Mantri Square Mall Lock : 27 ಕೋಟಿ ಆಸ್ತಿ ತೆರಿಗೆ ಬಾಕಿ : ಮಂತ್ರಿ ಮಾಲ್ ಗೆ ಮತ್ತೊಮ್ಮೆ ಬೀಗ ಭಾಗ್ಯ

ಬೆಂಗಳೂರು: ಪ್ರತಿಷ್ಠಿತ ಮಾಲ್ ಖ್ಯಾತಿಯ ಮಂತ್ರಿ ಮಾಲ್ ಗೆ ( Mantri Square Mall Lock )ಮತ್ತೊಮ್ಮೆ ಬೀಗ ಬಿದ್ದಿದೆ.‌ಕಳೆದ ಒಂದೂವರೆ ವರ್ಷದಿಂದ ತೆರಿಗೆ ಕಣ್ಣಮುಚ್ಚಾಲೇ ಆಡುತ್ತಲೇ ಬಂದಿರುವ ಮಂತ್ರಿ ಮಾಲ್ ಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಈಗಾಗಲೇ ಎರಡು ಭಾರಿ ಬೀಗ ಹಾಕಿದ್ದರೂ ಬುದ್ಧಿ ಕಲಿಯದ ಮಾಲ್ ಆಡಳಿತ ಮಂಡಳಿ ಮತ್ತೆ ಬರೋಬ್ಬರಿ 27 ಕೋಟಿ ತೆರಿಗೆ ಬಾಕಿ ( property tax pending ) ಉಳಿಸಿಕೊಂಡಿದ್ದು ಬಿಬಿಎಂಪಿ ಮತ್ತೊಮ್ಮೆ ಬೀಗಮುದ್ರೆ ಹಾಕಿದೆ.

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಪಿಂಗ್ ಐಕಾನ್ ಎನ್ನಿಸಿರೋ ಮಂತ್ರಿ ಮಾಲ್ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿಗೆ ತೆರಿಗೆ ಪಾವತಿಸದೇ ಕಾಲಾವಕಾಶ ಕೇಳುತ್ತಲೇ ಬಂದಿದೆ. ಹಲವಾರು ಭಾರಿ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಳ್ಳದ ಮಂತ್ರಿ ಮಾಲ್ ಬೀಗ ಹಾಕಿದಾಗ ಅಲ್ಪ ಸ್ವಲ್ಪ ಹಣ ಪಾವತಿಸಿ ಸಮಯಾವಕಾಶ ಕೇಳೋದು ಮತ್ತೆ ಹಣ ಕಟ್ಟದೇ ಮಾತು ತಪ್ಪೋದನ್ನು ಅಭ್ಯಾಸ ಮಾಡಿಕೊಂಡು ಬಂದಿದೆ.

ಕಳೆದ ಅಕ್ಟೋಬರ್ ನಲ್ಲಿ ಬರೋಬ್ಬರಿ 36 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿಸಬೇಕಿದ್ದ ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ ಹಾಕಿತ್ತು. ಈ ವೇಳೆ ಐದು ಕೋಟಿ ತೆರಿಗೆ ಪಾವತಿಸಿದ್ದ ಮಂತ್ರಿ ಮಾಲ್ ಅಕ್ಟೋಬರ್ 31 ರವರೆಗೆ ಕಾಲಾವಕಾಶ ಕೋರಿತ್ತು. ಬಳಿಕವೂ ಆಸ್ತಿ ತೆರಿಗೆ ಪಾವತಿಸಲು ಬಿಬಿಎಂಪಿ ಮಂತ್ರಿಗೆ ಗೆ ನವೆಂಬರ್ 15 ರವರೆಗೆ ಅವಕಾಶ ನೀಡಿತ್ತು. ಆದರೂ ತೆರಿಗೆ ಪಾವತಿಯಾಗಿರಲಿಲ್ಲ.‌ನೋಟಿಸ್ ಗೂ ಕ್ಯಾರೇ ಎನ್ನದ ಆಡಳಿತ ಮಂಡಳಿ ತಮಗೇನೂ ಸಂಬಂಧವೇ ಇಲ್ಲ ಅನ್ನೋ ಹಾಗೇ ವ್ಯಾಪಾರ ಮಾಡಿಕೊಂಡಿತ್ತು.

ಈ ಕಳ್ಳಾಟ ನೋಡಿ ಬೇಸತ್ತ ಬಿಬಿಎಂಪಿ ಈ ಭಾರಿ ಖಡಕ್ ಸಂದೇಶದೊಂದಿಗೆ ಮತ್ತೊಮ್ಮೆ ಬೀಗ ಹಾಕಿದ್ದು ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಿ ಬಾಗಿಲು ತೆಗೆಯುವಂತೆ ಸೂಚನೆ ನೀಡಿದೆ. ಇನ್ನು ಬಿಬಿಎಂಪಿ ಮಂತ್ರಿ ಮಾಲ್ ಆಗಾಗ ಕಾಲಾವಕಾಶ ನೀಡುತ್ತಲೇ ಬಂದಿರೋದಿಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ.‌ಜನಸಾಮಾನ್ಯರು ಆಸ್ತಿ ತೆರಿಗೆ ಕಟ್ಟದಿದ್ದರೇ ದಂಡ ಹಾಗೂ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಆದರೆ ಮಂತ್ರಿ ಮಾಲ್ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ ಬಿಬಿಎಂಪಿ ಮೃದು ಧೋರಣೆ ತೋರುತ್ತಿರುವುದ್ಯಾಕೆ ಎಂದು ಜನರು ಪ್ರಶ್ನಿಸಿದ್ದಾರೆ.

ಈ ವರ್ಷ ಮಾತ್ರವಲ್ಲ ಮಂತ್ರಿ ಮಾಲ್ 2018-19 ನೇ ಅವಧಿಯಲ್ಲಿ 6 ಕೋಟಿ 77 ಲಕ್ಷ ರೂಪಾಯಿ, 2019-20 ರಲ್ಲಿ 6 ಕೋಟಿ 77 ಲಕ್ಷ ರೂಪಾಯಿ, 2020-21 ರಲ್ಲಿ 6 ಕೋಟಿ 77 ಲಕ್ಷ ರೂಪಾಯಿ ಹಾಗೂ 2021 -22 ರಲ್ಲಿ 6 ಕೋಟಿ 88 ಲಕ್ಷ ರೂಪಾಯಿ ಬಾಕಿ ಸೇರಿ ಒಟ್ಟು 27 ಕೋಟಿಗೂ ಅಧಿಕ‌ಮೊತ್ತದ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ :‌ ಹಾಲು ಕೊಡದೇ ಸತಾಯಿಸುವ ಹಸುವನ್ನು ಠಾಣೆಗೆ ಕರೆಸಿ: ಪೊಲೀಸರ ಮೊರೆ ಹೋದ ಶಿವಮೊಗ್ಗದ ರೈತ

ಇದನ್ನೂ ಓದಿ : ಮಂತ್ರಿಮಾಲ್ ಲಾಕೌಟ್….! ಐಷಾರಾಮಿ ಮಾಲ್ ಬೀಗ ಹಾಕಿದ ಬಿಬಿಎಂಪಿ…!!

( 27 crores worth of property tax pending, Mantri Square Mall Lock again )

Comments are closed.