ಜನಪ್ರಿಯ ಕಿರುತೆರೆ ಶೋದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಕಳೆದ ಸುಮಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳೆ ಹೆಚ್ಚು ಜನಮನ್ನಣೆ ಪಡೆಯುತ್ತಿದೆ. ಅದರಲ್ಲೂ ಇತ್ತೀಚೆಗೆ ಕಿರುತೆರೆಯಲ್ಲಿ ಬಿಗ್​ ಬಾಸ್​, ರಾಜಾ ರಾಣಿ, ಜೋಡಿ ನಂ.1, ಸೂಪರ್‌ ಕ್ವೀನ್‌, ಇಸ್ಮಾರ್ಟ್ ಜೋಡಿ, ಸರಿಗಮಪ ಹೀಗೆ ಎಲ್ಲಾ ಚಾನೆಲ್​ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ನಡೆಸುತ್ತಾ ಬಂದಿದ್ದಾರೆ. ಈ ಎಲ್ಲದರ ನಡುವೆ ಇದೀಗ ಕರುನಾಡಿನಲ್ಲಿ ಮನೆ ಮಾತಾಗಿದ್ದ ವೀಕೆಂಡ್​ ವಿತ್​ ರಮೇಶ್​ (Weekend with Ramesh season 5) ಕಾರ್ಯಕ್ರಮ ಮತ್ತೊಮ್ಮೆ ಶುರುವಾಗುತ್ತಿದ್ದು, ಇದೀಗ ವೀಕೆಂಡ್​ ವಿತ್​ ರಮೇಶ್ ಸೀಸನ್‌ 5 ಮೊದಲ ಗೆಸ್ಟ್‌ ಆಗಿ ಸ್ಯಾಂಡಲ್‌ ವುಡ್‌ ಮೋಹಕತಾರೆ ನಟಿ ರಮ್ಯಾ ಬರಲಿದ್ದಾರೆ ಎಂದು ಜೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಪ್ರೊಮೋ ವಿಡಿಯೋದಲ್ಲಿ. “ವೆಲಕಮ್‌ ಟೂ ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5. ಇವತ್ತಿನ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ ಮೋಹಕತಾರೆ ರಮ್ಯಾ” ಎಂದು ಪ್ರಾರಂಭಿಸಿದ್ದಾರೆ. ಅದರಲ್ಲಿ ನಟಿ ರಮ್ಯಾ ಅವರ ಆಪ್ತರು ಭಾಗಿಯಾಗಿದ್ದಾರೆ. ಹಾಗೆಯೇ ನಟ ರಮೇಶ್‌ಯೊಂದಿಗೆ ಆಟಗಳನ್ನು ಆಡಿದ್ದಾರೆ. ಆದರೆ ಕೊನೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ವಿಷಯ ಬಂದಾಗ, ಮೌನವಾಗಿ ಕಣ್ಣಿರಿಟ್ಟಿದ್ದಾರೆ. ಅದನ್ನು ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್​ ಇದೀಗ ಮತ್ತೊಮ್ಮೆ ವೀಕೆಂಟ್​ ಟೆಂಟ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

2019ರ ಜುಲೈ ತಿಂಗಳಲ್ಲಿ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಕೊನೆಗೊಂಡಿತ್ತು. ಇದಾದ ಬಳಿಕ 3 ವರ್ಷಗಳೇ ಕಳೆದರೂ ಹೊಸ ಸೀಸನ್​ ಮಾತ್ರ ಆರಂಭಗೊಂಡಿರಲಿಲ್ಲ. ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಬಳಿಯಲ್ಲಿ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರು ಕೂಡ. ಇದೀಗ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಮತ್ತೊಮ್ಮೆ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ : ಬಾಲಿವುಡ್‌ ನಟ ಅಜಯ್ ದೇವಗನ್ ಅಭಿನಯದ ‘ಸಿಂಗಮ್ 3’ ರಿಲೀಸ್‌ ಡೇಟ್‌ ಫಿಕ್ಸ್

ಇದನ್ನೂ ಓದಿ : “ರೈಸ್‌ ಅಪ್‌ ಬೇಬಿ” ಎಂದಿದ್ಯಾಕೆ ? ಕೆಜಿಎಫ್ ರಾಕಿ ಭಾಯ್

ಇದನ್ನೂ ಓದಿ : ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ ವಿವಾದಿತ ಟ್ವೀಟ್ ವೈರಲ್ : ನಟ ಚೇತನ್ ಕುಮಾರ್ ಅರೆಸ್ಟ್

ಈ ಕಾರ್ಯಕ್ರಮ ಸದ್ಯದಲ್ಲೇ ಶುರುವಾಗಲಿದೆ ಎನ್ನುವ ವಿಷಯ ತಿಳಿದ ನೆಟ್ಟಿಗರಿಗೆ ಈ ಬಾರಿಯ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದೇ ತಡ ಅನೇಕರ ಹೆಸರನ್ನು ಕಮೆಂಟ್​ ಬಾಕ್ಸಿನಲ್ಲಿ ಬರೆಯಲಾಗಿದೆ. ಗವಿ ಮಠದ ಸ್ವಾಮೀಜಿಗಳು , ರಾಹುಲ್​ ದ್ರಾವಿಡ್​, ಬೈರಪ್ಪ, ಯಡಿಯೂರಪ್ಪ, ತಾರಾ, ಹಂಸಲೇಖ, ರಿಷಬ್‌ ಶೆಟ್ಟಿ, ಪ್ರಭುದೇವ ಹೀಗೆ ನೆಟ್ಟಿಗರ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇತ್ತು. ಕೊನೆಗೂ ಸಾಧಕರ ಸೀಟಿಗೆ ಈ ಸೀಸನ್‌ನ ಮೊದಲ ಗೆಸ್ಟ್‌ ಆಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಆಯ್ಕೆ ಆಗಿದ್ದಾರೆ.

Weekend with Ramesh season 5 : Actress Ramya gets emotional remembering Appu

Comments are closed.