“Varaha Rupam..”Song: ಬದಲಾಯಿತು ಕಾಂತಾರ “ವರಾಹ ರೂಪಂ..” ಸಾಂಗ್‌ ಟ್ಯೂನ್‌

(“Varaha Rupam..”Song) ಕಾಂತಾರ ಸಿನಿಮಾ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ಸನ್ನು ಕಾಣುತ್ತಿದೆ. ಇದರ ಮಧ್ಯೆ ಕಾಂತಾರ ಚಿತ್ರತಂಡ ವಿವಾದವೊಂದನ್ನು ಎದುರಿಸಬೇಕಾಗಿ ಬಂದಿತ್ತು. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ವರಾಹ ರೂಪಂ.. ಹಾಡನ್ನು ಅನುಮತಿ ಇಲ್ಲದೇ ಚಿತ್ರದಲ್ಲಿ ಬಳಕೆ ಮಾಡಿದೆ ಎಂದು ಥಾಯ್ಕುಡಂ ಬ್ರಿಡ್ಜ್‌ ಅರೋಪಸಿ ಕೇರಳದ ಕೋರ್ಟ್‌ ಮೆಟ್ಟಿಲೇರಿತ್ತು.

ಕಾಂತಾರ ಚಿತ್ರದಲ್ಲಿನ ವರಾಹ ರೂಪಂ(“Varaha Rupam..”Song) ಹಾಡನ್ನು ನವರಸಂ ಎಂಬ ಮಲಯಾಳಂ ಹಾಡಿನಿಂದ ಕಾಪಿ ಮಾಡಲಾಗಿತ್ತು ಎಂಬ ವಿವಾದಗಳು ಕೇಳಿಬರುತ್ತಿತ್ತು. ಈ ಹಾಡನ್ನು ಮಳಯಾಳಂ ನ ಥಾಯ್ಕುಡಂ ಬ್ರಿಡ್ಜ್‌ ಎನ್ನುವ ಜನಪ್ರಿಯ ಬ್ರಾಂಡ್‌ ನಿರ್ಮಾಣ ಮಾಡಿದ್ದು, ಕಾಂತಾರ ಚಿತ್ರತಂಡದವರ ಮೇಲೆ ಕಾಪಿರೈಟ್‌ ಅರೋಪ ಕೇಳಿ ಬಂದಿತ್ತು. ಹಾಡನ್ನು ಕಾಪಿ ಮಾಡಿದ್ದಕ್ಕೆ ಕ್ರೆಡಿಟ್‌ ಕೊಡಬೇಕು, ಇಲ್ಲವೇ ಹಾಡನ್ನು ಬಳಸುವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್‌ ಕೇರಳದ ಕೋರ್ಟ್‌ ಗೆ ಮನವಿ ಮಾಡಿತ್ತು.

ಅರ್ಜಿ ವಿಚಾರಣೆ ವೇಳೆ ಕೇರಳದ ಕೋರ್ಟ್‌ ವರಾಹ ರೂಪಂ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ಯೂಟ್ಯೂಬ್‌ ಸೇರಿದಂತೆ ಯಾವುದೇ ಫ್ಲಾಟ್‌ ಫಾರ್ಮ್‌ ಗಳಲ್ಲಿ ಒಪ್ಪಿಗೆ ಇಲ್ಲದೆ ಹಾಡನ್ನು ಬಳಸಬಾರದು ಎಂದು ಆದೇಶ ಹೊರಡಿಸಿತ್ತು. ಕೇರಳದ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್‌ ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಹೈಕೋರ್ಟ್‌ ಇದನ್ನು ರದ್ದು ಮಾಡಿ ಎಂದು ಆದೇಶ ನೀಡಿದ ಪರಿಣಾಮ ಕಾಂತಾರ ಚಿತ್ರಕ್ಕೆ ಹಿನ್ನಡೆಯಾಗಿದೆ. ಇದರಿಂದ ವರಾಹ ರೂಪಂ ಹಾಡಿನ ಟ್ಯೂನ್‌ ಅನ್ನು ಬದಲಿಸಲಾಗಿದೆ.

ಇದನ್ನೂ ಓದಿ : Kantara “Varaha Rupam” Controversy : ಕಾಂತಾರ “ವರಾಹ ರೂಪಂ” ವಿವಾದ : ಮೇಲ್ಮನವಿ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್

ಇದನ್ನೂ ಓದಿ : Kamal Haasan : ಖ್ಯಾತ ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ಇಂದು ಕಾಂತಾರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ಅಮೇಜಾನ್‌ ಪ್ರೈಮ್‌ ನಲ್ಲಿ ವರಾಹ ರೂಪಂ ಹಾಡಿನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲಾಗಿದೆ. ಟ್ಯೂನ್‌ ಬದಲಾವಣೆ ಮಾಡಲಾದ ವರಾಹ ರೂಪಂ ಹಾಡಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ತನ್ನದಲ್ಲದ ಕೆಲಸವನ್ನು ತಾನೇ ಮಾಡಿದ್ದು ಎಂದು ಹೇಳಿಕೊಳ್ಳುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುವುದರ ಮೂಲಕ ನೆಟ್ಟಿಗರು ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

(“Varaha Rupam..”Song) Kantara movie released and is seeing success all over the world. Meanwhile, Kantara film team had to face a controversy. Thaikudam Bridge accused the Kerala court of using the song Varaha Rupam composed by Ajaneesh Loknath in the film without permission.

Comments are closed.