Jackfruit Flour : ಹಲಸಿನಕಾಯಿ ಹಿಟ್ಟು ಮಧುಮೇಹಿಗಳಿಗೂ ಬೆಸ್ಟ್‌; ಅಧ್ಯಯನ ಹೇಳಿದ್ದೇನು…

ಬೇಸಿಗೆ (Summer) ಯಲ್ಲಿ ಸಿಗುವ ರುಚಿಯಾದ ಹಣ್ಣು ಹಲಸಿನ ಹಣ್ಣು (Jackfruit). ದಪ್ಪಗಿನ ಹಸಿರು ಬಣ್ಣದ ಹೊರಮೈ ಹೊಂದಿರುವ ಹಲಸು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ವಿಶಿಷ್ಟ ಪರಿಮಳ, ರುಚಿ ಜೊತೆಗೆ ಅದರಲ್ಲಿರುವ ಮೇಣದಿಂದ ಜನಪ್ರಿಯತೆಯನ್ನು ಗಳಿಸಿದೆ. ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣಾದ ಹಲಸು, ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಹಲಸಿನ ಹಣ್ಣಿನ ಜೊತೆಗೆ ಅದರ ಕಾಯಿಯೂ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಹಲಸಿನಕಾಯಿಯಲ್ಲಿರುವ ಕಡಿಮೆ ಸಕ್ಕರೆ ಗುಣಮಟ್ಟದಿಂದಾಗಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ಅಧ್ಯಯನದಲ್ಲಿ, ಮಧುಮೇಹ ರೋಗಿಗಳ ಆಹಾರದಲ್ಲಿ ಹಲಸಿನಕಾಯಿ ಹಿಟ್ಟನ್ನು (Jackfruit Flour) ಸೇರಿಸುವುದರಿಂದ ಫ್ಯಾಟಿ ಲಿವರ್‌ ಸಮಸ್ಯೆಯನ್ನು ಸುಧಾರಿಸುತ್ತದೆ ಮತ್ತು ರೋಗಿಗಳಲ್ಲಿ ಹಿಮೋಗ್ಲೋಬಿನ್ A1c (HbA1c) ಮಟ್ಟವನ್ನು ಸುಧಾರಿಸುತ್ತದೆ ಎಂದು ಕಂಡುಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ಆರೋಗ್ಯ ತಜ್ಞರು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಆಹಾರದಲ್ಲಿ ಹಲಸಿನಕಾಯಿ ಹಿಟ್ಟನ್ನು ಸೇರಿಸಲು ಸಲಹೆ ನೀಡುತ್ತಿದ್ದಾರೆ.

ಹಲಸಿನ ಕಾಯಿ ಹಿಟ್ಟು ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿ?

ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಆಹಾದಲ್ಲಿನ ಒಂದು ತಪ್ಪಿನಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಹಾಗೇ ಅದು ಅಪಾಯಕಾರಿ ಮಟ್ಟವನ್ನು ತಲುಪಬಹುದು. ಹಲಸಿನಕಾಯಿಯಲ್ಲಿರುವ ಕಡಿಮೆ ಸಕ್ಕರೆ ಗುಣಮಟ್ಟದಿಂದಾಗಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳ ಆಹಾರದಲ್ಲಿ ಕೇವಲ 30 ಗ್ರಾಂ ಹಲಸಿನ ಕಾಯಿ ಹಿಟ್ಟನ್ನು ಸೇರಿಸುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು.

ಫ್ಯಾಟಿ ಲಿವರ್ ರೋಗಿಗಳಿಗೂ ಪ್ರಯೋಜನಕಾರಿ :
ಹಲಸಿನಕಾಯಿ ಹಿಟ್ಟನ್ನು ನಿಯಮಿತವಾಗಿ ಸೇವಿಸಿದರೆ, ಗ್ಲೈಸೆಮಿಕ್ ವ್ಯತ್ಯಾಸ ಸೇರಿದಂತೆ ಅನೇಕ ಚಯಾಪಚಯ ಕ್ರಿಯೆಯಲ್ಲಿಯೂ ಪ್ರಯೋಜನ ಪಡೆಯಬಹುದು. ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಲ್ಲಿ (NAFLD) ಹಲಸಿನ ಕಾಯಿ ಹಿಟ್ಟನ್ನು ಸೇವಿಸುವುದರಿಂದ ಆರೋಗ್ಯ ಸುಧಾರಣೆಯಾಗಿರುವುದನ್ನು ಕೆಲವು ರೋಗಿಗಳು ಹೇಳಿದ್ದಾರೆ. ಆದರೆ ಅದನ್ನು ವೈದ್ಯರು ಸೂಚಿಸಿದ ಪ್ರಮಾಣಕ್ಕೆ ಅನುಗುಣವಾಗಿ ಮಾತ್ರ ಸೇವಿಸಬೇಕು.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:
30 ಗ್ರಾಂ ಹಲಸಿನಕಾಯಿ ಹಿಟ್ಟು 50 ಗ್ರಾಂ ಗೋಧಿ, ಅಕ್ಕಿ ಅಥವಾ ರಾಗಿ ಹಿಟ್ಟಿಗೆ ಸಮವಾಗಿದೆ. ಅಷ್ಟೇ ಅಲ್ಲ, 30 ಗ್ರಾಂ ಹಲಸಿನ ಕಾಯಿ ಹಿಟ್ಟಿನಲ್ಲಿ 50 ಗ್ರಾಂ ಅಕ್ಕಿ, ಗೋಧಿ ಮತ್ತು ರಾಗಿ ಹಿಟ್ಟಿಗಿಂತ ಹೆಚ್ಚು ಕರಗುವ ನಾರಿನಂಶವಿದೆ. ಹಾಗಾಗಿ ಹಲಸಿನಕಾಯಿ ಹಿಟ್ಟು ತೂಕ ಇಳಿಕೆಯಲ್ಲಿಯೂ ಉತ್ತಮವಾಗಿದೆ.

ಇದನ್ನೂ ಓದಿ : ವಾಯು ಮಾಲಿನ್ಯದಿಂದ ಮಹಿಳೆಯರಿಗೆ ಕಾಡಲಿದೆ ಆಸ್ಟಿಯೊಪೊರೋಸಿಸ್ : ಈ ಬಗ್ಗೆ ಅಧ್ಯಯನ ಹೇಳುವುದೇನು ?

ಇದನ್ನೂ ಓದಿ : ನಿಮ್ಮ ಆಯಾಸವನ್ನು ನಿವಾರಿಸಿಕೊಳ್ಳಲು ಹೀಗೆ ಮಾಡಿ

(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸೂಚನೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

(Do you know the Jackfruit Flour Benefits? How it helps for diabetes, fatty liver disease, and weight loss.)

Comments are closed.