿಮಾದಲ್ಲಿ ಸಾಥ್ ನೀಡಿದ್ದಾರೆ.

ಶ್ರೀಯಾ ಶರಣ ನಾಯಕಿಯಾಗಿರೋ ಈ ಸಿನಿಮಾದ ರಿಲೀಸ್ ಸಾಂಗ್ ಗಳು ಕೂಡ ಸಖತ್ ಮೋಡಿ ಮಾಡಿದ್ದು, ಸಿನಿಮಾ ಭೂಗತಲೋಕದ ಕತೆಯನ್ನು ತೆರೆಗೆ ತರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಈಗಾಗಲೇ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗಳು‌ಕಳೆಗಟ್ಟಿದ್ದು, ಸಿನಿಮಾದ ವೀಕ್ಷಕ ಪ್ರಭುಗಳು ಉಪ್ಪಿ ಕಬ್ಜಾಗೆ ಎಷ್ಟು ಮಾರ್ಕ್ಸ್ ಕೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ “ಕಬ್ಜ” ರಿಲೀಸ್‌ : ಕಾರಣ ತಿಳಿಸಿದ ಆರ್‌ ಚಂದ್ರು

Uppi avatar-video viral: Uppi avatar in Kabja: Video shared by Priyanka went viral

Comments are closed.