Punyakoti Adoption Scheme : ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ಸುದೀಪ್‌ ರಾಯಭಾರಿ

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ (Kichcha Sudeep) “ಪುಣ್ಯಕೋಟಿ ದತ್ತು ಯೋಜನೆ”ಗೆ (Punyakoti Adoption Scheme) ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಈಗಾಗಲೇ ಸಾಕಷ್ಟು ಸಮಾಜಸೇವೆಯಲ್ಲಿ ತೊಡಗಿರುವ ಸುದೀಪ್‌ ಅವರನ್ನು ಕರ್ನಾಟಕ ಸರಕಾರ “ಪುಣ್ಯಕೋಟಿ ದತ್ತು ಯೋಜನೆ”ಗೆ ರಾಯಭಾರಿಯಾಗಿ ನೇಮಕ ಮಾಡಿದೆ. ಇಂದು ಬೆಂಗಳೂರಿನ ಸುದೀಪ್‌ ನಿವಾಸದಲ್ಲಿ “ಪುಣ್ಯಕೋಟಿ ದತ್ತು ಯೋಜನೆ”ಯ ರಾಯಭಾರಿ ನೇಮಕಾತಿ ಪತ್ರವನ್ನು ಇಲಾಖೆ ಸಚಿವ ಪ್ರಭು ಚೌಹಣ್‌ ನೀಡಿ ಸನ್ಮಾನಿಸಿದ್ದಾರೆ.

ಇಲಾಖೆ ಸಚಿವ ಪ್ರಭು ಚೌಹಣ್‌ ಅವರಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸುದೀಪ್‌ 31 ಗೋವುಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರಕಾರಿ ಗೋಶಾಲೆಗಳಿಂದ ಗೋವುಗಳನ್ನು ದತ್ತು ಪಡೆಯಲು ನಿರ್ಧಾರ ಮಾಡಿರುವುದಾಗಿ ಸುದೀಪ್‌ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುವುದಾಗಿ ಕಿಚ್ಚ ಸುದೀಪ್‌ ತಿಳಿಸಿದ್ದಾರೆ.

ನೇಮಕಾತಿ ಪತ್ರದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪುಣ್ಯಕೋಟಿ ದತ್ತು ಯೋಜನೆ”ಯನ್ನು ರಾಜ್ಯದ ಸರಕಾರಿ ಹಾಗೂ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ದತ್ತು ತೆಗೆದುಕೊಳ್ಳಲು ವ್ಯಾಪಾಕವಾಗಿ ಪ್ರಚಾರ ಪಡಿಸಲು ಹಾಗೂ ಎಲ್ಲಾ ವರ್ಗದ ಸಾರ್ವಜನಿಕರಿಗೆ ಈ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಮತ್ತು ಸ್ಪೂರ್ತಿ ತುಂಬಲು ರಾಜ್ಯದ ಅತ್ಯಂತ ಜನಪ್ರಿಯ ನಟರಾದ “ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ ಸುದೀಪ್‌” ಅವರನ್ನು ಪಶುಸಂಗೋಪನೆ ಇಲಾಖೆಯ “ಪುಣ್ಯಕೋಟಿ ದತ್ತು ಯೋಜನೆ”ಯ ರಾಯಭಾರಿಯನ್ನಾಗಿ ನೇಮಿಸಲು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Kantara “Varaha Rupam” Controversy : ಕಾಂತಾರ “ವರಾಹ ರೂಪಂ” ವಿವಾದ : ಮೇಲ್ಮನವಿ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್

ಇದನ್ನೂ ಓದಿ : Kamal Haasan : ಖ್ಯಾತ ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Priyanka Chopra Daughter: ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಛೋಪ್ರಾ; ಎಷ್ಟು ಮುದ್ದಾಗಿದೆ ಅಂದ್ರು ಅಭಿಮಾನಿಗಳು

ಸುದೀಪ್‌ ಅವರು ಸರಕಾರದ ಕಾರ್ಯಕ್ರಮಗಳಿಗೆ ರಾಯಭಾರಿ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ ಈ ಹಿಂದೆಯೂ ಅವರು ಅನೇಕ ಕಾರ್ಯಕ್ರಮಗಳಿಗೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವವರೆಗೂ ಅವರು ಸಹಕರಿಸಿದ್ದಾರೆ. ಈ ಸಲ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗುವ ಮೂಲಕ ಪುಣ್ಯಕೋಟಿ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

https://www.youtube.com/watch?v=XXK1Odp8Zxo

Kichcha Sudeep is the Ambassador for Punyakoti Adoption Scheme

Comments are closed.