Prithvi Shaw : ರಣಜಿ ತ್ರಿಶತಕವೀರ ಪೃಥ್ವಿ ಶಾಗೆ ಟೀಮ್ ಇಂಡಿಯಾದಲ್ಲಿ ಏಕಿಲ್ಲ ಸ್ಥಾನ? ಅಸಲಿ ಗುಟ್ಟು ಇಲ್ಲಿ ರಟ್ಟು!

ಮುಂಬೈ: ರಣಜಿ ಟ್ರೋಫಿಯಲ್ಲಿ ತ್ರಿಶತಕ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ದ್ವಿಶತಕ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಶತಕ. ಒಬ್ಬ ಆಟಗಾರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಬೇಕು? ಇಷ್ಟೆಲ್ಲಾ ಮಾಡಿದ್ರೂ ಮುಂಬೈನ ಯುವ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಲೇ ಇದ್ದಾರೆ.

ಗುವಾಹಟಿಯ ಅಮಿನ್ಗಾವೊನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಸ್ಸಾಂ ವಿರುದ್ದದ ರಣಜಿ ಪಂದ್ಯದಲ್ಲಿ (Ranji Trophy 2022-23) ಅಬ್ಬರಿಸಿದ 23 ವರ್ಷದ ಪೃಥ್ವಿ ಶಾ ಕೇವಲ 383ಎಸೆತಗಳಲ್ಲಿ 49 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 379 ರನ್ ಸಿಡಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಅಸ್ಸಾಂ ವಿರುದ್ಧ ಪೃಥ್ವಿ ಶಾ ಗಳಿಸಿದ 379 ರನ್ ರಣಜಿ ಟ್ರೋಫಿ ಇತಿಹಾಸದಲ್ಲೇ 2ನೇ ಟಾಪ್ ಸ್ಕೋರ್. ಮಹಾರಾಷ್ಟ್ರದ ಭಾವುಸಾಹೇಬ್ ನಿಂಬಾಳ್ಕರ್ 1948ರಲ್ಲಿ ಆಗಿನ ಕಥಿವಾರ್ (ಈಗಿನ ಸೌರಾಷ್ಟ್ರ) ತಂಡದ ವಿರುದ್ಧ ಗಳಿಸಿದ್ದ 443 ರನ್’ಗಳು ರಣಜಿ ಟ್ರೋಫಿಯಲ್ಲಿ ಆಟಗಾರನೊಬ್ಬನ ಅತೀ ಹೆಚ್ಚು ವೈಯಕ್ತಿಕ ಸ್ಕೋರ್.

ರಣಜಿ ಟ್ರೋಫಿಯಲ್ಲಷ್ಟೇ ಅಲ್ಲ, ಕಳೆದ ವರ್ಷದ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಪಂದ್ಯವೊಂದರಲ್ಲಿ ಪೃಥ್ವಿ ಶಾ ಸಿಡಿಲಬ್ಬರದ ದ್ವಿಶತಕ ಬಾರಿಸಿದ್ದರು. ಅದಕ್ಕೂ ಮೊದಲು ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲೂ ವಿಸ್ಫೋಟಕ ಶತಕ ಸಿಡಿಸಿದ್ದರು. ದೇಶೀಯ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದರೂ, ಪೃಥ್ವಿ ಶಾಗೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇದರ ಬಗ್ಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

https://twitter.com/Criclav_18/status/1610292945550467073?s=20&t=ka6xakHTgJ_ocDE8cvAhAA

