Chalapati Rao passed away : ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ವಿಧಿವಶ : ಸಂತಾಪ ಸೂಚಿಸಿದ ತೆಲುಗು ಸಿನಿರಂಗದ ಗಣ್ಯರು

ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ಇಹಲೋಕವನ್ನು (Chalapati Rao passed away) ತ್ಯಜಿಸಿದ್ದಾರೆ. ಟಾಲಿವುಡ್‌ ಸಿನಿರಂಗದಲ್ಲಿ ಸುಮಾರು 600 ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸದ್ಯ ಸಾವಿನ ಸುದ್ದಿ ತಿಳಿದ ತೆಲುಗು ಸಿನಿರಂಗದ ಸ್ಟಾರ್‌ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ಹಿರಿಯ ನಟ ಚಲಪತಿ ರಾವ್‌ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು (ಡಿಸೆಂಬರ್‌ 25) ಮುಂಜಾನೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಚಲಪತಿ ರಾವ್‌ ತಮ್ಮ ನಿಧನದಿಂದ ಒಬ್ಬ ಪುತ್ರ, ಇಬ್ಬರೂ ಪುತ್ರಿಯರು ಹಾಗೂ ಪತನಿಯನ್ನು ಅಗಲಿದ್ದಾರೆ. 1944ರಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ ಚಲಪತಿ ರಾವ್‌ ಅವರನ್ನು ಎನ್‌ಟಿಆರ್‌ ಸಿನಿರಂಗಕ್ಕೆ ಪರಿಚಯಿಸಿದ್ದು, ಸುಮಾರು ೬೦೦ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1966ರಲ್ಲಿ ಬಿಡುಗಡೆಯಾದ “ಗುಡಾಚಾರಿ 116” ಸಿನಿಮಾದಲ್ಲಿ ಮೊದಲ ಬಾರಿಗೆ ಚಲಪತಿ ರಾವ್‌ ಬಣ್ಣ ಹಚ್ಚಿದ್ದಾರೆ. ಚಲಪತಿ ರಾವ್‌ ನಾಗಾರ್ಜುನ, ಎನ್‌ಟಿಆರ್‌, ವಿಕ್ಟರಿ ವೆಂಕಟೇಶ್‌, ಚಿರಂಜೀವಿ, ರವಿತೇಜ ಸೇರಿದಂತೆ ಹಲವಾರು ಸ್ಟಾರ್‌ ನಟರೊಂದಿಗೆ ನಟಿಸಿದ್ದಾರೆ. ಇವರು ಅನೇಕ ಸಿನಿಮಾಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ, ಹಾಸ್ಯ ನಟನಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಸಿನಿರಂಗದಲ್ಲಿ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಕಲಿಯುಗ ಕೃಷ್ಣಡು, ಕಡಪ ರೆಡ್ಡಮ್ಮ, ರಕ್ತ ಚಿಂದಿನ ರಾತ್ರಿ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ : ಶಿವರಾಜ್‌ ಕುಮಾರ್ 125ನೇ ಸಿನಿಮಾ “ವೇದ”ಗೆ ಭರ್ಜರಿ ರೆಸ್ಪಾನ್ಸ್‌ : ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ ?

ಇದನ್ನೂ ಓದಿ : Unlock Raghava : ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ‘ಅನ್ ಲಾಕ್ ರಾಘವ’ ಸಿನಿತಂಡ

ಇದನ್ನೂ ಓದಿ : Dharani Mandala Madhyadolage Movie:25ನೇ ದಿನದತ್ತ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ

ಟಾಲಿವುಡ್‌ನ ಮೂರು ತಲೆಮಾರಿನ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರಿಗೆ ಇದೆ. ಕಳೆದ ವರ್ಷ ಬಿಡುಗಡೆಯಾದ “ಬಂಗಾರರಾಜು” ಸಿನಿಮಾ ಇವರ ಕೊನೆಯ ಸಿನಿಮಾವಾಗಿದೆ. ಇವರ ಪಾರ್ಥಿವ ಶರೀರದ ದರ್ಶನಕ್ಕೆ ಬಂಜಾರ ಹಿಲ್ಸ್‌ನಲ್ಲಿರುವ ರವಿಬಾಬು ನಿವಾಸದಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇವರ ಪುತ್ರಿ ಅಮೇರಿಕದಲ್ಲಿದ್ದು, ಅವರು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Chalapati Rao passed away : Veteran Tollywood Actor Chalapathi Rao Passes Away: Telugu Cinema Eminent Condolences

Comments are closed.