Shivrajkumar : ಶಿವರಾಜ್‌ ಕುಮಾರ್‌ ಜೊತೆಗೆ ತೆರೆಗೆ ಬರಲು ಸಜ್ಜಾದ ಉಪ್ಪಿ

ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌(shivrajkumar) ಹಾಗೂ ರಿಯಲ್‌ ಸ್ಟಾರ್‌ ಉಪ್ಪಿ ಸ್ಯಾಂಡಲ್‌ವುಡ್‌ನ ಒನ್‌ ಆಫ್‌ ದಿ ಬೆಸ್ಟ್‌ ಜೋಡಿ. ನಿರ್ದೇಶಕರ ಪಾಲಿನ ಗಾಡ್‌ಫಾದರ್‌ ಉಪೇಂದ್ರ ನಿರ್ದೇಶನದ ಶಿವರಾಜ್‌ ಕುಮಾರ್‌ ನಟನೆಯ ಓಂ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯನ್ನೇ ಸೃಷ್ಟಿಸಿತ್ತು. ಓಂ ಸಿನಿಮಾ ಬಿಡುಗಡೆಯಾಗಿ ಎರಡು ದಶಕಗಳೇ ಕಳೆದಿದ್ದರೂ ಕೂಡ ಇಂದಿಗೂ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆದ್ರೆ ಹೌಸ್‌ಪುಲ್‌ ಪ್ರದರ್ಶನವನ್ನು ಕಾಣುತ್ತೆ. ಅಷ್ಟರ ಮಟ್ಟಿಗೆ ಶಿವಣ್ಣ ಹಾಗೂ ಉಪ್ಪಿ ಕಾಂಬಿನೇಷನ್‌ ವರ್ಕೌಟ್‌ ಆಗಿದೆ. ಈ ಜೋಡಿ ಮತ್ತೆ ಒಟ್ಟಾಗಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ ?ಹೌದು, ಇದೀಗ ಶಿವರಾಜ್‌ ಕುಮಾರ್‌ ಹಾಗೂ ಉಪೇಂದ್ರ ಜೋಡಿ ಮತ್ತೆ ತೆರೆಯ ಮೇಲೆ ಬರಲು ಸಿದ್ದವಾಗಿದೆ. ಆದರೆ ಉಪ್ಪಿ ನಿರ್ದೇಶಕರಾಗಿ ಅಲ್ಲಾ, ಬದಲಾಗಿ ನಟನಾಗಿ ಶಿವಣ್ಣನಿಗೆ ಸಾಥ್‌ ನೀಡಲು ಮುಂದಾಗಿದ್ದಾರೆ.

ಸ್ಯಾಂಡಲ್‌ವುಡ್‌ ನ ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವಣ್ಣ ಜೊತೆಯಲ್ಲಿ ನಟನಾಗಿ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲು ಸಜ್ಜಾಗಿದ್ದಾರೆ. ಉಪೇಂದ್ರ ಹಾಗೂ ಶಿವರಾಜ್‌ಕುಮಾರ್‌ ಜೊತೆಯಾಗಿ ಈ ಹಿಂದೆ ಪ್ರೀತ್ಸೆ ಹಾಗೂ ಲವಕುಶ ಸಿನಿಮಾದಲ್ಲಿ ತೆರೆಯನ್ನು ಹಂಚಿ ಕೊಂಡಿದ್ದರು, ಇದೀಗ ಅಭಿಮಾನಿಗಳಿಗೆ ಮತ್ತೆ ಈ ಜೋಡಿಯನ್ನು ಕಾಣುವ ಅವಕಾಶ ಬಂದೊದಗಿದೆ. ಉಪೇಂದ್ರ ನಿರ್ದೇಶಿಸಿದ್ದ ಓಂ ಚಿತ್ರವನ್ನು ನೋಡಿ ಮತ್ತೆ ಯಾವಾಗ ಉಪ್ಪಿ ಶಿವಣ್ಣನಿಗೆ ನಿರ್ದೇಶನವನ್ನು ಮಾಡುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಈ ಬಾರಿ ನಿರ್ದೇಶನದ ಬದಲಾಗಿ ಉಪ್ಪಿ ಶಿವಣ್ಣನ ಜೊತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

ಇದನ್ನೂ ಓದಿ : Zaid Khan : ನನಗೂ ನನ್ನ ಅಪ್ಪನಿಗೆ ಸಂಬಂಧವಿಲ್ಲ ಎಂದ ಝೈದ್ ಖಾನ್‌ : ಟ್ರೋಲ್‌ ಆದ ಜಮೀರ್‌ ಖಾನ್ ಪುತ್ರ

ಇದನ್ನೂ ಓದಿ : Prerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಚಿತ್ರಕ್ಕೆ ಕೆಲ ಸಮಯದ ಹಿಂದೆ ಶಿವರಾಜ್‌ಕುಮಾರ್‌(shivrajkumar) ಹುಟ್ಟು ಹಬ್ಬದಂದು 45 ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು. ಅರ್ಜುನ್‌ ಜನ್ಯ ಸಂಗೀತ ಹಾಗೂ ನಿರ್ದೇಶನವಿರುವ ಸಿನಿಮಾಕ್ಕೆ ಗಾಳಿಪಟ-2 ಚಿತ್ರವನ್ನು ನಿರ್ಮಾಣ ಮಾಡಿ ಹಿಟ್‌ ಎನಿಸಿಕೊಂಡ ರಮೇಶ್‌ ರೆಡ್ಡಿ ಬಂಡವಾಳ ಹೂಡಿದ್ದಾರೆ. 3 ಹಿಟ್‌ ಸಿನಿಮಾವನ್ನು ಮಾಡಿದ್ದ ಜೋಡಿ ಮತ್ತೆ ಒಂದಾದ್ರೆ ಹಿಟ್‌ ಆಗೋದ್ರಲ್ಲಿ ನೋ ಡೌಟ್

.Uppi is all set to hit the screens with Shivraj Kumar

Comments are closed.