ದಾದಾ ಹುಟ್ಟುಹಬ್ಬಕ್ಕೂ ಮುನ್ನವೇ ಟ್ವಿಟ್ಟರ್ ಟ್ರೆಂಡ್

0

ಚಂದನವನದ ಯಜಮಾನ್ರು, ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನಾಚರಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ದೇವರ ಪ್ರತಿರೂಪದಲ್ಲಿ ಕಾಣುವ ವಿಷ್ಣುದಾದಾ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಪ್ರತೀ ವರ್ಷವೂ ವಿಶಿಷ್ಟವಾಗಿ ಆಚರಿಸುತ್ತಲೇ ಬಂದಿದ್ದಾರೆ. ಇದೀಗ ಹುಟ್ಟುಹಬ್ಬಕ್ಕೂ 50 ದಿನಗಳ ಮುಂಚೆ ಅಭಿಮಾನಿಗಳೆಲ್ಲಾ ಸೇರಿ ಟ್ವಿಟ್ಟರ್ ಟ್ರೆಂಡ್ ಮಾಡಿ ದೇಶಾದ್ಯಂತ ಸದ್ದು ಮಾಡ್ತಿದ್ದಾರೆ.

50DaysForDrVishnuBday ಟ್ಯಾಗ್ ಮೂಲಕ ಎಲ್ಲಾ ವಿಷ್ಣು ದಾದಾ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಮೇಲಿನ ಅಭಿಮಾನವನ್ನು ಟ್ವಿಟ್ ಗಳ ಮೂಲಕ ಅರ್ಪಿಸಿದ್ದಾರೆ.

ಕೋಟಿಗೊಬ್ಬನ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಈ ತರದ ಸಂಭ್ರಮಾಚರಣೆ ಮಾಡುತ್ತಿರೋದು ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸ ತಂದಿದೆ. ಅಭಿಮಾನಿಗಳು ಮಾತ್ರವಲ್ಲ ಸಾಕಷ್ಟು ಸೆಲೆಬ್ರೆಟಿಗಳು ಕೂಡ ಟ್ವಿಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಸ್ಟಾರ್ ಗಳು ವಿಷ್ಣು ಸರ್ ಬಗೆಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದು ವಿಷ್ಣು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ತಂದಿದೆ.

ಅಭಿನಯ ಭಾರ್ಗವನ ಸಾಧನೆಗೆ ಅಭಿಮಾನಿಗಳ ಈ ಅಭಿಮಾನ ನಿಜಕ್ಕೂ ಅವಿಸ್ಮರಣೀಯ. ಕನ್ನಡ. ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ನಮ್ ಜೊತೆ ಇಲ್ಲದಿದ್ದರೂ ಅವರ ಹೆಸರು ಎಂದಿಗೂ ಅಜರಾಮರ.

ವಿಷ್ಣುಸೇನಾ ಸಮಿತಿ ಟ್ವಿಟ್ಟರ್ ಟ್ರೆಂಡ್ ಆಯೋಜಿಸಿದ್ದು, ಹುಟ್ಟುಹಬ್ಬಕ್ಕೂ ಸಾಕಷ್ಟು ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು ನಿರ್ಧರಿಸಲಾಗಿದೆ.

Leave A Reply

Your email address will not be published.