ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

ತಮಿಳು ನಟ ದಳಪತಿ ವಿಜಯ್ ಅಭಿನಯದ “ವಾರಿಸು” ಸಿನಿಮಾ (Varisu Movie) ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ ಸಿನಿಪ್ರೇಕ್ಷಕರನ್ನು ಮನರಂಜಿಸಿದೆ. ನಿರ್ದೇಶಕ ವಂಶಿ ಅವರ ಈ ಸಿನಿಮಾ ಮತ್ತೊಂದು ತಮಿಳಿನ ಪ್ರಮುಖ ಸ್ಟಾರ್‌ ಅಜಿತ್‌ ಅವರ “ತುನಿವು” ಸಿನಿದೊಂದಿಗೆ ಘರ್ಷಣೆಯನ್ನು ಎದುರಿಸುತ್ತಿದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಮಟ್ಟದ ಆರಂಭವನ್ನು ಪಡೆದುಕೊಂಡಿದೆ. ಆರಂಭಿಕ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಅಂದಾಜಿನ ಪ್ರಕಾರ, “ವಾರಿಸು” ಸಿನಿಮಾ ಭಾರತದಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ.

ನಟ ವಿಜಯ ಅಭಿನಯದ “ವಾರಿಸು” ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನದ ನಂತರ ಸುಮಾರು 22.60 ಕೋಟಿ ಕಲೆಕ್ಷನ್‌ನಲ್ಲಿ ನಿಂತಿದೆ. ಒಟ್ಟು ಮೊತ್ತವು 26.50 ಕೋಟಿ ರೂಪಾಯಿ ಎಂದು ವ್ಯಾಪಾರ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ವರದಿ ಮಾಡಿದೆ. ವಾರಿಸು ಸಿನಿಮಾ ತನ್ನ ತವರು ರಾಜ್ಯವಾದ ತಮಿಳುನಾಡಿನಲ್ಲಿ ಸುಮಾರು ರೂ 17 ಕೋಟಿ ಗಳಿಸಿದರೆ, ಕರ್ನಾಟಕವು ರೂ 5 ಕೋಟಿಯಲ್ಲಿ ಎರಡನೇ ಅತಿ ದೊಡ್ಡ ಅಂಕಿ ಅಂಶವನ್ನು ಗಳಿಸಿರುತ್ತದೆ.

ವಾರಿಸು ಸಿನಿಮಾ ರಾಜ್ಯವಾರು ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ :

  • ತಮಿಳುನಾಡು : 17 ಕೋಟಿ ರೂ.
  • ಕರ್ನಾಟಕ : 5 ಕೋಟಿ ರೂ.
  • ಕೇರಳ : 3.50 ಕೋಟಿ ರೂ.
  • ಭಾರತದ ಉಳಿದ ಭಾಗಗಳು : ರೂ 1 ಕೋಟಿ
  • ಒಟ್ಟು (ಭಾರತದಲ್ಲಿ) : ರೂ 26.50 ಕೋಟಿ

ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನಗೊಳ್ಳಲು ಎಲ್ಲಾ ಸಾಧ್ಯತೆಗಳನ್ನು ಪಡೆದುಕೊಂಡಿದೆ. ಅನೇಕ ಸ್ಥಳಗಳಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಪ್ರದರ್ಶನಗಳು ಪ್ರಾರಂಭವಾಗುವುದರಿಂದ, ಅಸಾಧಾರಣ ಓಟವನ್ನು ತೋರಿಸಲು ವಾರಿಸುಗೆ ಸ್ವಲ್ಪ ಸಮಯ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಶನಿವಾರ-ಭಾನುವಾರ ಇದು ದಳಪತಿ ವಿಜಯ್ ಅಭಿಮಾನಿಗಳಿಗೆ ನಿಜವಾದ ಪರೀಕ್ಷೆಯಾಗಿದೆ.

ಇದನ್ನೂ ಓದಿ : ಸಂಕ್ರಾಂತಿ ಪ್ರಯುಕ್ತ ಕನ್ನಡ ಸಿನಿಮಾಗಳಿಗೆ ಇಲ್ಲ ಥಿಯೇಟರ್‌ ಭಾಗ್ಯ

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ಇದನ್ನೂ ಓದಿ : 10 ಮಿಲಿಯನ್ ವೀವ್ಸ್ ಸಿಗದೆ ಅಜನೀಶ್ ಲೋಕನಾಥ್‌ಗೆ ಬಿಡುಗಡೆ ಭಾಗ್ಯವಿಲ್ಲ ಎಂದ “ಹಾಸ್ಟೆಲ್ ಹುಡುಗರು”

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ತೆರೆಗೆ ಬಂದ ಮೊದಲ ಸಿನಿಮಾ ವಿಜಯ್ ಅವರ “ಮಾಸ್ಟರ್” ಸಿನಿಮಾ ಅದರ ಆರಂಭಿಕ ದಿನದಲ್ಲಿ 34.80 ಕೋಟಿ ರೂಪಾಯಿಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ಮಾಡಿದೆ. ಆದರೆ ಅಂದು ಈ ಸಿನಿಮಾ ಯಾವುದೇ ಬಾಕ್ಸ್ ಆಫೀಸ್ ಘರ್ಷಣೆಯನ್ನು ಎದುರಿಸಲಿಲ್ಲ. ಈ ಭಾರಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ವಾರಿಸು ಮತ್ತು ತುನಿವು ನಡುವೆ ಪೈಪೋಟಿ ಇರುವುದ್ದರಿಂದ ಕಲೆಕ್ಷನ್‌ ಎರಡು ಕಡೆ ಹಂಚಿ ಹೋಗಬಹುದು ಎಂದು ಊಹಿಸಲಾಗಿದೆ. ಮೊದಲ ದಿನದ ಟಿಕೆಟ್ ವಿಂಡೋದಲ್ಲಿ ಯಾವುದೇ ಸಿನಿಮಾಗಳು ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಧಿಸಿದಂತಿಲ್ಲ. ವಾರಿಸು ಸಿನಿಮಾದ ಮುಂದಿನ ದಿನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ಕಾದು ನೋಡಬೇಕಿದೆ.

Varisu Movie: Actor Dalpati Vijay starrer “Varisu” has a huge first day collection.

Comments are closed.