Shahjahanpur Truck bus accident: ದಟ್ಟ ಮಂಜಿನಿಂದಾಗಿ ಟ್ರಕ್‌-ಬಸ್ ಢಿಕ್ಕಿ: 18 ಮಂದಿಗೆ ಗಾಯ

ಶಹಜಹಾನ್‌ಪುರ: (Shahjahanpur Truck bus accident) ರಸ್ತೆಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಕಾರಣ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕರು ಹಾಗೂ ಬಸ್‌ ನ ಪ್ರಯಾಣಿಕರು ಸೇರಿ 18 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್‌ ಪುರದಲ್ಲಿ ನಡೆದಿದೆ.

ಷಹಜಾನ್‌ಪುರದಿಂದ ಪಾಲಿಯಾಗೆ ಹೋಗುತ್ತಿದ್ದ ಬಸ್‌ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಇದ್ದ ಕಾರಣ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಈ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯಿಂದಾಗಿ ಘರ್ಷಣೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದರು. ಪರಿಣಾಮ ಬಸ್‌ ಪ್ರಯಾಣಿಕರು ಹಾಗೂ ಚಾಲಕರು ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.

ಬಸ್‌ನ ಪ್ರಯಾಣಿಕರು ಮತ್ತು ವಾಹನಗಳ ಚಾಲಕರು ಸೇರಿದಂತೆ 18 ಜನರು ಗಾಯಗೊಂಡಿದ್ದು, ಅವರನ್ನು ಇಲ್ಲಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋ ಸ್ಟಾರ್‌ ಈವೆಂಟ್‌ ಸೈಟ್‌ನಲ್ಲಿ ಸ್ಪೋಟ: ತಪ್ಪಿದ ಬಾರೀ ಅನಾಹುತ

ಮಣಿಪುರ: ಇಂಫಾಲ್‌ ಫ್ಯಾಶನ್‌ ಶೋ ಕಾರ್ಯಕ್ರಮದ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದ್ದು, ಈ ವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಇಂಫಾಲ್‌ ಪೂರ್ವದ ಹಟ್ಟ ಕಂಜೇಲ್‌ ಬಂಗ್‌ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿಲಿಯೋನ್‌ ಭಾಗವಹಿಸಬೇಕಿತ್ತು.

ಇದನ್ನೂ ಓದಿ : Mudubidire murder: ಮೂಡುಬಿದಿರೆ: ಟಿಪ್ಪರ್‌ ಚಲಾಯಿಸಿ ವ್ಯಕ್ತಿಯ ಕೊಲೆ

ಇದನ್ನೂ ಓದಿ : Three from Mangalore died: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಮಂಗಳೂರು ಮೂಲದ ಮೂವರು ಸಾವು

ಇದನ್ನೂ ಓದಿ : Auto driver murder case: ದೆಹಲಿ ಆಟೋ ಚಾಲಕನ ಕೊಲೆ ಪ್ರಕರಣ: ಮುಖ್ಯ ಆರೋಪಿ ಅರೆಸ್ಟ್‌

ಇಂಫಾಲ್‌ ಪೂರ್ವದ ಹಟ್ಟ ಕಂಜೇಲ್‌ ಬಂಗ್‌ ಪ್ರದೇಶದಲ್ಲಿ, ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಿಂದ ನೂರು ಮೀಟರ್‌ ದೂರದಲ್ಲಿ ಈ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಚೈನೀಸ್‌ ಗ್ರೆನೈಡ್‌ ರೀತಿ ಸಾಧನ ಸ್ಫೋಟಗೊಂಡಿದ್ದು, ಈ ಕೃತ್ಯದ ತನಿಖೆ ನಡೆಯುತ್ತಿದೆ. ಈ ವರೆಗೂ ಯಾವುದೇ ಭಯೋತ್ಪಾದನಾ ಸಂಘಟನೆಗಳು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.

Shahjahanpur Truck bus accident: Truck-bus collision due to dense fog: 18 injured

Comments are closed.