ಪೃಥ್ವಿ ಶಾ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವುದಕ್ಕೆ ಕಾರಣ ಬೇರೆಯೇ ಇದೆ. ಮುಂಬೈನ ಯುವ ಆಟಗಾರನ ಮೇಲೆ ಕೆಲ ಆರೋಪಗಳಿವೆ. ಎರಡು ವರ್ಷಗಳ ಹಿಂದಷ್ಟೇ ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿ ಬಿದ್ದಿದ್ದ ಪೃಥ್ವಿ ಶಾ, ಆರು ತಿಂಗಳು ಕ್ರಿಕೆಟ್’ನಿಂದ ಬ್ಯಾನ್ ಕೂಡ ಆಗಿದ್ದರು. ಅಶಿಸ್ತಿನ ನಡವಳಿಕೆಗಾಗಿ ಪೃಥ್ವಿ ಶಾ ಈಗಾಗ್ಲೇ ಸಾಕಷ್ಟು ಬಾರಿ ಬಿಸಿಸಿಐನಿಂದ ಎಚ್ಚರಿಕೆಯನ್ನೂ ಪಡೆದಿದ್ದಾರೆ. ಇದರ ಜೊತೆಗೆ ಪೃಥ್ವಿ ಶಾ ಫಿಟ್ನೆಸ್ ಬಗ್ಗೆಯೂ ಅನುಮಾನಗಳಿವೆ. ಮುಖ್ಯವಾಗಿ ಯೋ-ಯೋ ಟೆಸ್ಟ್ ಪಾಸ್ ಮಾಡುವಲ್ಲಿ ಪಥ್ವಿ ವಿಫಲರಾಗಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಪೃಥ್ವಿ ಶಾಗೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎಂಬ ಮಾತುಗಳು ಬಿಸಿಸಿಐ ಮೂಲಗಳಿಂದಲೇ ಕೇಳಿ ಬರುತ್ತಿವೆ.”ಹುಡುಗ ತಪ್ಪು ಮಾಡಿದ್ದಾನೆ, ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಆತನಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿ” ಎಂದು ಕ್ರಿಕೆಟ್ ಪ್ರಿಯರು ಆಗ್ರಹಿಸುತ್ತಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಆಡಿದ ಮೊದಲ 7 ಇನ್ನಿಂಗ್ಸ್’ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ, 8ನೇ ಪಂದ್ಯದಲ್ಲಿ ತ್ರಿಶತಕದೊಂದಿಗೆ ಅಬ್ಬರಿಸಿದ್ದಾರು. 2021ರ ಜುಲೈನಲ್ಲಿ ಭಾರತ ಪರ ಕೊನೆಯ ಪಂದ್ಯವಾಡಿದ್ದ ಪೃಥ್ವಿ ಶಾಗೆ 2020ರಿಂದ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ್ದ ಪೃಥ್ವಿ ಶಾ, ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.37ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕ ಸಹಿತ 339 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Virat Kohli vs Sachin Tendulkar : ದಿಗ್ಗಜರಲ್ಲಿ ಯಾರು ಗ್ರೇಟ್? “45 ಶತಕಗಳು ಸುಮ್ ಸುಮ್ನೆ ಬರಲ್ಲ”; ದಾದಾ ಬಿಗ್ ಸ್ಟೇಟ್ಮೆಂಟ್

ಇದನ್ನೂ ಓದಿ : Exclusive Virat Kohli: ಭಾರತ ತಂಡದ ಜೊತೆ ಕೋಲ್ಕತ್ತಾಗೆ ಕಿಂಗ್ ಕೊಹ್ಲಿ ಬರಲಿಲ್ಲ.. ಅವಸರವಸರವಾಗಿ ಮುಂಬೈಗೆ ತೆರಳಿದ ವಿರಾಟ್, ಕಾರಣ ಏನು ಗೊತ್ತಾ?

ಇದನ್ನೂ ಓದಿ : Prithvi Shaw triple hundred : ರಣಜಿ ಟ್ರೋಫಿಯಲ್ಲಿ 379 ರನ್ ಚಚ್ಚಿದ ಪೃಥ್ವಿ ಶಾ, ಬಿಸಿಸಿಐಗೆ ಖಡಕ್ ಮೆಸೇಜ್ ಕೊಟ್ಟ ಮುಂಬೈ ಆಟಗಾರ

ಭಾರತ ಪರ 6 ಏಕದಿನ ಪಂದ್ಯಗಳನ್ನೂ ಆಡಿರುವ ಶಾ, 189 ರನ್ ಗಳಿಸಿದ್ದು, ಆಡಿರುವ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು.2018ರಲ್ಲಿ ನ್ಯೂಜಿಲೆಂಡ್’ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್’ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ನಾಯಕರಾಗಿದ್ದ ಪೃಥ್ವಿ ಶಾ, ದೇಶೀಯ ಕ್ರಿಕೆಟ್’ನಲ್ಲಿ ಅಬ್ಬರಿಸಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

No place for Ranji Trishatakavir Prithvi Shaw in Team India? The real secret is here!

Comments are closed.