Rashmika : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು

ಕನ್ನಡದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ(Rashmika Mandanna) ಈಗ ಬಹುಭಾಷಾ ನಟಿ. ಸಿನಿಮಾದ ಜೊತೆ ಜೊತೆಗೆ ಜಾಹೀರಾತಿ ನಲ್ಲೂ ಬ್ಯುಸಿಯಾಗಿರೋ ನಟಿ ನನಗೆ ಶರ್ಟ್ ಬಿಚ್ಚೋ ಹುಡುಗರು ಇಷ್ಟ ಇಲ್ಲ ಅನ್ನೋ ಮೂಲಕ ಪಡ್ಡೆ ಹೈಕಳ ಮನಸ್ಸು ನೋಯಿಸಿದ್ದಾರೆ.

ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿ ವುಡ್, ಟಾಲಿವುಡ್ ದಾಟಿ ಈಗ ಬಾಲಿವುಡ್ ಅಂಗಳ ಸೇರಿರೋ ರಶ್ಮಿಕಾ ಈಗ ಕನ್ನಡದ ಪ್ರೇಕ್ಷಕರಿಗೂ ಸಿಗುತ್ತಿಲ್ಲ. ಪೊಗರು ಸಿನಿಮಾದ ಬಳಿಕ ರಶ್ಮಿಕಾ ಸ್ಯಾಂಡಲ್ ವುಡ್ ಕಡೆ ಮುಖಮಾಡಿಲ್ಲ. ಅಷ್ಟೇ ಅಲ್ಲ ಕನ್ನಡದ ಯಾವ ವಿಚಾರಕ್ಕೂ ರಶ್ಮಿಕಾ ಸ್ಪಂದಿಸೋದು ಇಲ್ಲ.

ಇಂತಿಪ್ಪ ರಶ್ಮಿಕಾ ತಮ್ಮ ಜಾಹೀರಾತೊಂದಕ್ಕೆ ಸಂಬಂಧಿಸಿದ ಶೋನಲ್ಲಿ ಶರ್ಟ್ ಬಿಚ್ಚೋ ಹುಡುಗರ ಕಂಡ್ರೇ ನನಗೆ ಇಷ್ಟ ಇಲ್ಲ ಎಂದಿದ್ದಾರೆ. ಆ ಮೂಲಕ ಹುಡುಗಿಯರನ್ನು ಇಂಪ್ರೆಸ್ ಮಾಡೋಕೆ ಅಂತ ಜಿಮ್ ನಲ್ಲಿ ಗಂಟೆಗಟ್ಟಲೇ ಬೆವರು ಸುರಿಸೋ ಹುಡುಗರಿಗೆ ನಿರಾಸೆ ಮಾಡಿದ್ದಾರೆ. ರಶ್ಮಿಕಾ ಟೆಂಡರ್ ಎಂಬ ಡೇಟಿಂಗ್ ಆ್ಯಪ್ ನ ಜಾಹೀರಾತಿನಲ್ಲಿ ನಟಿಸಿದ್ದಾರೆ.ಈ ಡೇಟಿಂಗ್ ಆ್ಯಪ್ ಆಯೋಜಿಸಿದ್ದ ಟಾಕ್ ಶೋದಲ್ಲಿ ಭಾಗವಹಿಸಿದ್ದ ರಶ್ಮಿಕಾ ಗೆ ಡೇಟಿಂಗ್ ಬಗ್ಗೆ ಹಲವು ಪ್ರಶ್ನೆ ಕೇಳಲಾಗಿತ್ತು.

ಡೇಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಜಾಣತನದಿಂದ ಉತ್ತರಿಸಿದ ರಶ್ಮಿಕಾ (Rashmika) ಹುಡುಗರು ದೇಹದಂಡಿಸಿ ತಮ್ಮ ಬಾಡಿ ಯನ್ನು ಫೈನ್ ಆ್ಯಂಡ್ ಫಿಟ್ ಆಗಿ ಇಟ್ಟುಕೊಳ್ಳುವುದನ್ನು ನಾನು ಅಭಿನಂದಿಸುತ್ತೇನೆ.ಆದರೆ ಅವರು ಡೇಟಿಂಗ್ ಆ್ಯಪ್ ಗಳಲ್ಲಿ ಯಾಕೆ ಶರ್ಟ್ ಬಿಚ್ಚಿದ ಪೋಟೋ ಹಾಕುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.

ಮಾತ್ರವಲ್ಲ ಈ ವಿಚಾರದಲ್ಲಿ ನಾನು ಹಳೆ ಕಾಲದವರಂತೆ ಯೋಚಿಸುತ್ತೇವೆ ಎಂದು ರಶ್ಮಿಕಾ (Rashmika Mandanna)ಹೇಳಿದ್ದಾರೆ. ಇದು ವರ್ಕೌಟ್ ಮಾಡೋ ಹುಡುಗರ ಕನಸಿಗೆ ತಣ್ಣೀರು ಬಿದ್ದಂತಾಗಿದೆ. ಬೋರ್ಡಿಂಗ್ ಸ್ಕೂಲ್ ನಲ್ಲಿ ಓದಿದ ನನಗೆ ಹುಡುಗರನ್ನು ನೇರವಾಗಿ ನೋಡಿದ್ರೇ ಅದನ್ನೇ ಡೇಟಿಂಗ್ ಎನ್ನುತ್ತಿದ್ದರು ಎಂದು ರಶ್ಮಿಕಾ ತಮ್ಮ ಸ್ಕೂಲ್ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ನಿಮಗಿಂತ ಚಿಕ್ಕ ವಯಸ್ಸಿನವರ ಜೊತೆ ಡೇಟಿಂಗ್ ಸಿದ್ಧವಿದ್ದೀರಾ ಎಂಬ ಪ್ರಶ್ನೆಗೆ ಬೋಲ್ಡ್ ಉತ್ತರ ನೀಡಿದ ರಶ್ಮಿಕಾ ಡೇಟಿಂಗ್ ಗೆ ಮನಸ್ಸು ಮತ್ತು ವ್ಯಕ್ತಿತ್ವ ಮುಖ್ಯ. ವಯಸ್ಸು ಮುಖ್ಯವಲ್ಲ ಎಂದಿದ್ದಾರೆ.

ಸದ್ಯ ರಶ್ಮಿಕಾ ಅಪ್ಪಟ ಗ್ರಾಮೀಣ ಲುಕ್ ನಲ್ಲಿ ಕಾಣಿಸಿಕೊಂಡಿರೋ ತೆಲುಗಿನ ಪುಷ್ಪ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು ಪುಷ್ಪ 2 ನಲ್ಲೂ ರಶ್ಮಿಕಾ ನಟಿಸಲಿದ್ದಾರೆ.

ಇದನ್ನೂ ಓದಿ : ಚುಟು ಚುಟು ಬೆಡಗಿಗೆ ಜೊತೆಯಾದ ಶರಣ್ : ಸದ್ಯದಲ್ಲೇ ಅವತಾರ ಪುರುಷನ ಆಟ

ಇದನ್ನೂ ಓದಿ : ಅಪ್ರಾಪ್ತ ವಿವಾಹಿತ ಬಾಲಕಿಯ ಮೇಲೆ 400 ಜನರಿಂದ ಅತ್ಯಾಚಾರ !

( Why boys wear shirts, Rashmika Mandanna questioned the boys)

Comments are closed.