Aravanam prasada: ಶಬರಿಮಲೆಯಲ್ಲಿ ಅರವಣ ಪ್ರಸಾದಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಶಬರಿಮಲೆ: (Aravanam prasada) ಪ್ರಸಿದ್ದ ಶಬರಿಮಲೆ ದೇಗುಲದ ಅರವಣ ಪ್ರಸಾದ ಮಾರಾಟಕ್ಕೆ ಹಾಗೂ ತಯಾರಿಕೆಗೆ ಕೇರಳದ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ಹೈಕೋರ್ಟ್‌ ಸೂಚಿಸಿದೆ.

ಅಕ್ಕಿ, ಬೆಲ್ಲ, ತುಪ್ಪವನ್ನು ಬಳಸಿ ತಯಾರಿಸುವ ಈ ಅರವಣ ಪ್ರಸಾದ (Aravanam prasada) ಶಬರಿಮಲೆ ಕ್ಷೇತ್ರದ ವಿಶಿಷ್ಠ ಪ್ರಸಾದವೆಂದೇ ಪ್ರಸಿದ್ದಿ ಪಡೆದಿದೆ. ಆದರೆ ಇದೀಗ ಅರವಣ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ಏಲಕ್ಕಿಯನ್ನು ಬಳಸಲಾಗುತ್ತಿಲ್ಲ ಎಂಬ ಕಾರಣಕ್ಕೆ ಮಾರಾಟ ಮತ್ತು ತಯಾರಿಕೆಯನ್ನು ನಿಲ್ಲಿಸಲಾಗಿದೆ.

ಪ್ರಸಾದ ತಯಾರಿಸಲು ಖರೀದಿ ಮಾಡು ಏಲಕ್ಕಿಯಲ್ಲಿ ವಿವಿದ ಬಗೆಯ ಕೀಟನಾಶಕಗಳಿರುವುದು ಪರೀಕ್ಷೆಗೆ ಒಳಪಡಿಸಿದ ವೇಳೆಯಲ್ಲಿ ತಿಳಿದುಬಂದಿದೆ. ಪ್ರಸಾದ ತಯಾರಿಕೆಗೆ ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಹೈಕೋರ್ಟ್‌ ಏಲಕ್ಕಿಯನ್ನು ಪರೀಕ್ಷಿಸುವಂತೆ ಆದೇಶ ನೀಡಿತು. ಇದೀಗ ಹೈಕೋರ್ಟ್‌ ಆದೇಶದಂತೆ ಪರೀಕ್ಷೆ ನಡೆಸಿದ್ದು, ಏಲಕ್ಕಿಯಲ್ಲಿನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಕೀಟನಾಶಕಗಳು ಇರುವುದು ಪತ್ತೆಯಾಗಿದೆ.

ಅರಾವಣ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳು ಇರುವುದು ಕೆಮಿಕಲ್‌ ಟೆಸ್ಟ್‌ ನಲ್ಲಿ ಖಚಿತವಾಗಿದೆ. ಇದರ ಆಧಾರದ ಮೇಲೆ ಕೇರಳದ ಹೈಕೋರ್ಟ್‌ ಅರಾವಣ ಪ್ರಸಾದ ವಿತರಣೆಗೆ ತಕ್ಷಣವೇ ತಡೆ ನೀಡಿದೆ.

ಇದನ್ನೂ ಓದಿ : ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಪಟ್ಟಿ 2023 : ಭಾರತಕ್ಕೆ ಎಷ್ಟನೇ ಸ್ಥಾನ ?

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : ವರ್ಷಕ್ಕೆ 250 ರೂ. ಹೂಡಿಕೆ, ಪಡೆಯಿರಿ 1.5 ಲಕ್ಷ ರೂ

ಇದನ್ನೂ ಓದಿ : Auto-truck collision: ಆಟೋ ಟ್ರಕ್‌ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ 8ಮಂದಿ ಸಾವು

ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೀಟನಾಶಕಗಳು ಪತ್ತೆಯಾದ ಪರಿಣಾಮ 6.5 ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ನಿರುಪಯುಕ್ತವಾಗಿದೆ. ಏಲಕ್ಕಿಯಲ್ಲಿ ಕೀಟನಾಶಕ ಇರುವ ಹಿನ್ನಲೆಯಲ್ಲಿ ಈಗ ಏಲಕ್ಕಿ ರಹಿತ ಅರವಣ ಪ್ರಸಾದವನ್ನು ತಯಾರಿಸುವ ಕಾರ್ಯ ಆರಂಭವಾಗಿದ್ದು, ಇನ್ನೇನು ವಿತರಣಾ ಕಾರ್ಯ ಕೂಡ ಆರಂಭವಾಗಲಿದೆ.

Aravanam prasada: High Court has issued a restraining order on Aravanam prasada at Sabarimala

Comments are closed.