electricity rates hike : ಹಾಲು, ಡಿಸೇಲ್, ಪೆಟ್ರೋಲ್ ಬಳಿಕ ಈಗ ಕರೆಂಟ್ ಶಾಕ್ : ಏರಿಕೆಯಾಗಲಿದೆ ವಿದ್ಯುತ್‌ ದರ

ಬೆಂಗಳೂರು : ಈಗಾಗಲೇ ಹಾಲು,ಗ್ಯಾಸ್, ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಕಂಗಾಲಾದ ಬೆಂಗಳೂರಿಗರಿಗೆ ಮತ್ತೊಂದು ಬರೆ ಕಾದಿದೆ. ಈಗಾಗಲೇ ಬಿರು ಬೇಸಿಗೆ ಯಿಂದ ಬೆಂದು ಹೋಗುತ್ತಿರುವ ಜನರಿಗೆ ಇನ್ಮುಂದೆ ಬಿಸಿಲು ತಣಿಸೋಕೆ ಫ್ಯಾನ್ ಸ್ವಿಚ್ ಒತ್ತೋಕೆ ಯೋಚನೆ ಮಾಡೋ ಸ್ಥಿತಿ ಎದುರಾಗಲಿದೆ. ಹೌದು ಏಪ್ರಿಲ್ 1 ರಿಂದಲೇ ಬೆಂಗಳೂರಿನಲ್ಲಿ ವಿದ್ಯುತ್ ಬೆಲೆ ಏರಿಕೆ (electricity rates hike) ಸುಡಲಿದೆ.

ಹೌದು, ಬೆಂಗಳೂರಿನ ಜನರಿಗೆ ಬೆಸ್ಕಾಂನಿಂದ ಬಿಗ್ ಶಾಕ್ ಎದುರಾಗಲಿದೆ. ಏಪ್ರಿಲ್ 1 ರಿಂದ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಶಾಕ್ ಕಾದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ KERC ಮುಂದಾಗಿದೆ. Karnataka Electricity Regulatory Commission ಏಪ್ರಿಲ್ 1 ರಿಂದ ಅನ್ವಯ ವಾಗುವಂತೆ ಹೊಸ ದರ ಪರಿಷ್ಕರಣೆ ನಿರ್ಧರಿಸಿದ್ದು, ಈಗಾಗಲೇ ಫೆಬ್ರವರಿಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿರುವ KERC ಈಗ ಹೊಸ ದರ ನಿಗದಿ ಗೆ ಮುಂದಾಗಿದೆ.

ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರ (electricity rates hike) ಪಟ್ಟಿ ಬಿಡುಗಡೆ ಮಾಡಲಿರುವ ಕೆಇಆರ್ಸಿ ಯುನಿಟ್ ಗೆ ಬೆಂಗಳೂರಿನಲ್ಲಿ 1.5 ರೂಪಾಯಿ ಏರಿಕೆ ಮಾಡಲು‌ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ KERC ದರ ಪರಿಷ್ಕರಣೆ ಮಾಡುತ್ತೆ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಡವಿದೆ.

ಇದನ್ನೂ ಓದಿ : Daily Horoscope : ದಿನಭವಿಷ್ಯ : ಹೇಗಿದೆ ಗುರುವಾರದ ನಿಮ್ಮ ರಾಶಿಫಲ

ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನಲೆ ದರ ಪರಿಷ್ಕರಣೆ ಪಟ್ಟು ಹಿಡಿದಿದ್ದು, ಪ್ರತಿ ಯೂನಿಟ್ ಗೆ 1.50 ರೂ. ಹೆಚ್ಚಿಸುವಂತೆ ಪ್ರಸ್ತಾವನೆ ಕಳುಹಿಸಿರುವ ಬೆಸ್ಕಾಂ ಇದೇ ದರ ಏರಿಕೆಗೆ ಒತ್ತಾಯಿಸಿದೆ. ಆದರೆ ಜನರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲು KERC ಚಿಂತನೆ ನಡೆಸಿದೆ. 2022-23 ರ ಸಾಲಿನಲ್ಲಿ ಪ್ರತಿ ಯೂನಿಟ್ ಗೆ 35 ರಿಂದ 45 ಪೈಸೆ ಹೆಚ್ಚಳವಾಗಲಿದೆ ಎನ್ನಲಾಗ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ.

ಇದರಿಂದ ಈಗಾಗಲೇ ಎಲ್ಲ ದರ ಏರಿಕೆಯಿಂದ ಕಂಗಲಾಗಿರುವ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆಯೂ ಮತ್ತಷ್ಟು ಹೊರೆಯಾಗಲಿದ್ದು, ಜನ ಸಾಮಾನ್ಯರು ಕಂಗಲಾಗಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಹೊತ್ತಿನಲ್ಲಿ ಸರ್ಕಾರದ ಈ ವಿದ್ಯುತ್ ಬೆಲೆ ಏರಿಕೆ ಸರ್ಕಾರಕ್ಕೆ ನೆಗೆಟಿವ್ ಪರಿಣಾಮ ಬೀರೋ ಸಾದ್ಯತೆಯೂ ಇದ್ದು ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : KN Fanindra : ಕರ್ನಾಟಕ ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ನೇಮಕ

( Increase electricity rates hike April 1 Karnataka Electricity Regulatory Commission)

Comments are closed.