Mangaluru bomb case: ಜಿಹಾದಿ ಮಾನಸಿಕತೆಯೆ ಸ್ಫೋಟಕ್ಕೆ ಕಾರಣ: ಚಕ್ರತೀರ್ಥ ಹೇಳಿಕೆ

ಮಂಗಳೂರು: (Mangaluru bomb case) ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಮಾಹಿತಿಗಳು ಹೊರಬೀಳುತ್ತಿವೆ. ಅಲ್ಲದೇ ಇದೀಗ ಸ್ಫೋಟದ ಕುರಿತು ಒಬ್ಬೊಬ್ಬ ನಾಯಕರುಗಳು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಿಹಾದಿ ಮಾನಸಿಕತೆಯೇ ಈ ಸ್ಫೋಟಕ್ಕೆ ಕಾರಣ ಎಂದು ಚಕ್ರತೀರ್ಥ ಅವರು ಹೇಳಿದರೆ, ಉಗ್ರರಿಗಿಂತ ಪೊಲೀಸರೇ ಮೋಸ್ಟ್‌ ಡೇಂಜರಸ್‌ ಎಂದು ಮುತಾಲಿಕ್‌ ಅವರು ಹೇಳಿಕೆಯನ್ನು ನೀಡಿದ್ದಾರೆ.

ಚಕ್ರತೀರ್ಥ ಹೇಳಿಕೆ..!
ಉಗ್ರರಿಂದ ಹಿಂದೂಗಳ ವೇಷ ಧರಿಸಿ ಅವರ ಶಾಂತಿ ಕದಡುವ ಸಂಚು ನಡೆಯುತ್ತಿದೆ. ಮಂಗಳೂರಿನ (Mangaluru bomb case) ಶಾಂತಿ ಕದಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕೇಸಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪೊಲೀಸ್‌ ಇಲಾಖೆಯ ಟೆಕ್ನೋಲಜಿ ಇನ್ನಷ್ಟು ಬಲಪಡಿಸಬೇಕು” ಎಂದು ಪೊಲೀಸರು ಈ ಪ್ರಕರಣಕ್ಕೆ ಕುರಿತಂತೆ ರಾತ್ರಿ ಹಗಲು ಎಂದು ನೋಡದೇ ಕೆಲಸ ಮಾಡುತ್ತಿರುವ ಕುರಿತು ಹೇಳಿಕೆ ನೀಡಿದ್ದಾರೆ.

“ಹಿಂದೂ ವೇಷ ಧರಿಸಿ ಹಿಂದೂಗಳ ಮೇಲೆಯೇ ಕೃತ್ಯದ ಆರೋಪವನ್ನು ಹೊರಿಸುವ ಮಸಲತ್ತು ಉಗ್ರರಿಂದ ನಡೆದಿತ್ತು. ಬಿಜೆಪಿ ಬಂದ ಮೇಲೆ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಸಿಮಿ ಬಳಿಕ ಪಿಎಫ್‌ ಐ ಬ್ಯಾನ್‌ ಮಾಡಿದ್ದೇವೆ. ಉಗ್ರರನನು ಬೇರು ಸಮೇತ ಕಿತ್ತು ಹಾಕಬೇಕು” ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Karavali bomb blast case: ಸ್ಫೋಟಕ್ಕೂ ಮುನ್ನ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌ : ಕರಾವಳಿಯಲ್ಲಿ ಮತ್ತೇ ಆತಂಕ

ಇದನ್ನೂ ಓದಿ : ನಮ್ಮ ಟಾರ್ಗೆಟ್ ಕದ್ರಿ ಎಂದ ಉಗ್ರರು : ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್

ಇದನ್ನೂ ಓದಿ : Coastal Bomb blast: ಕರಾವಳಿ ಸ್ಫೋಟದ ಮಾಸ್ಟರ್‌ ಮೈಂಡ್‌ ಅರಾಫತ್‌ : ಸಿಗ್ನಲ್‌ ಆಪ್‌ ಬಳಕೆ !

ಇನ್ನೂ ಈ ಪ್ರಕರಣದ ಕುರಿತು ಪ್ರಮೋದ್‌ ಮುತಾಲಿಕ್‌ ಅವರು ಪೊಲೀಸರ ವಿರುದ್ದವೇ ಹೇಳಿಕೆಯನ್ನು ನೀಡಿದ್ದಾರೆ. ” ಉಗ್ರರ ಬಗ್ಗೆ ಪೊಲೀಸರಿಗೆ ಗೊತ್ತಿದೆ. ಪೊಲೀಸ್‌ ಇಲಾಖೆ ನಿದ್ರೆ ಮಾಡುತ್ತಿದೆ. ಪೊಲೀಸರು ಉಗ್ರರಿಗಿಂತ ಮೋಸ್ಟ್‌ ಡೇಂಜರಸ್.‌ ಮುಸ್ಲೀಮರ ತುಷ್ಟೀಕರಣವೇ ಇದಕ್ಕೆಲ್ಲಾ ಕಾರಣ” ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪೊಲೀಸರ ವಿರುದ್ದ ಹೇಳಿಕೆಯನ್ನು ನೀಡಿದ್ದಾರೆ.

(Mangaluru bomb case) Information is coming out every minute regarding the Mangaluru bomb blast case. And now each leader is giving different statements about the explosion. While Chakratheertha said that Jihadi mentality was the reason for the blast, Muthalik said that police are more dangerous than terrorists.

Comments are closed.