China Corona Updates : ಚೀನಾದಲ್ಲಿ 24.80 ಕೋಟಿ ಜನರಿಗೆ ಕೊರೊನಾ ಸಾಧ್ಯತೆ : ಇನ್ಮುಂದೆ ಪ್ರಕಟವಾಗಲ್ಲ ಕೋವಿಡ್ ಅಂಕಿ ಅಂಶ

ಬೀಜಿಂಗ್ : ಕೋವಿಡ್ ತವರು ಚೀನಾದಲ್ಲೀಗ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಈ ವಾರದಲ್ಲೇ ಸರಿ ಸುಮಾರು ಒಂದೇ ದಿನದಲ್ಲಿ ಚೀನಾದಲ್ಲಿ ಸುಮಾರು 37 ಮಿಲಿಯನ್ (3.7 ಕೋಟಿ) ಜನರು COVID-19 ಸೋಂಕಿಗೆ (China Corona Updates) ಒಳಗಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಡಿಸೆಂಬರ್‌ ತಿಂಗಳಲ್ಲೇ ಬರೋಬ್ಬರಿ 24.80 ಕೋಟಿ ಜನರು ಕೋವಿಡ್ ಸೋಂಕಿಗೆ ತುತ್ತಾಗಲಿದ್ದಾರೆ ಅನ್ನೋ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಆದರೆ ಚೀನಾ ಸರಕಾರ ಮಾತ್ರ ಕೋವಿಡ್ ವಿಚಾರದಲ್ಲಿ ಕಳ್ಳಾಟವಾಡುತ್ತಿದ್ದು, ಸುಳ್ಳು ಲೆಕ್ಕವನ್ನು ನೀಡುವ ಕಾರ್ಯ ಮಾಡುತ್ತಿದೆ ಅನ್ನೋ ಮಾತು ಕೇಳಿಬಂದಿದೆ. ಈ ನಡುವಲ್ಲೇ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ದೈನಂದಿನ ಕೋವಿಡ್ ಪ್ರಕರಣಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಚೀನಾದಲ್ಲಿ ಈ ಬಾರಿ ಕೋವಿಡ್ ರೂಪಾಂತರ ತಳಿ ನಿಜಕ್ಕೂ ಅಟ್ಟಹಾಸವನ್ನೇ ಮರೆಯುತ್ತಿದೆ. ಚಳಿಗಾಲದಲ್ಲಿ ಚೀನಾದಲಲಿ ಕೋಟ್ಯಾಂತರ ಮಂದಿ ಕೋವಿಡ್ ಸೋಂಕಿಗೆ ತುತ್ತಾಗುವ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ಚೀನಾದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದು, ದಿನೇ ದಿನೇ ಚೀನಾ ಒಂದೊಂದೇ ಪ್ರದೇಶದಲ್ಲಿ ಲಾಕ್ ಡೌನ್ ಜಾರಿ ಮಾಡುತ್ತಿದೆ. ಅದ್ರಲ್ಲೂ ಡಿಸೆಂಬರ್ ತಿಂಗಳ ಆರಂಭದಿಂದಲೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿದೆ.

ಇನ್ಮುಂದೆ ಚೀನಾ ಅಂಕಿ ಅಂಶ ಬಿಡುಗಡೆಯಾಗಲ್ಲ

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ದೈನಂದಿನ ಕೋವಿಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಆರೋಗ್ಯ ಆಯೋಗವು ಪ್ರತಿದಿನ COVID-19 ಪ್ರಕರಣಗಳ ಅಂಕಿಅಂಶಗಳನ್ನು ಪ್ರಕಟಿಸಿದೆ. ಆದರೆ ಇನ್ನು ಮುಂದೆ ಈ ಡೇಟಾ ಬಿಡುಗಡೆಯನ್ನು ಇಂದಿನಿಂದ ಮಾಡುವುದಿಲ್ಲ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ : Corona in state : ರಾಜ್ಯದಲ್ಲಿ ಕೊರೊನಾ ಭೀತಿ : ವಿದೇಶಿ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ : ಸಚಿವ ಡಾ. ಸುಧಾಕರ್

ಇದನ್ನೂ ಓದಿ : China Covid Censor Report : ಚೀನಾದಲ್ಲಿ ಕೋವಿಡ್ ಮಹಾ ಸ್ಫೋಟ : ಕೇವಲ 20 ದಿನದಲ್ಲಿ 250 ಮಿಲಿಯನ್ ಪ್ರಕರಣ ದಾಖಲು

ಇದನ್ನೂ ಓದಿ : China Covid Cases : ಕೋವಿಡ್ ಮಹಾಮಾರಿಗೆ ತತ್ತರಿಸಿದ ಕೆಂಪು ರಾಷ್ಟ್ರ : ಚೀನಾದಲ್ಲಿ ಜ್ವರದ ಔಷಧಿಗಳ ಕೊರತೆ

ಚಳಿ ಜೊತೆಗೆ ಕೋವಿಡ್ ನಿಂದ ಚೀನಾ ತತ್ತರ !

ಚೀನಾದಲ್ಲಿ ಚಳಿಗಾಲದಲ್ಲಿ ಕೋವಿಡ್ ವೈರಸ್ ಸೋಂಕಿನ ಪ್ರಮಾಣ ವಿಪರೀತವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಸುಮಾರು 18% ಜನಸಂಖ್ಯೆಯ ಸುಮಾರು 24,80,00,000 ಮಿಲಿಯನ್ ಜನರು ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ವೈರಸ್‌ಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯ ನಿಮಿಷಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

China Corona Updates: 24.80 crore people in China are likely to be infected with Corona: Covid statistics will not be published anymore

Comments are closed.