misunderstood hero : ಬಾಲಿವುಡ್ ನಲ್ಲಿ ಬಯೋಪಿಕ್ ಪರ್ವ: ತೆರೆಗೆ ಬರಲಿದೆ ವೀರ ಸಾರ್ವಕರ್ ಲೈಫ್ ಸ್ಟೋರಿ

ದೇಶದಲ್ಲಿ‌ ಒಂದಾದ ಮೇಲೊಂದರಂತೆ ತತ್ವ ಸಿದ್ಧಾಂತಕ್ಕೆ ಸಂಬಂಧಿಸಿದ ಸಂಗತಿಗಳು ಸದ್ದು ಮಾಡುತ್ತಿವೆ. ಕೆಲ ದಿನಗಳ ಹಿಂದೆ ರಿಲೀಸ್ ಆದ ದಿ ಕಾಶ್ಮೀರಿ ಫೈಲ್ಸ್ ದೇಶದಾದ್ಯಂತ ಹಿಂದೂ ಮುಸ್ಲಿಂ ಹಾಗೂ ಬಿಜೆಪಿ ಕಾಂಗ್ರೆಸ್ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಿನಿಮಾ ಹಂಗಾಮಾ‌ ಸೃಷ್ಟಿಸಿರುವ ಹೊತ್ತಿನಲ್ಲೇ ವೀರ ಸಾರ್ವಕರ್ ( Veer Savarkar) ಸಿನಿಮಾ (misunderstood hero) ನಿರ್ಮಾಣಕ್ಕೆ ಬಾಲಿವುಡ್ ನಲ್ಲಿ ಸಿದ್ಧತೆ ನಡೆದಿದೆ.

.ದೇಶದಲ್ಲಿ ವೀರ ಸಾರ್ವರಕರ್ ತತ್ವ ಸಿದ್ಧಾಂತಗಳ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಬಾಲಿವುಡ್ ಸಿನಿಮಾ ರಂಗದಲ್ಲಿ ಸಾರ್ವಕರ್ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಬಾಲಿವುಡ್ ನಲ್ಲಿ ವಿವಾದಿತ ವಿಚಾರಗಳ ಸಿನಿಮಾ ಸಖತ್ ಸದ್ದು ಮಾಡುತ್ತವೆ.‌ ಈಗ ಇದೇ ಕಾರಣಕ್ಕೆ ವೀರ ಸಾರ್ವಕರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಮಹೇಶ್ ಮಾಂಜ್ರೇಕರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ವೀರ ಸಾರ್ವಕರ್ ಪಾತ್ರವನ್ನು ಬಾಲಿವುಡ್ ನ ಖ್ಯಾತ ನಟ ರಣದೀಪ್ ಹೂಡಾ ನಿರ್ವಹಿಸಲಿದ್ದಾರಂತೆ.

ಆನಂದ ಸಿಂಗ್ ಹಾಗೂ ಸಂದೀಪ್ ಸಿಂಗ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ವೀರ ಸಾರ್ವಕರ್ ಪಾತ್ರವನ್ನು ನಿರ್ವಹಿಸುತ್ತಿರುವ ರಣದೀಪ್ ಹೂಡಾ ಮಾತನಾಡಿದ್ದು, ಇಂತಹದೊಂದು ಪಾತ್ರವನ್ನು ನಾವು ಮಾಡುತ್ತಿರುವುದು ಹಾಗೂ ನಾನು ವೀರ ಸಾರ್ವಕರ್ ಪಾತ್ರವನ್ನು ನಾವು ನಿರ್ವಹಿಸುತ್ತಿರುವುದು ನನಗೆ ಸಿಕ್ಕಿರುವ ಅತಿದೊಡ್ಡ ಗೌರವ ಎಂದಿದ್ದಾರೆ.

ಇದನ್ನೂ ಓದಿ : Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು

ವಿನಾಯಕ‌ ದಾಮೋದರ್ ಸಾರ್ವಕರ್ ಕುರಿತಾಗಿ ಈಗಾಗಲೇ ಸಾಕಷ್ಟು ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಇದಲ್ಲದೇ ಮುಖ್ಯವಾಗಿ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ‌ ಮಹಾತ್ಮರ ಜೀವನಗಾಥೆ ಜನರನ್ನು ತಲುಪಿಲ್ಲ. ಈ ನಿಟ್ಟಿನಲ್ಲಿ ವೀರಸಾರ್ವಕರ್ ಜೀವನಗಾಥೆಯನ್ನು ಬಾಲಿವುಡ್ ಸಿನಿಮಾ ರೂಪದಲ್ಲಿ ತರ್ತಿರೋದು ಜನರಿಗೆ ಸ್ವಾತಂತ್ರ್ಯ ಹೋರಾಟದ ನಾಯಕರ ಕತೆಯನ್ನು ಪರಿಚಯಿಸಿಕೊಳ್ಳಲು ನೆರವಾಗಲಿದೆ ಅನ್ನೋ ಹೂಡಾ ಅಭಿಮತ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಾಲಿವುಡ್ ನ ಮತ್ತೊಂದು ಸಿನಿಮಾ ಕಾಂಟ್ರಾವರ್ಸಿ ಸೃಷ್ಟಿಸಿಸೋದು ಪಕ್ಕಾ ಎನ್ನಲಾಗ್ತಿದೆ. ಈಗಾಗಲೇ 1990 ರ ದಶಕದಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಪ್ರಕರಣ ಸಖತ್ ಸದ್ದು ಮಾಡಿದ್ದು ದೇಶದಾದ್ಯಂತ ದಿ‌ಕಾಶ್ಮೀರಿ ಫೈಲ್ಸ್ ಸಿನಿಮಾದ ಕುರಿತು ಚರ್ಚೆ‌ನಡೆದಿದೆ. ಹಲವು ಬಿಜೆಪಿ ಆಡಳಿತದಲ್ಲಿರೋ ರಾಜ್ಯದಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯ್ತಿ ಸಿಕ್ಕಿದ್ದರೇ ಕಾಂಗ್ರೆಸ್ ನಾಯಕರ ವಿರೋಧವೂ ಅಷ್ಟೇ ಪ್ರಭಲವಾಗಿ ಕೇಳಿಬಂದಿದೆ.

ಇದನ್ನೂ ಓದಿ : KGF 2 : 7 ಸಾವಿರ ಥಿಯೇಟರ್ ನಲ್ಲಿ ತೆರೆಗೆ ಬರಲಿದೆ ಕೆಜಿಎಫ್-2 : ಟ್ರೇಲರ್ ಲಾಂಚ್ ನಲ್ಲಿ ಸಿಗಲಿದೆ ಅಪ್ಡೇಟ್ ಮಾಹಿತಿ

( Veer Savarkar biopic directed by Mahesh Manjrekar actor calls him misunderstood hero )

Comments are closed.