Vijay Deverakonda : ವಿರಾಟ್​ ಕೊಹ್ಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ವಿಜಯ್​ ದೇವರಕೊಂಡ

ದುಬೈ : Vijay Deverakonda : ಟೀಂ ಇಂಡಿಯಾ ಮಾಜಿ ನಾಯಕನ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ನಾನು ವಿರಾಟ್​ ಕೊಹ್ಲಿ ಸಿನಿಮಾದಲ್ಲಿ ನಟಿಸಲು ಬಯಸುತ್ತೇನೆ ಎಂದು ನಟ ವಿಜಯ ದೇವರಕೊಂಡ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ. ಅರ್ಜುನ್​ ರೆಡ್ಡಿ, ಡಿಯರ್ ಕಾಮ್ರೆಡ್​ ಬಳಿಕ ಇದೀಗ ಲೈಗರ್​ ಸಿನಿಮಾ ಮೂಲಕ ವಿಜಯ್​ ದೇವರಕೊಂಡ ತೆರೆ ಮೇಲೆ ಅಪ್ಪಳಿಸಿದ್ದಾರೆ. ಸಿನಿಮಾ ಪ್ರಚಾರದ ನಡುವೆಯೇ ಟೀಂ ಇಂಡಿಯಾ ಹಾಗೂ ಪಾಕ್​ ನಡುವೆ ನಡೆದ ಏಷ್ಯಾ ಕಪ್​​ ಪಂದ್ಯಾವಳಿಯನ್ನು ವೀಕ್ಷಿಸಲು ದುಬೈಗೆ ಆಗಮಿಸಿದ್ದರು.


ಪಂದ್ಯ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿದ ವಿಜಯ್​ ದೇವರಕೊಂಡ ಕೊಹ್ಲಿ ಈ ಪಂದ್ಯದಲ್ಲಿ ಕನಿಷ್ಟ 50 ರನ್​ ಗಳಿಸೋದನ್ನು ನಾನು ನೋಡಬೇಕು ಎಂದು ಹೇಳಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 5 ವಿಕೆಟ್​ಗಳ ಅಂತರದಲ್ಲಿ ಸೋಲಿಸಿದೆ.


ಟೀಂ ಇಂಡಿಯಾದ ಯಾವ ಆಟಗಾರನ ಜೀವನಚರಿತ್ರೆಯ ಸಿನಿಮಾದಲ್ಲಿ ನೀವು ನಟಿಸಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್​ ದೇವರಕೊಂಡ, ಎಂ.ಎಸ್​ ಧೋನಿ ಜೀವನಚರಿತ್ರೆ ಆಧಾರಿತ ಸಿನಿಮಾ ಈಗಾಗಲೇ ಮೂಡಿ ಬಂದಾಗಿದೆ. ಹೀಗಾಗಿ ನಾನು ವಿರಾಟ್​ ಕೊಹ್ಲಿ ಜೀವನಾಧಾರಿತ ಸಿನಿಮಾ ತಯಾರಾದರೆ ಅದಕ್ಕೆ ನಾಯಕನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.


ವಿಜಯ್​ ದೇವರಕೊಂಡ ಲೈಗರ್​ ಸಿನಿಮಾದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ. ಅನನ್ಯಾ ಪಾಂಡೆ ಜೊತೆ ವಿಜಯ್​ ದೇವರಕೊಂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಮಂದಿರಗಳಲ್ಲಿ ಲೈಗರ್​ ಸಿನಿಮಾ ನೀರಸ ಪ್ರದರ್ಶನ ಕಂಡಿದ್ದು ಬಾಲಿವುಡ್​ನ ಮತ್ತೊಂದು ಫ್ಲಾಪ್​ ಸಿನಿಮಾದ ಸಾಲಿಗೆ ಸೇರುವ ನಿರೀಕ್ಷೆಯಿದೆ.

ಇದನ್ನು ಓದಿ : ಕೇವಲ ರೂ.799ಕ್ಕೆ One Plus Nord wired earphone

ಇದನ್ನೂ ಓದಿ : Ghulam Nabi Azad : ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿ ರಾಹುಲ್​ ಗಾಂಧಿಗಿಲ್ಲ:ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್​ ಮೊದಲ ಪ್ರತಿಕ್ರಿಯೆ

Vijay Deverakonda attends India vs Pakistan match, says ‘interested in doing Virat Kohli biopic’

Comments are closed.