Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

ಬೆಂಗಳೂರು: ಟೀಮ್ ಇಂಡಿಯಾ ಅಂದ್ರೆ ಅದು ಒಗ್ಗಟ್ಟಿನ ಮನೆ. ಎಲ್ಲರೂ ಒಂದೇ ಮನೆಯ ಸದಸ್ಯರಂತೆ, ಅಣ್ಣ-ತಮ್ಮಂದಿರಂತೆ ಇರೋದೇ ಟೀಮ್ ಇಂಡಿಯಾ ಸ್ಪೆಷಾಲಿಟಿ. ಆಟಗಾರರ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳು ಬಂದ್ರೂ, ತಂಡಕ್ಕಾಗಿ ಒಂದಾಗಿ ಒಗ್ಗಟ್ಟಿನಿಂದ ಆಡೋದೇ ಟೀಮ್ ಇಂಡಿಯಾ (Indian Cricket Team) ವಿಶೇಷತೆ. ಇಷ್ಟು ದಿನ ಒಗ್ಗಟ್ಟಿನ ಮನೆಯಾಗಿದ್ದ ಟೀಮ್ ಇಂಡಿಯಾ ಈಗ ಛಿದ್ರ ಛಿದ್ರವಾಗಿದೆ. ಸ್ನೇಹಿತರಾಗಿದ್ದ ಆಟಗಾರರೇ ಪರಸ್ಪರ ದುಷ್ಮನ್’ಗಳಾಗಲಿದ್ದಾರೆ. ಇಷ್ಟು ದಿನ ಒಂದಾಗಿ ಒಂದೇ ತಂಡಕ್ಕೆ ಆಡಿದವರು ಪರಸ್ಪರ ಎದುರಾಳಿಗಳಾಗಿ ಸೆಣಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಕೊನೆಯ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದದ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ 1-2ರ ಅಂತರದಲ್ಲಿ ಸರಣಿ ಸೋತಿದೆ. ಇಷ್ಟು ದಿನ ಒಂದೇ ತಂಡದಲ್ಲಿ ಒಗ್ಗಟ್ಟಾಗಿದ್ದ ಟೀಮ್ ಇಂಡಿಯಾ ಆಟಗಾರರೆಲ್ಲಾ ಐಪಿಎಲ್ ಆಡಲು ಸಜ್ಜಾಗುತ್ತಿದ್ದು, ಬೇರೆ ಬೇರೆ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಒಂದು ತಂಡವಾಗಿ ಆಡಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದವರೆಲ್ಲಾ ಇನ್ನು ಎರಡು ತಿಂಗಳು ಪರಸ್ಪರ ವಿರೋಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕಾರಣ ಐಪಿಎಲ್ (IPL 2023).

ಐಪಿಎಲ್-16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಆರಂಭವಾಗಲಿದೆ. ಮಾರ್ಚ್ 31ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (Gujarat Titans) ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ಸಾರಥ್ಯ ವಹಿಸಲಿದ್ದಾರೆ. ಟೀಮ್ ಇಂಡಿಯಾದ ಮತ್ತೊಬ್ಬ ಸ್ಟಾರ್, ಕನ್ನಡಿಗ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.

ಇದನ್ನೂ ಓದಿ : Dehli Capitals : ಐಪಿಎಲ್‌ನಲ್ಲಿ ಇಂಗ್ಲೆಂಡ್ ಪರ ಆಡಲಿದ್ದಾರೆ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್

ಇದನ್ನೂ ಓದಿ : IPL 2023 rule change : ಐಪಿಎಲ್ ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ; ಟಾಸ್ ಬಳಿಕ ಪ್ಲೇಯಿಂಗ್ XI ಬದಲಿಸಲು ಅವಕಾಶ

ಇದನ್ನೂ ಓದಿ : IND v AUS 3rd ODI: ಹಾರ್ದಿಕ್‌ ಪಾಂಡ್ಯ ವಿರೋಚಿತ ಆಟ ವ್ಯರ್ಥ, ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸತತ 16ನೇ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ. ರವೀಂದ್ರ ಜಡೇಜ ಚೆನ್ನೈ ಸೂಪರ್ ಕಿಂಗ್ಸ್ ಪರ, ಮೊಹಮ್ಮದ್ ಶಮಿ ಮತ್ತು ಶುಭಮನ್ ಗಿಲ್ ಗುಜರಾತ್ ಟೈಟನ್ಸ್ ಪರ, ಮೊಹಮ್ಮದ್ ಸಿರಾಜ್ ಆರ್’ಸಿಬಿ ಪರ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಪರ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ಪರ, ಜೈದೇವ್ ಉನಾದ್ಕಟ್ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.

Indian Cricket Team: Team India’s unity is shattered, all friends are now enemies.

Comments are closed.